ಕೌಟುಂಬಿಕ ಸಮಸ್ಯೆ; ಅರ್ಧ ಪಾಲು ಆಸ್ತಿ ನಾಯಿಗೆ

ಭೂಪಾಲ್, . 01: ಮಗನ ವರ್ತನೆಯಿಂದ ಬೇಸತ್ತ ತಂದೆ, ತಮ್ಮ ಅರ್ಧ ಆಸ್ತಿಯನ್ನು ಸಾಕು ನಾಯಿಯ ಹೆಸರಿಗೆ ವಿಲ್ ಮಾಡಿಸಿಟ್ಟಿದ್ದಾರೆ. ತನ್ನ ಇಬ್ಬರು ಪತ್ನಿಯರಲ್ಲಿ ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಎರಡನೇ ಪತ್ನಿಗೆ ಹಾಗೂ ತಾನು ಸಾಕುತ್ತಿದ್ದ ತನ್ನ ಪ್ರೀತಿಯ ನಾಯಿಗೆ ಮಧ್ಯಪ್ರದೇಶದ ಚ್ಚಿಂದವಾರ ಜಿಲ್ಲೆಯ 50 ವರ್ಷದ ರೈತ ಓಂ ನಾರಾಯಣ ವರ್ಮ ಎಂಬುವವರು 4 ಎಕರೆ ಭೂಮಿಯಲ್ಲಿ  ಪಾಲು ಮಾಡಿ ಅರ್ದವನ್ನು ಹೆಂಡತಿ ಇನ್ನರ್ದವನ್ನು ನಾಯಿಗೆ ವಿಲ್ ಮಾಡಿದ್ದಾರೆ.

ಇದಕ್ಕೆ ಕಾರಣ ಹೆತ್ತ ಮಗನ ವರ್ತನೆ. ಇದರಿಂದ ಬೇಸತ್ತಿರುವ ಅವರು, ಭೂಮಿಯನ್ನು ಸಮಾನಾಗಿ ತನ್ನ ಪತ್ನಿ ಹಾಗೂ ಸಾಕು ನಾಯಿಗೆ ಹಂಚಿದ್ದಾರೆ. ಇದಕ್ಕಾಗಿ ವಿಲ್ ಮಾಡಿಟ್ಟಿರುವ ಅವರು, ನನ್ನ ಮರಣದ ನಂತರ, ಪತ್ನಿ ಚಂಪಾ ವರ್ಮಾ ಮತ್ತು ಸಾಕುನಾಯಿಗೆ ಆಸ್ತಿ ಮತ್ತು ಭೂಮಿಯನ್ನು ಆನುವಂಶಿಕವಾಗಿ ಪಡೆಯುವ ಹಕ್ಕು ಇದೆ ಎಂದು ಬರೆದಿದ್ದಾರೆ.

ನಾಯಿಗೆ ಸೇವೆ ಸಲ್ಲಿಸುವ ವ್ಯಕ್ತಿಯು ನಾನು ಅದಕ್ಕಾಗಿ ಮೀಸಲಿಟ್ಟ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಬಹುದು ತಿಳಿಸಿದ್ದಾರೆ. ಒಂದು ವೇಳೆ ನಾಯಿ ಸಾವನ್ನಪ್ಪಿದರೆ, ಅದರ ಪಾಲಿನ ಆಸ್ತಿಯನ್ನು ಯಾರು ಅದನ್ನು ನೋಡಿಕೊಳ್ಳುತ್ತಿದ್ದರೋ ಅವರಿಗೆ ಸಲ್ಲುತ್ತದೆ ಎಂದು ವಿಲ್‍ನಲ್ಲಿ ಉಲ್ಲೇಖಿಸಿದ್ದಾರೆ.

Exit mobile version