ಕೊಹ್ಲಿ-ರೋಹಿತ್ ಅಬ್ಬರದ ಆಟಕ್ಕೆ ಇಂಗ್ಲೆಂಡ್ ತತ್ತರ: ಟಿ20 ಸರಣಿ ತನ್ನದಾಗಿಸಿಕೊಂಡ ಟೀಂ ಇಂಡಿಯಾ

ಅಹಮದಾಬಾದ್, ಮಾ. 22: ಹಿಟ್ ಮ್ಯಾನ್ ರೋಹಿತ್ ಶರ್ಮಾ (64) ಹಾಗೂ ನಾಯಕ ವಿರಾಟ್ ಕೊಹ್ಲಿ(ಅಜೇಯ 80) ಅವರ ಅಬ್ಬರದ ಆಟದಿಂದಾಗಿ ಭಾರತ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಇಲ್ಲಿನ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಶನಿವಾರ ನಡೆದ ಸರಣಿಯ ಕೊನೆಯ ಪಂದ್ಯವನ್ನು ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ 36 ರನ್‍ಗಳಿಂದ ಪಂದ್ಯ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯನ್ನು, 3-2 ಅಂತರದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ತನ್ನದಾಗಹಿಸಿಕೊಂಡಿತು.

ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಒಯನ್ ಮಾರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಈ ಲೆಕ್ಕಾಚಾರವನ್ನು ಹುಸಿಯಾಗಿಸಿದ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಭರ್ಜರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಮೊದಲ ‌ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 94 ರನ್‌ಗಳಿಸಿದ ಈ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅತ್ಯುತ್ತಮ ಆಟವಾಡಿದ ರೋಹಿತ್ ಶರ್ಮಾ, 34 ಎಸೆತಗಳಿಗೆ 64 ರನ್(6 ಸಿಕ್ಸ್, 4 ಬೌಂಡರಿ) ಕಲೆ ಹಾಕುವ ಮೂಲಕ ತಂಡಕ್ಕೆ ಅಸರೆಯಾದರು.

ಮತ್ತೊಂದೆಡೆ, ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 52 ಬಾಲ್‍ಗಳಲ್ಲಿ ಅಜೇಯ 80 ರನ್(2 ಸಿಕ್ಸ್ 7 ಬೌಂಡರಿ) ಚೆಚ್ಚಿ ತಂಡದ ಮೊತ್ತವನ್ನು 200 ದಾಟಿಸುವಲ್ಲಿ ಬೃಹತ್ ಕೊಡುಗೆ ನೀಡಿದರು. ರೋಹಿತ್ ಶರ್ಮಾ ವಿಕೆಟ್ ಪತನದ ನಂತರ ಕೊಹ್ಲಿ ಜೊತೆಯಾದ ಸೂರ್ಯ ಕುಮಾರ್ ಯಾದವ್(32) ಹಾಗೂ ಹಾರ್ದಿಕ್ ಪಾಂಡ್ಯ (39) ಸಹ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು. ಪರಿಣಾಮ ಭಾರತ 20 ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 224 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.

ಗೆಲುವಿಗೆ 225 ರನ್‍ಗಳ ಕಠಿಣ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ಗೆ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್ ಎರಡನೇ ಬಾಲ್‍ಗೇ ಜೇಸನ್ ರಾಯ್‍ರನ್ನು ಕ್ಲೀನ್ ಬೋಲ್ಡ್ ಮಾಡಿದರು. ಈ ಮೂಲಕ ರಾಯ್ ಡಕೌಟ್ ಆದರು. ಅಬ್ಬರದ ಆಟವಾಡಿ 34 ಎಸೆತಗಳಿಗೆ 52 ರನ್(4 ಸಿಕ್ಸ್, 2 ಬೌಂಡರಿ) ಸಿಡಿಸಿ ಬಟ್ಲರ್ ಜೋಸ್ ಬಟ್ಲರ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಬಳಿಕ ಜಾನಿ ಬೈರ್‍ಸ್ಟೋವ್ 7 ರನ್ (1 ಬೌಂಡರಿ) ಸಿಡಿಸಿ ಕ್ಯಾಚ್ ಸೂರ್ಯಕುಮಾರ್ ಯಾದವ್‍ಗೆ ಕ್ಯಾಚ್ ನೀಡಿದರು. ಬಳಿಕ ಡೇವಿಡ್ ಮಲನ್ ಮಿಂಚಿನಾಟವಾಡಿ 46 ಬಾಲ್‍ಗೆ 68 ರನ್ ಸಿಡಿಸಿ(2 ಸಿಕ್ಸ್, 9 ಬೌಂಡರಿ) ಶಾರ್ದೂಲ್ ಠಾಕೂರ್ ಅವರ ಬಾಲಿಗೆ ಕ್ಲೀನ್ ಬೌಲ್ಡ್ ಆದರು. ಬಳಿಕ ಐಯಾನ್ ಮಾರ್ಗನ್ ಸಹ 1 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 12 ಬಾಲ್‍ಗೆ 14ರನ್(2 ಬೌಂಡರಿ) ಬಾರಿಸಿ 18ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ಇದೇ ಓವರ್ ಕೊನೇ ಬಾಲ್‍ಗೆ ಜೋಫ್ರಾ ಆರ್ಚರ್ 1 ರನ್ ಹೊಡೆದು ರನ್‍ಔಟ್ ಆದರು. ಕೊನೆಯದಾಗಿ ಕ್ರಿಸ್ ಜಾರ್ಡನ್ 10 ಬಾಲ್‍ಗೆ 11 ರನ್(1 ಸಿಕ್ಸ್) ಬಾರಿಸಿ ಸೂರ್ಯಕುಮಾರ್ ಯಾದವ್ ಅವರಿಗೆ ಕ್ಯಾಚ್ ನೀಡಿದರು.

ಕೇವಲ 15 ರನ್ ನೀಡಿ 2 ವಿಕೆಟ್ ಪಡೆದು ಅತ್ಯದ್ಭುತವಾಗಿ ಬಾಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಗೆ ಪ್ಲೇಯರ್ ಆಫ್ ದಿ ಮ್ಯಾಚ್ ನೀಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ಲೇಯರ್ ಆಫ್ ದಿ ಸಿರೀಸ್ ಸಹ ನೀಡಲಾಗಿದೆ.

Exit mobile version