ಕೆ.ವಿ ಗೌತಮ್ಗೆ ಕೋಲಾರ ಕಾಂಗ್ರೆಸ್ ಟಿಕೆಟ್: ಇಬ್ಬರ ಜಗಳ 3ನೇ ವ್ಯಕ್ತಿಗೆ ಲಾಭ

Kolar: ಕಾಂಗ್ರೆಸ್ಗೆ (Congress) ತೀವ್ರ ತಲೆನೋವು ತಂದಿದ್ದ ಕೋಲಾರ ಮೀಸಲು ಲೋಕಸಭಾ (Kolar Congress ticket-KV Gautam) ಕ್ಷೇತ್ರದ ಟಿಕೆಟ್ ಹಂಚಿಕೆಯ ಕಗ್ಗಂಟ್ಟನ್ನು ಕಾಂಗ್ರೆಸ್

ಹೈಕಮಾಂಡ್ ಬಗೆ ಹರಿಸಿದ್ದು, ಅಂತಿಮವಾಗಿ 3ನೇ ವ್ಯಕ್ತಿಗೆ ಟಿಕೆಟ್ ನೀಡಿದೆ. ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ (Ramesh Kumar) ಬಳಗಳ ನಡುವಿನ ತಿಕ್ಕಾಟದಲ್ಲಿ ಕೆ.ವಿ ಗೌತಮ್ಗೆ

ಕೋಲಾರ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.

ಈ ಮೂಲಕ ಕಳೆದ ಎರಡು ದಿನಗಳಿಂದ ನರೆಯುತ್ತಿದ್ದ ಭಾರೀ ರಾಜಕೀಯ ಹೈಡ್ರಾಮಾಕ್ಕೆ ತೆರೆಬಿದ್ದಿದ್ದು, ಕಾರ್ಪೊರೇಟರ್ ವಿಜಯ್ ಕುಮಾರ್ (Vijay Kumar) ಅವರ ಪುತ್ರ ಕೆ ವಿ ಗೌತಮ್ ಅವರನ್ನು

ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಯಾಗಿ ಘೋಷಿಸಿದೆ. ಈ ಕುರಿತು ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕೋಲಾರ ಟಿಕೆಟ್ ಹಂಚಿಕೆ ಭಾರೀ ಕಗ್ಗಂಟಾಗಿ ದಲಿತ ಎಡಗೈ ಮತ್ತು ಬಲಗೈ ಬಣಗಳು

ತೀವ್ರ ಹೋರಾಟ ನಡೆಸಿದ್ದವು. ಕೆ.ವಿ ಗೌತಮ್ (K.V Gowtham) ಅವರಿಗೆ ಟಿಕೆಟ್ ನೀಡುವ ಮೂಲಕ ಎರಡು ಬಣಗಳ ನಡುವಿನ ಜಗಳಕ್ಕೆ ಬ್ರೇಕ್ ಹಾಕಲಾಗಿದೆ.

ಇದಕ್ಕೂ ಮುನ್ನ ಕೋಲಾರ (Kolar) ಮೀಸಲು ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಮುಂದಾಗಿತ್ತು. ಇದನ್ನರಿತ ಕೋಲಾರ

ಭಾಗದ ಕಾಂಗ್ರೆಸ್ ಶಾಕಸರು ರಾಜೀನಾಮೆ ನೀಡುವ ಬೆದರಿಕೆ ಹಾಕಿದರು. ಈ ಹಿನ್ನಲೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, 3ನೇ

ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಬಣ (Kolar Congress ticket-KV Gautam) ರಾಜಕೀಯಕ್ಕೆ ಬ್ರೇಕ್ ಹಾಕಿದ್ದಾರೆ.

ಈ ಮಧ್ಯೆ ಸಚಿವ ಮುನಿಯಪ್ಪ (Muniyappa) ಮತ್ತು ಶಾಸಕರ ಗಲಾಟೆ ಹಿನ್ನೆಲೆ 3ನೇ ಅಭ್ಯರ್ಥಿಗೆ ಅದೃಷ್ಟ ಒಲಿದಿದೆ. ಇನ್ನು ಸಚಿವ ಎಂಸಿ ಸುಧಾಕರ್ (MC Sudhakar), ಹೈಕಮಾಂಡ್ ಘೋಷಣೆ

ಮಾಡಿದ ಅಭ್ಯರ್ಥಿಗೆ ನಮ್ಮ ಬೆಂಬಲ ಇದೆ ಎಂದಿದ್ದಾರೆ.

ಇದನ್ನು ಓದಿ: ಬೆಂಗಳೂರು ಕೃಷಿ ವಿಜ್ಞಾನಗಳ ವಿವಿಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Exit mobile version