ಪ್ರಜೆಗಳ ಕೋಟಿ ಕೋಟಿ ಹಣ ಜೇಬಿಗೆ ಸೇರಿಸಿ ಪ್ರಶ್ನೆಗಳನ್ನೆದುರಿಸದೇ ಟಾಟಾ ಮಾಡಿ ಹೋದವರು, ಕೊರಳ ಪಟ್ಟಿ ಹಿಡಿದು ಪ್ರಶ್ನೆ ಕೇಳದೆ ಉಧೋ ಉಧೋ ಎನ್ನುತ್ತಾ ನಿಂತ ಮಾನಗೆಟ್ಟ ಮುಖ್ಯವಾಹಿನಿ ಮಾಧ್ಯಮಗಳು. ಇವರೆಲ್ಲರನ್ನೂ ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಚ್ಚರ ಎಂದು ನಟ ಕಿಶೋರ್ (Kishore) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಭ್ರಷ್ಟಾಚಾರದ ವಿಶ್ವಗುರು – ಜಿ 20 ಕ್ಕೆ ದೇಶ ಕೊಟ್ಟ ಬಜೆಟ್ – 900 ಕೋಟಿ, ಲೆಕ್ಕ ಕೊಟ್ಟದ್ದು – 4100 ಕೋಟಿ (ಶಾಶ್ವತ ಆಸ್ತಿ, ಸೌಕರ್ಯಗಳ ಹೆಸರಲ್ಲಿ) ಮಥುರಾ ರೋಡಿಗೆ ಕೊಟ್ಟ ಬಜೆಟ್ (ಕಿ. ಮೀ.ಗೆ) -18 ಕೋಟಿ, ಲೆಕ್ಕ ಕೊಟ್ಟದ್ದು (ಕಿ. ಮೀ.ಗೆ)- 256 ಕೋಟಿ, ಅದಾನಿ ಹೆಸರಲ್ಲಿ ಇನ್ನೆಷ್ಟೊ.. ಇಲ್ಲಿ ನುಂಗಿದ ಹಣದ 10 % ಈ ಸ್ಲಮ್ಮುಗಳಿಗೆ ಖರ್ಚು ಮಾಡಿದ್ದರೆ ಪರದೆಯಲ್ಲಿ ಮುಚ್ಚುವ ಖರ್ಚು ಉಳಿಯುತ್ತಿರಲಿಲ್ಲವೇ ?? ಸ್ಲಂ ವಾಸಿಗಳು ಮನುಷ್ಯರಲ್ಲವೇ? ಭಾರತೀಯರಲ್ಲವೇ?ಪ್ರಜೆಗಳ ಕೋಟಿ ಕೋಟಿ ಹಣ ಜೇಬಿಗೆ ಸೇರಿಸಿ ಪ್ರಶ್ನೆಗಳನ್ನೆದುರಿಸದೇ ಟಾಟಾ ಮಾಡಿ ಹೋದವರು, ಕೊರಳ ಪಟ್ಟಿ ಹಿಡಿದು ಪ್ರಶ್ನೆ ಕೇಳದೆ ಉಧೋ ಉಧೋ ಎನ್ನುತ್ತಾ ನಿಂತ ಮಾನಗೆಟ್ಟ ಮುಖ್ಯವಾಹಿನಿ ಮಾಧ್ಯಮಗಳು. ಇವರೆಲ್ಲರನ್ನೂ ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಚ್ಚರ ಎಂದು ಟೀಕಿಸಿದ್ದಾರೆ.
ಇನ್ನೊಂದು ಬರಹದಲ್ಲಿ, ಭವ್ಯ ಭಾರತದ ಜನ ಸಾಯುತ್ತಲೇ ಇರಲಿ, ಗಡಿಯಲ್ಲಿ, ಗುಡಿಯ ಹೆಸರಲ್ಲಿ, ಕಶ್ಮೀರ , ಮಣಿಪುರದಲ್ಲಿ, ಗೋವ ನೆಪದಲ್ಲಿ, ಬಹುಜನ ಕೇರಿಗಳಲ್ಲಿ, ಆಕ್ಸಿಜನ್ ಇಲ್ಲದ ಆಸ್ಪತ್ರೆಯ ಕಾರಿಡಾರುಗಳಲ್ಲಿ , ಹೊಲ ಗದ್ದೆಗಳಲ್ಲಿ, ATM ಮುಂದಿನ ಕ್ಯೂಗಳಲ್ಲಿ.. ಕಪ್ಪು ಹಣ ತಿರುಗಿ ಬಂದೇಬಿಟ್ಟಿತು, ಭಯೋತ್ಪಾದನೆಯೊಂದಿಗೆ ನಮ್ಮೆಲ್ಲ ಸಮಸ್ಯೆಗಳೂ ನಿರ್ನಾಮವಾಗಿಹೋಯಿತೆನ್ನುವ ಭ್ರಮೆಯಲ್ಲಿ, ನಮ್ಮ ಸಾವುಗಳಿಗೆ ಜವಾಬ್ದಾರರಾದವರನ್ನು ಪ್ರಶ್ನಿಸುವುದ ಬಿಟ್ಟು ನಾವು ತಟ್ಟೆ ಬಡಿಯುತ್ತಲೇ ಇರುವ, ಓಟು ಒತ್ತುತ್ತಲೇ ಇರುವ ಬಿಡಿ… ಧರ್ಮದ ದ್ವೇಷದ ಹೆಸರಲ್ಲಿ ಎಂದು ವಾಗ್ದಾಳಿ ನಡೆಸಿದ್ದಾರೆ.