ಗಣರಾಜ್ಯೋತ್ಸವಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಕ್ರಾಂತಿ : ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌

Karnataka: ಚಾಲೆಂಜಿಂಗ್ ಸ್ಟಾರ್‌ ದರ್ಶನ್ ರವರ ಕ್ರಾಂತಿ ಚಿತ್ರ ನಾಳೆ ಅಂದ್ರೆ ಗಣರಾಜ್ಯೋತ್ಸವದ(Republic Day) ಶುಭ ಸಂದರ್ಭದಲ್ಲಿ ತೆರೆ (Kranti tickets sold out) ಕಾಣಲಿದೆ.

ದರ್ಶನ್ ಅಭಿಮಾನಿಗಳು ಕ್ರಾಂತಿ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಕ್ರಾಂತಿ ಮಾಡಬೇಕೆಂಬ ಮಹದಾಸೆ ಇಟ್ಟುಕೊಂಡು ಟಿಕೆಟ್‌ಗಳನ್ನು ಭರದಿಂದ ಖರೀದಿಸುತ್ತಿದ್ದಾರೆ.

ಆನ್ಲೈನ್(Online) ಟಿಕೆಟ್ ಬುಕಿಂಗ್ ಜೋರಾಗಿದ್ದು. ಹೆಚ್ಚಿನ ಚಿತ್ರಮಂದಿರಗಳಲ್ಲಿ ಟಿಕೆಟ್‌ ಸೋಲ್ಡ್‌ ಔಟ್‌ ಆಗಿವೆ. ಆ ಮೂಲಕ ಕ್ರಾಂತಿ(Kranti) ಸಿನೆಮಾ ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸುವ ಸುಳಿವು ಕೂಡ ನೀಡಿದೆ.

ಹತ್ತು ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ನಟ ದರ್ಶನ್‌ಗೆ(Challenging Star Darshan) ಈ ಚಿತ್ರ ಯಶಸ್ಸು ಕಾಣಲೇ ಬೇಕಾದ ಅನಿವಾರ್ಯತೆ ಇದೆ.

ಅಲ್ಲದೆ ಪ್ರಮುಖ ಸುದ್ದಿ ಮಾಧ್ಯಮಗಳು ಕ್ರಾಂತಿ ಚಿತ್ರಕ್ಕೆ ಹೆಚ್ಚಿನ ಪ್ರಚಾರ ನೀಡದೆ ದರ್ಶನ್‌ ಅವರನ್ನು ಬಾಯ್‌ಕಾಟ್‌(Boycott) ಮಾಡಿದ್ರು.

ಆದ್ರೆ ದರ್ಶನ್‌ ಅಭಿಮಾನಿಗಳು ಇದನ್ನೇ ಚಾಲೆಂಜಿಂಗ್‌ ಆಗಿ ತೆಗೆದುಕೊಂಡು ಚಿತ್ರದ ಪ್ರಚಾರವನ್ನು ಡಿಜಿಟಲ್‌ ಮೀಡಿಯಾಗಳಲ್ಲಿ(Digital Media) ಮಾಡುತ್ತಿದ್ದಾರೆ.

ಅದ್ರಲ್ಲೂ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡಿನ ರಿಲ್ಸ್ ಗಳಲ್ಲಿ ಒಂದು ಕ್ರೇಜ್ ಸೃಷ್ಟಿಸಿದೆ. ಅಲ್ಲದೆ ಈ ಚಿತ್ರದ ಟ್ರೈಲರ್‌ ಕೂಡ ಭಾರೀ ಸಂಚಲನ ಸೃಷ್ಟಿಸಿತ್ತು.

ಕ್ರಾಂತಿ ಸಿನೆಮಾ ಅಭಿಮಾನಿಗಳಿಗೆ ಬರೀ ಸಿನೆಮಾ (Kranti tickets sold out) ಆಗದೆ ಅದು ಅವರ ನಟನ ಮೇಲಿರುವ ಪ್ರೀತಿಯ ಉತ್ಕಟ ಭಾವನೆ ಆಗಿದೆ.

ಯಾವಾಗ ನಟ ದರ್ಶನ್ ಮಾದ್ಯಮಗಳಿಂದ ಬ್ಯಾನ್ ಆದ್ರೂ,ಮಾದ್ಯಮದಲ್ಲಿ(Media) ಪ್ರಚಾರ ಇಲ್ಲ ಎನ್ನುವುದು ಗೊತ್ತಾಯ್ತು ಆವಾಗ ನಟ ದರ್ಶನ್ ಅವರ ಕ್ರಾಂತಿ ಚಿತ್ರದ ಪ್ರಚಾರಕ್ಕೆ ಅಭಿಮಾನಿಗಳು ಬೆನ್ನಿಗೆ ನಿಂತುಕೊಂಡ್ರು,

ಸಾಮಾಜಿಕ ಜಾಲತಾಣಗಳ(Social Media) ಮೂಲಕ ಕ್ರಾಂತಿ ಪ್ರಚಾರ ಮಾಡಿದರು. ಸುದ್ದಿ ಮಾದ್ಯಮಗಳು ನಟ ದರ್ಶನ್ ರವರಿಗೆ ಸಂಭಂದ ಪಟ್ಟ ಸಣ್ಣ ಸುದ್ದಿಗಳನ್ನು ಬಿತ್ತರ ಮಾಡಲಿಲ್ಲ.

ಇದನ್ನೂ ಓದಿ: ಕರ್ನಾಟಕದ ಈ 5 ನಗರಗಳಲ್ಲಿ 5G ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಿದ ಜಿಯೋ

ಹೀಗಾಗಿ ಕೆಲವು ಮಾದ್ಯಮಗಳ ಪ್ರಚಾರ ಇಲ್ಲದ ಕಾರಣಕ್ಕೆ ಕ್ರಾಂತಿ ಚಿತ್ರಕ್ಕೆ ದೊಡ್ಡ ಮಟ್ಟದ ಪೆಟ್ಟು ಬೀಳಬಹುದು ಎಂದು ಕೆಲವರು ಅಭಿಪ್ರಾಯವಾಗಿತ್ತು.

ಆದ್ರೆ ಚಿತ್ರದ ಟಿಕೆಟ್ ಸೋಲ್ಡ್ ಔಟ್(Sold out) ಆಗ್ತಿರೋದು ನೋಡಿದ್ರೆ ಆ ಅಭಿಪ್ರಾಯಗಳು ಸುಳ್ಳಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.


ಕಳೆದ ಕೆಲವು ವರುಷಗಳಿಂದ ದರ್ಶನ್ ಅವರ ಚಿತ್ರಗಳು ಅಂಥಾ ಯಶಸ್ಸು ಕಾಣದ ಕಾರಣ ಕ್ರಾಂತಿ ಚಿತ್ರದ ಯಶಸ್ಸು ದರ್ಶನ್ ಅವರಿಗೆ ಅನಿವಾರ್ಯವಾಗಿದೆ.

ಅಲ್ಲದೆ ಈ ಚಿತ್ರ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಮರುಜೀವ ಕೊಡಲಿದೆ.

Exit mobile version