ರಜತಕ್ಕೆ ಮುತ್ತಿಟ್ಟ ಕಿಡಂಬಿ ಶ್ರೀಕಾಂತ್

 ನವದೆಹಲಿ ಡಿ 20 :BWF ವಿಶ್ವ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಆಟಗಾರ ಕಿಡಂಬಿ  ಶ್ರೀಕಾಂತ್‌ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ಸಿಂಗಾಪುರದ ಆಟಗಾರ ಲೋಹ್ ಕೀನ್ ಯೂ ವಿರುದ್ಧ ಸೋಲುವುದರ ಮೂಲಕ ಟೂರ್ನಿಯಲ್ಲಿನ ತಮ್ಮ ಓಟವನ್ನು ಅಂತ್ಯಗೊಳಿಸಿ ರಜತ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ಭಾರತದ ಏಕೈಕ ಪುರುಷ ಆಟಗಾರ ಎಂಬ ಖ್ಯಾತಿಗೆ ಕಿಡಂಬಿ ಶ್ರೀಕಾಂತ್ ಪಾತ್ರರಾಗಿದ್ದಾರೆ. ಹೌದು, ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಇತಿಹಾಸದಲ್ಲಿ ಭಾರತದ ಯಾವುದೇ ಆಟಗಾರ ಕೂಡ ರಜತ ಪದಕವನ್ನು ತನ್ನದಾಗಿಸಿಕೊಂಡರು ಇರಲಿಲ್ಲ. ಆದರೆ ಇದೀಗ ಕಿಡಂಬಿ ಶ್ರೀಕಾಂತ್ ಈ ಸಾಧನೆಯನ್ನು ಮಾಡುವುದರ ಮೂಲಕ ಮೊದಲಿಗ ಎನಿಸಿಕೊಂಡಿದ್ದಾರೆ.

ಈ ಮಹತ್ವದ ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ಸಿಂಗಾಪುರದ ಆಟಗಾರ ಲೋಹ್ ಕೀನ್ ಯೂ ವಿರುದ್ಧ 15-21 ಮತ್ತು 20-22 ಅಂತರದ ಸೆಟ್‌ಗಳಿಂದ ಸೋಲುಂಡರು. ಈ ಮೂಲಕ 43 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಕಿಡಂಬಿ ಶ್ರೀಕಾಂತ್ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇನ್ನು ಭಾರತದ ಟೆನಿಸ್ ಆಟಗಾರ ಕಿಡಂಬಿ ಶ್ರೀಕಾಂತ್ ಮತ್ತು ಸಿಂಗಾಪುರದ ಆಟಗಾರ ಲೋಹ್ ಕೀನ್ ಯೂ ನಡುವೆ ನಡೆದ ಈ ಪಂದ್ಯದ ಆರಂಭದಲ್ಲಿ ಕಿಡಂಬಿ ಶ್ರೀಕಾಂತ್ ಮೇಲುಗೈ ಸಾಧಿಸಿದ್ದರು. ಮೊದಲ ಸುತ್ತಿನ ಆಟದಲ್ಲಿ 9-3 ಸೆಟ್ ಮುನ್ನಡೆಯನ್ನು ಸಾಧಿಸಿದ್ದ ಕಿಡಂಬಿ ಶ್ರೀಕಾಂತ್ ಎದುರಾಳಿ ಆಟಗಾರ ಲೋಹ್ ಕೀನ್ ಯೂ ಉತ್ತಮವಾಗಿ ಕಮ್ ಬ್ಯಾಕ್ ಮಾಡಿದ ಕಾರಣ ಆ ಸುತ್ತನ್ನು ಕೇವಲ 16 ನಿಮಿಷಗಳಲ್ಲಿಯೇ ಕಳೆದುಕೊಂಡರು. ಹಾಗೂ ಆ ಸುತ್ತಿನಲ್ಲಿ ಲೋಹ್ ಕೀನ್ ಯೂ 21-15 ಸೆಟ್‌ಗಳ ಅಂತರದಲ್ಲಿ ಕಿಡಂಬಿ ಶ್ರೀಕಾಂತ್ ಅವರಿಗೆ ಸೋಲಿನ ರುಚಿ ತೋರಿಸಿದರು. ಇನ್ನು ಎರಡನೇ ಸುತ್ತಿನಲ್ಲಿ ಕಿಡಂಬಿ ಶ್ರೀಕಾಂತ್ ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೆ ಎದುರಾಳಿ ಆಟಗಾರ ಲೋಹ್ ಕೀನ್ ಯೂ ಕೊಂಚವೂ ತಗ್ಗದೇ ಪ್ರಬಲವಾದ ಪ್ರತ್ಯುತ್ತರವನ್ನು ಸೆಟ್ ಉದ್ದಕ್ಕೂ ನೀಡಿದ ಕಾರಣ ಗೆಲುವು ಕಿಡಂಬಿ ಶ್ರೀಕಾಂತ್ ಅವರ ಪಾಲಿಗೆ ಒಲಿಯಲಿಲ್ಲ. ಈ ದ್ವಿತೀಯ ಸುತ್ತಿನಲ್ಲಿ ಲೋಹ್ ಕೀನ್ ಯೂ 22 – 20 ಸೆಟ್‌ಗಳ ಅಂತರದಲ್ಲಿ ಕಿಡಂಬಿ ಶ್ರೀಕಾಂತ್ ವಿರುದ್ಧ ಗೆಲುವು ಸಾಧಿಸಿದರು.





Exit mobile version