Kidney Stone Problem: ಬಿಸಿಲಿಗೆ ಬೆವರು ಇಳಿಯುತ್ತಿರುವುದರಿಂದ ನೀರಿನಂಶದ ಕೊರತೆಯಿಂದಾಗಿ ಮೂತ್ರದಲ್ಲಿ (Kidney Problem Due To Temperature) ಸೋಂಕು ಹಾಗೂ ಕಿಡ್ನಿ ಸ್ಟೋನ್
(Kidney Stone) ಪ್ರಕರಣಗಳು ಮೊದಲಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.ತಾಪಮಾನ ಏರಿಕೆಯು ಜನರಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿಸಿದೆ. ವಿಶೇಷವಾಗಿ
20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಉಂಟಾಗಲು ಪ್ರಮುಖ ಕಾರಣವೆಂದರೆ ದೇಹದಲ್ಲಿನ ನಿರ್ಜಲೀಕರಣ.
ಮನುಷ್ಯನ ದೇಹಕ್ಕೆ ದಿನವೊಂದಕ್ಕೆ 2ರಿಂದ 3 ಲೀ. ನೀರನ್ನು ಕುಡಿಯಬೇಕಿದೆ. ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವ ಜತೆಗೆ ದೇಹದಲ್ಲಿರುವ ನೀರಿನ ಅಂಶವನ್ನು ಕಸಿದುಕೊಳ್ಳುತ್ತದೆ. ಇದು ನೇರವಾಗಿ
ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್ಗೆ ಕಾರಣವಾಗುತ್ತಿದೆ.ಮೂತ್ರದಿಂದ ಫಿಲ್ಟರ್ ಮಾಡಲಾದ ಕ್ಯಾಲ್ಸಿಯಂ (Calcium) ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್ ರೂಪುಗೊಳ್ಳುತ್ತವೆ. ವಿಶೇಷವಾಗಿ
ಮಹಿಳೆಯರಲ್ಲಿಉರಿ ಮೂತ್ರದ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಆದರೆ ಪುರುಷರಲ್ಲಿ (Kidney Problem Due To Temperature) ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತದೆ.
ಮೂತ್ರವನ್ನು ವಿಸರ್ಜನೆಯನ್ನು ತಡೆಯಬಾರದು. ಜತೆಗೆ ದಿನಕ್ಕೆ 2ರಿಂದ 3 ಲೀ.ನಷ್ಟು ನೀರು ಕುಡಿದರೆ ಕಿಡ್ನಿ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಮಧ್ಯ ವಯಸ್ಕರಲ್ಲಿ ಕ್ಯಾಲ್ಸಿಯಂ ಶೇಖರಣೆಯಿಂದಾಗಿ ಕಿಡ್ನಿ
ಸ್ಟೋನ್ ಉಂಟಾಗುತ್ತವೆ. ಇತ್ತೀಚೆಗೆ ಯುವ ಸಮುದಾಯದಲ್ಲಿರುವ ಸ್ಥೂಲಕಾಯ ಸೇರಿ ಜೀವನಶೈಲಿ ಕಾರಣಗಳಿಂದ ಅವರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದೆ. ಹಾಗಾಗಿ ಈ ಸಲ ಸಾಮಾನ್ಯ ಅವಧಿಗಿಂತ
ಬೇಸಿಗೆಯಲ್ಲಿ ಶೇ.40 ರಷ್ಟು ಪ್ರಕರಣ ಹೆಚ್ಚಾಗಿದೆ.
ದೇಶದಲ್ಲಿ ವರ್ಷಕ್ಕೆ 10 ರಿಂದ 20 ಲಕ್ಷ ಕಿಡ್ನಿ ಸ್ಟೋನ್ ಪ್ರಕರಣ ಪತ್ತೆಯಾಗುತ್ತಿವೆ.ಹೆಚ್ಚಿನ ಪ್ರೋಟೀನ್, ಉಪ್ಪು ಮತ್ತು ಸಕ್ಕರೆ ಸೇವನೆ ಕಿಡ್ನಿ ಸ್ಟೋನ್ಗೆ ಕಾರಣವಾಗುತ್ತದೆ. ಹಾಗಾಗಿ ಬಿಸಿಲಿನ (Summer) ಝಳ
ಹೆಚ್ಚಾದಂತೆ ನೀರಿನ ಸೇವನೆಯು ಹೆಚ್ಚಾಗಬೇಕು ಎಂಬುದು ವೈದ್ಯರುಗಳ ಸಲಹೆಯಾಗಿದೆ.
ಇದನ್ನು ಓದಿ: ಸಮಾಜವನ್ನು ಜಾತಿವಾರು ವಿಭಜನೆ ಮಾಡಬೇಕು ಎಂದಾದರೆ ಮಾತ್ರ ಬಿಜೆಪಿಗೆ ಮತ ನೀಡಿ: ಮಹಮದ್ ನಲಪಾಡ್