14 ಎಸೆತದಲ್ಲಿ ಅರ್ಧ ಶತಕ ಭಾರಿಸಿದ ಪ್ಯಾಟ್ ಕುಮಿನ್ಸ್ ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಕೆಕೆಆರ್!

TATA IPL

ಪುಣೆಯಲ್ಲಿ ನಡೆದ KKR vs MI ಪಂದ್ಯವು ರೋಚಕ ತಿರುವು ಪಡೆದುಕೊಂಡು ಕೆಕೆಆರ್(KKR) ಗೆಲುವಿನ ನಗೆಬೀರಿತು. ಬುಧವಾರ ಪುಣೆಯ(Pune) ಎಂಸಿಎ ಸ್ಟೇಡಿಯಂನಲ್ಲಿ(MCA Stadium) ಓವರ್‌ಗಳ ಅವಧಿಯಲ್ಲಿ ರನ್‌ಗಳು, ವಿಕೆಟ್‌ಗಳು, ಸಿಕ್ಸರ್‌ಗಳು ಮತ್ತು ಶತಕಗಳು ಎಲ್ಲವೂ ಒಂದೇ ಆಟದಲ್ಲಿ ಕಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನ ನೀಡಿದೆ ಎಂದೇ ಹೇಳಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ಈ 15ನೇ ಸೀಸನ್’ನ 15ನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿದೆ. ಗೆದ್ದ ಬಳಿಕ ಟಾಟಾ IPL 2022ರ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸಂಭ್ರಮದ ನಡುವೆ ಮತ್ತೊಂದು ಖುಷಿ ಸಂಗತಿಯಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಅತಿವೇಗದ ಮೊದಲ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ್ದು ಪ್ಯಾಟ್ ಕಮ್ಮಿನ್ಸ್ ಅವರು.

ಹೌದು, ತಮ್ಮ ಬ್ಯಾಟ್‌ನಿಂದ ಮುಂಬೈ ಬೋಲರ್ಗಳನ್ನು ದಾಳಿ ಮಾಡಿದ ಕುಮಿನ್ಸ್ ಕೇವಲ 14 ಎಸೆತಗಳಲ್ಲಿ 50 ರನ್ ಗಡಿ ದಾಟುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

Exit mobile version