ಈ ಭಯಾನಕ ಸ್ಥಳಗಳ ಬಗ್ಗೆ ಕೇಳಿದ್ರೆ ನಡುಕ ಹುಟ್ಟುವುದು ಗ್ಯಾರಂಟಿ!

India: ನಮ್ಮ ಭಾರತವು ವಿಭಿನ್ನ ಜಾತಿ ಧರ್ಮಗಳನ್ನು ಒಳಗೊಂಡಿರುವ ದೇಶ. ನಮ್ಮ ದೇಶದಲ್ಲಿ (kolkata scary places) ಪ್ರಸಿದ್ಧ ದೇವಾಲಯಗಳು ಹಾಗೂ ಸ್ಮಾರಕಗಳನ್ನು ಕಾಣಬಹುದು.

ಇದರ ಜೊತೆಗೆ, ಅತ್ಯಂತ ವಿಚಿತ್ರ ಹಾಗೂ ಭಯ ಹುಟ್ಟಿಸುವಂತಹ ತಾಣಗಳಿಗೂ ನಮ್ಮ ದೇಶ ಪ್ರಸಿದ್ದಿ ಪಡೆದಿದೆ. ಇನ್ನು, ಭಯಾನಕ ಸ್ಥಳಗಳ ವಿಷಯಕ್ಕೆ ಬಂದಾಗ ಕೊಲ್ಕತ್ತಾ (kolkata) ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಹೌದು, ಕೋಲ್ಕತ್ತಾ ಹಲವಾರು ಭಯಾನಕ ಸ್ಥಳಗಳನ್ನು ಹೊಂದಿರುವುದರ ಬಗ್ಗೆ ಹಲವರಿಗೆ ತಿಳಿದಿಲ್ಲ.ಆಗಿನ ಕಾಲದಲ್ಲಿ ಈ ನಗರವು ಮೊಘಲರು, ಫ್ರೆಂಚರು, ಬ್ರಿಟಿಷರು ಮತ್ತು ಡಚ್ಚರ ಅಚ್ಚುಮೆಚ್ಚಿನದ್ದಾಗಿತ್ತು.

ಇಲ್ಲಿಯ ಪ್ರತೀ ಬೀದಿಗಳೂ ಒಂದೊಂದು ಕಥೆಯನ್ನು ಸಾರುತ್ತದೆ, ಹಾಗೂ ಕೆಲವು ಭಯಾನಕ ಕಥೆಗಳಾಗಿ ಮಾರ್ಪಟ್ಟಿವೆ. ಕೊಲ್ಕತ್ತಾದಲ್ಲಿ ಭಯಾನಕ ಅನುಭವವನ್ನು ನೀಡುವ ಅನೇಕ ಸ್ಥಳಗಳಿವೆ. ಅವುಗಳು ಯಾವುವು ಎನ್ನುವುದನ್ನು ನೋಡೋಣ.

ಇದನ್ನೂ ಓದಿ :https://vijayatimes.com/pocso-overrides-personal-law/

ರೈಟರ್ಸ್ ಕಟ್ಟಡ : ಈ ಹಳೆಯ ಕಟ್ಟಡವು ಆಡಳಿತಾತ್ಮಕ ಉದ್ಯೋಗಿಗಳ ಕಛೇರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು,

ಆದರೆ ಸೂರ್ಯಾಸ್ತದ(Sunset Place) ನಂತರ ಯಾವುದೇ ಉದ್ಯೋಗಿಯೂ ಇಲ್ಲಿ ಕೆಲಸ ಮಾಡಲು ಒಪ್ಪುವುದಿಲ್ಲ ಎಂಬ ಕುಖ್ಯಾತಿಯನ್ನು ಪಡೆದಿದೆ.

ಇಲ್ಲಿಯ ಕಟ್ಟಡದ ಕೆಲವು ಕೊಠಡಿಗಳು ಖಾಲಿಯಾಗಿಯೇ ಉಳಿದಿವೆ ಮತ್ತು ಕೆಲವು ದಶಕಗಳಿಂದ ಅವುಗಳನ್ನು ತೆರೆಯುವ ಧೈರ್ಯವನ್ನು ಯಾರೂ ಮಾಡಿಲ್ಲ ಎಂದು ಹೇಳಲಾಗುತ್ತದೆ.

ಅನೇಕ ಭಯಾನಕ ಘಟನೆಗಳು ಈ ಸ್ಥಳದ ಕುಖ್ಯಾತಿಗೆ ಸಾಕ್ಷಿಯಾಗಿ ನಿಂತಿವೆ.

ಇನ್ನು, ಈ ಮುಚ್ಚಿದ ಕೊಠಡಿಗಳ ಹಿಂದೆ ಭಯಾನಕ ಕಥೆಗಳಿವೆ (Terrible story)ಮತ್ತು ಸಂಜೆಯಾಗುತ್ತಿದ್ದಂತೆಯೇ ಇಲ್ಲಿ ಏರು ಧ್ವನಿಯಲ್ಲಿ ನಗು,ಕಿರುಚುವಿಕೆ ಮತ್ತು ಪಿಸುಮಾತುಗಳಂತಹ ಕೆಲವು ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತವೆ.

ತನಿಖೆಗಳ ಪ್ರಕಾರ ಇಂತಹ ವಿಚಿತ್ರವಾದ ವಿಷಯಗಳಿಗೆ ಸರಿಯಾದ ಕಾರಣಗಳು ದೊರೆತಿಲ್ಲವಾದುದರಿಂದ ಇವೆಲ್ಲ ಸೇರಿ ಈ ಸ್ಥಳವನ್ನು ಇನ್ನಷ್ಟು ಭಯಾನಕವನ್ನಾಗಿ ಮಾಡಿವೆ.

https://youtu.be/kY6kuAgq0Cg ಸಾಲು-ಸಾಲು ಸಮಸ್ಯೆಗಳ ಊರು!

ಗೊಂಬೆಗಳ ಮನೆ : ಹೆಸರೇ ಸೂಚಿಸುವಂತೆ ಈ ಸ್ಥಳವು ಭಯಾನಕವಾಗಿದೆ. ಇದೊಂದು ಅತ್ಯಂತ ಹಳೆಯ ಶಿಥಿಲಗೊಂಡಿರುವ ಕಟ್ಟಡವಾಗಿದ್ದು, ಇಲ್ಲಿನ ಕೆಳಗಿನ ಮಹಡಿಯಲ್ಲಿ ಕೆಲವೇ ಕೆಲವು ಮನೆಗಳಲ್ಲಿ ಜನ ವಾಸವಾಗಿದ್ದಾರೆ.

ಹಾಗೂ ಈ ಕಟ್ಟಡದ ಟೆರೇಸ್ ನ್ನು ಪುರಾತನ ರೋಮನ್ ಶೈಲಿಯಲ್ಲಿ ಮಾಡಿದ ಗೊಂಬೆಗಳಿಂದ ಅಲಂಕರಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಈ ಕಟ್ಟಡವು ಅನೇಕ ಭಯಾನಕ ಕಥೆಗಳನ್ನು ಹೊಂದಿದೆ. ಈ ಸ್ಥಳದಲ್ಲಿ ಹಗಲಿನ ವೇಳೆಯಲ್ಲಿ ಸಹ ಮೇಲ್ಭಾಗದ ಮಹಡಿಗಳನ್ನು ಭೇಟಿ ಮಾಡಲು ಅನುಮತಿಸಲಾಗುವುದಿಲ್ಲ.

ಏಕೆಂದರೆ ಬ್ರಿಟೀಷರ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಶ್ರೀಮಂತ ಭೂ ಮಾಲೀಕರಿಂದ ಶೋಷಣೆಗೊಳಗಾದ ವೇಶ್ಯೆಯರ ಆತ್ಮಗಳು ಇಲ್ಲಿ ಕಾಡುತ್ತವೆ ಎಂಬ ನಂಬಿಕೆಯಿದೆ.

ರಾತ್ರಿಯಲ್ಲಿ ಪುತುಲ್ಬಾರಿಯ ಮೇಲಿನ ಮಹಡಿಯಿಂದ ನಗು ಕೇಳಿ ಬರುತ್ತದೆ ಎಂದು ಇಲ್ಲಿಯ ಜನ ಹೇಳುತ್ತಾರೆ.

ಈ ಕಥೆಯು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ, ಆದರೆ ಕಟ್ಟಡದ ಹತ್ತಿರಕ್ಕೆ ಹೋಗುವಾಗ ಆಗುವ ಅನುಭವವು ನಮ್ಮಲ್ಲಿ ನಡುಕ ಹುಟ್ಟಿಸುವುದಂತೂ ನಿಜ.

ಕೇವಲ ಕೋಲ್ಕತ್ತಾದಲ್ಲಿ ಮಾತ್ರವಲ್ಲ, ನವ ದೆಹಲಿಯಲ್ಲಿರುವ ಕನ್ನಾಟ್ ಪ್ಲೇಸ್ (Connaught Place) ನಲ್ಲಿರುವ ಅಗ್ರಸೆಂಕಿ ಬಾವೂಲಿಯೂ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ.

ಹೌದು, ಕನ್ನಾಟ್ ಪ್ಲೇಸ್ ಸಮೀಪದ ಹೇಯ್ಲೆ ರಸ್ತೆಯ ಅಗ್ರಸೆಂಕಿ ಬಾವೂಲಿ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದು. ಇದು 14ನೇ ಶತಮಾನದಷ್ಟು ಪುರಾತನವಾದದ್ದು, ಈ ಸೆಂಕಿ ಸದಾಕಾಲ ಕಪ್ಪು ನೀರಿನಿಂದ ತುಂಬಿರುತ್ತಿತ್ತು.

ಇದನ್ನೂ ಓದಿ :https://vijayatimes.com/heartfelt-note-to-appu/

ಆತ್ಮಹತ್ಯೆ ಮಾಡಿಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತದೆ. ಇದನ್ನು ಅಗ್ರಸೇನ ಎನ್ನುವ ಮಹಾರಾಜ ರಚಿಸಿದ್ದ ಎಂಬ ಪುರಾಣ ಇತಿಹಾಸವಿದೆ.

Exit mobile version