ಬೆಂಗಳೂರು, ಫೆ. 09: ನಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮದುವೆ ಶಾಸ್ತ್ರಗಳು ಶುರುವಾಗಿವೆ. ಹೌದು. ಫೆ.14ರಂದು ಹಸೆಮಣೆ ಏರುತ್ತಿರುವ ಕೃಷ್ಣ-ಮಿಲನಾ ಮದುವೆ ಶಾಸ್ತ್ರಗಳು ಆರಂಭವಾಗಿವೆ.
ರೀಲ್ ಲೈಫ್ ನಿಂದ ರಿಯಲ್ ಲೈಫ್ ನಲ್ಲೂ ಜೋಡಿಯಾಗಲು ಹೊರಟಿರುವ ನಟ-ನಟಿ ಮದುವೆಯಲ್ಲಿ ಸ್ಯಾಂಡಲ್ ವುಡ್ ಗಣ್ಯರು ಭಾಗವಹಿಸಲಿದ್ದಾರೆ.
ಮಿಲನಾ ಮನೆಯಲ್ಲಿ ನಿನ್ನೆಯಿಂದಲೇ ಶಾಸ್ತ್ರಗಳು ಆರಂಭವಾಗಿದೆ. ತಮ್ಮ ಮನೆಯ ಸಾಂಪ್ರದಾಯಿಕ ಶಾಸ್ತ್ರವೊಂದರ ವಿಡಿಯೋ ಪ್ರಕಟಿಸಿರುವ ಮಿಲನಾ ಮದುವೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.