KPTCLನಿಂದ ಜೂನಿಯರ್‌ ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

KPTCL

KPTCLನಿಂದ ಜೂನಿಯರ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಮಾರ್ಚ್‌ 9 ರ ಓಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಜೂನಿಯರ್ ಇಂಜಿನಿಯರ್ (ಸಿವಿಲ್) 29 ಹಾಗೂ ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕ್) 570 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಶುಲ್ಕ  ಪಾವತಿಗೆ ಮಾರ್ಚ್ 9 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ kptcl.karnataka.gov.in ಗೆ ಭೇಟಿ ನೀಡಬಹುದು.

ವಯೋಮಿತಿ

ವಯೋಮಿತಿ ಕನಿಷ್ಟ 18 ರಿಂದ 35 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ರ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ಪ್ರವರ್ಗ 2ಎ, 2ಬಿ, 3 ಎ ಮತ್ತು 3 ಬಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿಂದ ಕಡ್ಡಾಯವಾಗಿ ಬಿಇ, ಬಿಟೆಕ್, ಡಿಪ್ಲೋಮಾ ಪೂರ್ಣಗೊಳಿಸಿರಬೇಕು.  ಎಲೆಕ್ಟ್ರಿಕ್ ಇಂಜಿನಿಯರ್ ಹುದ್ದೆಗಳಿಗೆ ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೋಮಾ, ಸಿವಿಲ್ ಇಂಜಿನಿಯರ್ ಹುದ್ದೆಗಳಿಗೆ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ :

ಸಾಮಾನ್ಯ, ಪ್ರವರ್ಗ-1, ಪ್ರವರ್ಗ-2, 2ಎ, 2ಬಿ, 3 ಎ, 3 ಬಿ ವರ್ಗದ ಅಭ್ಯರ್ಥಿಗಳಿಗೆ 600 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ 350 ರೂ. ಅರ್ಜಿ ಶುಲ್ಕವಿದೆ. ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

Exit mobile version