ಇವರ ಸ್ನೇಹಿತ ಡೊಲ್ಯಾಂಡ್ ಟ್ರಂಪ್ ಅಲ್ಲಿ ಮಾಡಿದ ತಪ್ಪಿಗೆ ದೋಷಾರೋಪಣೆಗೆ ಒಳಗಾಗುತ್ತಾರೆ.. ಆದರೆ ಇಲ್ಲಿ ನಾವು ; ಮೋದಿ ವಿರುದ್ದ ನಟ ಕಿಶೋರ್ ಟೀಕೆ

ಇವರ ಸ್ನೇಹಿತ ಡೊಲ್ಯಾಂಡ್ ಟ್ರಂಪ್ ಅಲ್ಲಿ ಮಾಡಿದ ತಪ್ಪಿಗೆ ದೋಷಾರೋಪಣೆಗೆ ಒಳಗಾಗುತ್ತಾರೆ.. ಆದರೆ ಇಲ್ಲಿ ನಾವು , ತನಿಖೆ (kishore kumar slams modi) ಮಾಡುವವರನ್ನೇ

ದೋಷಾರೋಪಣೆಗೆ ಈಡು ಮಾಡುತ್ತೇವೆ ಎಂದು ನಟ ಕಿಶೋರ್ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಇವರ ಸ್ನೇಹಿತ ಡೊಲ್ಯಾಂಡ್ ಟ್ರಂಪ್ ಅಲ್ಲಿ ಮಾಡಿದ ತಪ್ಪಿಗೆ ದೋಷಾರೋಪಣೆಗೆ ಒಳಗಾಗುತ್ತಾರೆ.. ಆದರೆ ಇಲ್ಲಿ ನಾವು ,

ತನಿಖೆ ಮಾಡುವವರನ್ನೇ ದೋಷಾರೋಪಣೆಗೆ ಈಡು ಮಾಡುತ್ತೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ” ಸಂಶೋಧನಾ ಪ್ರಬಂಧ ಬರೆದು 2019 ರ ಚುನಾವಣೆಯಲ್ಲಿ

ಆಡಳಿತ ಪಕ್ಷದ ವಂಚನೆಯನ್ನು ಬಯಲಿಗೆಳೆದ ಸಬ್ಯಸಾಚಿ ದಾಸ್ ಮತ್ತು ಅವರ ಬೆಂಬಲಕ್ಕೆ ನಿಂತ ಅಶೋಕವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪ್ರೊಫೆಸರುಗಳಿಗೆ ಸಲಾಮ್.

ಇಲ್ಲದಿದ್ದರೆ “ಯಹಾಂ ತೋ ಸಬ್ ಚಂಗಾ ಸೀ”. ಎಂದು (kishore kumar slams modi) ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ನಟ ಕಿಶೋರ್, ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಅವರು ಮಾಡಿದ ಭಾಷಣದ ಬಗ್ಗೆ,

ದೇಶದ ವಸ್ತುಸ್ಥಿತಿಯನ್ನೂ, ತನ್ನ ಪದವಿಯ ಘನತೆಯನ್ನು ಮರೆತ, ಜನರನ್ನು ಮೂರ್ಖರೆಂದೆಣಿಸಿದ, ಪರನಿಂದನೆಯ, ಆತ್ಮರತಿಯ ಸುಳ್ಳುಗಳ, ಅಮಾನ್ಯೀಕರಣಗೊಂಡ ನೋಟುಗಳ ಕಂತೆ ಮಣಿಪುರದ

ಪ್ರಶ್ನೆಗೆ ಉತ್ತರಿಸಲು ಬಾರದ ಅಯೋಗ್ಯತೆಯನ್ನು , ಧೂರ್ತತೆಯನ್ನು ಮುಚ್ಚಿಟ್ಟಿದ್ದ ಮೌನದ ಮುಸುಕನ್ನು ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಕಳಚಿ ಬಿಸಾಡುತ್ತಿದ್ದಂತೆ ಸಂಸತ್ತಿನಲ್ಲಿ ಬೆತ್ತಲಾದ

ಕುಂಭಕರ್ಣ ಎಂದು ಟೀಕಿಸಿದ್ದರು.

ವಾರಣಾಸಿಯಲ್ಲಿ ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..! ಕಾಂಗ್ರೆಸ್ ಹೊಸ ಪ್ಲ್ಯಾನ್..!

ಇದಕ್ಕೂ ಮುನ್ನ, ನಮ್ಮದೇ ಜನ ಮಣಿಪುರದಲ್ಲಿ ರಕ್ತದ ಮಡುವಲ್ಲಿ ಸತ್ತು ಬಿದ್ದಿರುವಾಗ , ನಾವು ಹಾಕಿದ ಅನ್ನ ತಿಂದು ನಮ್ಮ ಸಮಸ್ಯೆಯ ಬಗ್ಗೆ ಮಾತಾಡುವುದು ಬಿಟ್ಟು ಮತ್ತವರ ಟೀಕೆ,

ತನ್ನದೇ ಹೊಗಳಿಕೆಯಲ್ಲಿ , ಸುಳ್ಳುಗಳ, ಜೈಕಾರಗಳ ಮಳೆಯಲ್ಲಿ ಮಿಂದ ಪ್ಧಾನ ಸೇವಕ. ನಿದ್ದೆ ಹೊಡೆದ ಹೊಗಳುಭಟ್ಟರು, ಅದನ್ನೇ ಸಾಧನೆಯೆಂದು ಮೆರೆದ ತಲೆತಿರುಕ ಗೋದೀ ಮಾಧ್ಯಮ ಎಂದು

ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದ್ದರು.

Exit mobile version