Health : ಅಂಧರಿಗೆ ಮರುದೃಷ್ಟಿಯ ವರದಾನ ಈ ಬಯೋನಿಕ್ ಕಣ್ಣು!

Bionic

Health : ಇತ್ತೀಚಿಗೆ ತಂತ್ರಜ್ಞಾನವೆಂಬುದು(Technology) ನಮ್ಮ ಆಲೋಚನೆಗಳಿಗಿಂತಲೂ ವೇಗವಾಗಿ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಈ ತಂತ್ರಜ್ಞಾನವೇ ಕಾರಣವಾಗಿದೆ.

ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಸುಧಾರಣೆಗಳು ಉಂಟಾಗುತ್ತಿವೆ. ಅದರಲ್ಲೂ ವೈದ್ಯಕೀಯ ಕ್ಷೇತ್ರವಂತೂ ಇಂದು ದೊಡ್ಡ ಮಟ್ಟದಲ್ಲಿ ನವೀಕರಣವನ್ನು ಕಂಡುಕೊಳ್ಳುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಅಂಗವಿಕಲತೆನ್ನು ಹೊಡೆದೋಡಿಸುವ ಹಲವಾರು ತಂತ್ರಜ್ಞಾನಗಳನ್ನು ಕಂಡುಕೊಳ್ಳಲಾಗಿದೆ.

ಕ್ಯಾನ್ಸರ್‌ನಂತಹ ಭಯಂಕರ ರೋಗಗಳಿಗೂ ಔಷಧವನ್ನು ಕಂಡುಹಿಡಿಯಲಾಗಿದೆ. ಹೀಗೆ ನಮ್ಮ ವೈದ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಲೇ ಇದೆ. ಇಂತಹ ಆವಿಷ್ಕಾರಗಳಲ್ಲಿ ಒಂದು ಬಯೋನಿಕ್ ಕಣ್ಣು. ಅಂಧರಿಗೆ(Blind) ಈ ಕಣ್ಣು ಮರುದೃಷ್ಟಿಯನ್ನು ನೀಡಲಿದ್ದು, ಬಹಳ ಉಪಯುಕ್ತವಾದ ಸಂಶೋಧನೆಯಾಗಿದೆ.

https://youtu.be/HBS8jHsUPW0 :


ಎಮ್‌ಐಟಿಯು ಈ ಪ್ರಾಜೆಕ್ಟ್ ಕುರಿತಂತೆ ಪ್ರಕಟಣೆಯನ್ನು ಹೊರಡಿಸಿದ್ದು, ಅಂಧರಿಗೆ ಹೊಸ ದೃಷ್ಟಿ ಒದಗಿಸುವ ಬಯೋನಿಕ್ ಐ ಪ್ರಾಜೆಕ್ಟ್ ಮೇಲೆ ಕಂಪನಿ ಕೆಲಸ ಮಾಡಲಿದೆ. ಈ ಪ್ರಾಜೆಕ್ಟ್‌ಗೆ ಕಂಪನಿ ಓರಿಯನ್ ಎಂಬ ಹೆಸರನ್ನು ಕೂಡ ಇಟ್ಟಿದೆ. ನಿರ್ದಿಷ್ಟ ಡಿವೈಸ್ ಇದಾಗಿರುವುದರಿಂದ ವಿಶ್ವದಾದ್ಯಂತ ಹೆಚ್ಚಿನ ಭರವಸೆಯನ್ನು ಇದು ಹೊಂದಿದೆ.

ಕ್ಯಾಮರಾದೊಂದಿಗೆ ಗಾಜನ್ನು ಇದು ಹೊಂದಿದ್ದು. ಬಾಹ್ಯ ಪ್ರೊಸೆಸರ್ ಅನ್ನು ಪಡೆದುಕೊಂಡು ಸರಿಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಅಂಧರು ಬೆಳಕು, ಕತ್ತಲು, ಅಕ್ಷರಗಳನ್ನು ನೋಡಬಹುದಾಗಿದೆ. ಇದರ ಬೆಲೆ ಕೊಂಚ ದುಬಾರಿಯಾಗಿದ್ದು ಎಲ್ಲರ ಕೈಗೆಟಕುವುದು ಸ್ವಲ್ಪ ಮಟ್ಟಿಗೆ ಅಸಾಧ್ಯ ಎಂದೇ ಹೇಳಬಹುದು.

ಈ ಉಪಕರಣ ಮೆದುಳಿಗೆ ಸಂಪರ್ಕವನ್ನು ಪಡೆದುಕೊಂಡಿದ್ದು, ಇದರಿಂದ ಹೊರಗಿನ ಸಿಗ್ನಲ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ತಮ್ಮ ಸುತ್ತಲಿನದು ಗೋಚರವಾಗುತ್ತದೆ. ಈ ಡಿವೈಸ್ ಸಾಕಷ್ಟು ಮಹತ್ವಗಳನ್ನು ಒಳಗೊಂಡಿದ್ದು ಕಣ್ಣಿಲ್ಲದವರು, ಗ್ಲೌಕೊಮಾ ಹೊಂದಿರುವವರು, ಮಧುಮೇಹಿಗಳು ಹೀಗೆ ದೃಷ್ಟಿ ಸಮಸ್ಯೆಗಳನ್ನು ಹೊಂದಿರುವವರಿಗೆ ವರದಾನವಾಗಿ ಪರಿಣಮಿಸಲಿದೆ.

ಇದನ್ನೂ ಓದಿ : https://vijayatimes.com/fire-at-e-bike-showroom-8-dead/

ಅದರೆ ಈ ಡಿವೈಸ್ ಅನ್ನು ನೀವು ಧರಿಸಬೇಕು ಎಂದಾದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿದೆ. ಓರಿಯನ್‌ಗೆ ಮುಖ್ಯವಾಗಿ ಬೇಕಾಗಿರುವುದು, ಕ್ಯಾಮರಾ ಇರುವ ಕನ್ನಡಕ ಹಾಗೂ ಬಾಹ್ಯ ಪ್ರೊಸೆಸರ್.

Exit mobile version