Bengaluru : ಜನವರಿ 26ಕ್ಕೆ ಪ್ಯಾನ್ ಇಂಡಿಯಾ(Pan India) ಲೆವೆಲ್‍ನಲ್ಲಿ ‘ಕ್ರಾಂತಿ’(Kranti Promotion Begins) ಸಿನಿಮಾ ತೆರೆಯ ಮೇಲೆ ಬರಲಿದೆ, ಸಿನಿಮಾ ಪ್ರಚಾರ ಮಾಡಲು ಚಿತ್ರತಂಡವು ಈಗಾಗಲೇ ಭರ್ಜರಿಯಾಗಿ ಶುರು ಮಾಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ನಟನೆಯ ಈ ಸಿನಿಮಾದ ಬಗ್ಗೆ ಚಿತ್ರತಂಡ ಇತ್ತೀಚಿಗಷ್ಟೇ ಸುದ್ದಿಗೋಷ್ಠಿ ನಡೆಸಿ ತಮ್ಮ ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿತು.
ವಿ.ಹರಿಕೃಷ್ಣ(V. Harikrishna) ನಿರ್ದೇಶನದ ಈ ಚಿತ್ರ ತಂಡವು ಶೂಟಿಂಗ್ ಕಂಪ್ಲೀಟ್ ಆಗುವವರೆಗೂ ಸಿನಿಮಾದ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ಆ ಸಮಯ ಬಂದಿದೆ ಎಂದು ತಿಳಿಸಿದೆ.
ಕನ್ನಡ ಚಿತ್ರರಂಗದಲ್ಲಿರುವ ಚಂದನವನದ ಪ್ರಮುಖ ನಾಯಕ ನಟಿ ರಚಿತಾ ರಾಮ್(Rachita ram), ಕ್ರಾಂತಿಯಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ಮಿಂಚಿದ್ದಾರೆ.
ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್(Crazy star Ravichandran), ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಉಮಾಶ್ರೀ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರ ತಾರಾಂಗಣ ‘ಕ್ರಾಂತಿ’ ಚಿತ್ರದಲ್ಲಿದೆ.
ಇದನ್ನೂ ಓದಿ :https://vijayatimes.com/chethan-over-reservation/
ಕಳೆದ ಹಲವು ತಿಂಗಳುಗಳಿಂದ ದರ್ಶನ್ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ‘ಕ್ರಾಂತಿ’ ಸಿನಿಮಾ ಪ್ರಚಾರ ಮಾಡುತ್ತಲೆ ಬಂದಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭಾವುಕರಾಗಿ ಧನ್ಯವಾದ ತಿಳಿಸಿದ್ದರು.
ಚಿತ್ರದ ಒಂದಿಷ್ಟು ಹೊಸ ಪೋಸ್ಟರ್ ಗಳು ಕೂಡ ರಿಲೀಸ್ ಆಗಿವೆ. ಇದೀಗ ಚಿತ್ರತಂಡವು ಕ್ರಾಂತಿ ಸಿನಿಮಾ ಪ್ರಚಾರ ಕೆಲಸಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದೆ.
ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ(Pan India Level) 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ‘ಕ್ರಾಂತಿ’ ಹೊಸ ಡಿಸೈನರ್ ಬ್ಯಾನರ್ ಗಳಿಂದ ತುಂಬಿದ ಪ್ರಚಾರ ಬಂಡಿಯೊಂದು ಸಿದ್ದವಾಗಿ,
70 ದಿನಗಳ ಕಾಲ ರಾಜ್ಯದ ಮೂಲೆ ಮೂಲೆಗೆ ಸುತ್ತಲು ಪ್ರಾರಂಭಿಸಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ ತಕ್ಕಂತೆ ಟ್ರೈಲರ್ ಕಟ್,

ಟೀಸರ್ ಎಲ್ಲಾ ಇರಬೇಕಾಗಿತ್ತು. ಆದರೆ ಆ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಲೇ ಬಂದಿದೆ. ಈ ಹಿಂದೆ ಬಂದ ಪೋಸ್ಟರ್‍ಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಆದರೆ ಈಗ ಹೊಸ ಪೋಸ್ಟರ್ ಹಾಗೂ ಹೊಸ ಬ್ಯಾನರ್ ಡಿಸೈನ್ ಜೊತೆಗೆ ರಾಜ್ಯದ ಬೇರೆ ಬೇರೆ ಊರುಗಳಿಗೆ ತೆರಳಿ ಸಾಂಗ್ ರಿಲೀಸ್ ಮಾಡುವ ಮುಖಾಂತರ ‘ಕ್ರಾಂತಿ’ ಪ್ರಚಾರ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಇದನ್ನೂ ಓದಿ : https://vijayatimes.com/mamata-ji-enjoys-drum-beat/
ಸದ್ಯ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಕ್ರಾಂತಿಗೊಳಿಸಲು ಸಜ್ಜಾಗಿದ್ದಾರೆ. ಒಟ್ಟಾರೆ ಡಿ ಬಾಸ್,
ಡಿ ಬಾಸ್ ಎಂದು ಕೂಗುವ ಮೂಲಕ ದರ್ಶನ್ ಅವರ ಮೇಲಿರುವ ಅಭಿಮಾನವನ್ನು ಪ್ರದರ್ಶಿಸುವ ದರ್ಶನ್ ಅವರ ಅಭಿಮಾನಿಗಳು ಸ್ವಯಂಪ್ರೇರಿತವಾಗಿ ಕ್ರಾಂತಿ ಚಿತ್ರವನ್ನು ತಮ್ಮದೇ ಶೈಲಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.
- ಎಸ್.ಪಂಕಜಾ