ಕೃಷಿ ಕಾನೂನುಗಳ ಬಗ್ಗೆ ಲಿಖಿತ ಉತ್ತರ ನೀಡಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ, ಡಿ. 05: ಹೊಸ ಕಾಯ್ದೆ ಕುರಿತು ನಡೆಯುತ್ತಿರುವ ಬಿಕ್ಕಟ್ಟು ಪರಿಹಾರಕ್ಕೆ ರೈತ ಸಂಘದ ಮುಖಂಡರು ಹಾಗೂ ಸರಕಾರ ಶನಿವಾರ ಐದನೇ ಸುತ್ತಿನ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಶ್ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮೂವರು ಕೇಂದ್ರ ಸಚಿವರು ಮತ್ತು ರೈತ ಪ್ರತಿನಿಧಿಗಳ ನಡುವೆ ನಡೆದ ನಾಲ್ಕು ಸುತ್ತಿನ ಮಾತುಕತೆಗಳು ಉಭಯ ಬಣಗಳ ನಡುವಿನ ಬಿಕ್ಕಟ್ಟು ನಿವಾರಿಸಲು ವಿಫಲವಾಗಿದ್ವು.

ಇನ್ನು ಇತ್ತೀಚೆಗೆ ಜಾರಿಗೆ ಬಂದ ಕಾಯ್ದೆಯನ್ನ ಪುನರ್ ಪರಿಶೀಲಿಸಿ, ರೈತರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಬಿದ್ದರೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಹೊಸ ಕಾನೂನುಗಳಿಗೆ ತಿದ್ದುಪಡಿ ತರದೆ ಸಂಪೂರ್ಣವಾಗಿ ವಾಪಸ್ ಪಡೆಯಲು ರೈತರು ಬಯಸುತ್ತಿದ್ದಾರೆ ಎಂದು ರೈತರು ಹೇಳಿದ್ದಾರೆ.

ರೈತರ ಒಕ್ಕೂಟಗಳ ಮಾತುಕತೆಗೆ ಕೇಂದ್ರ ಬದ್ಧ: ಕೃಷಿ ವಿಧೇಯಕಗಳ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರ ಒಕ್ಕೂಟಗಳ ಒಕ್ಕೂಟಗಳ ಜತೆ ಮಾತುಕತೆ ನಡೆಸಲು ಬದ್ಧ ಎಂದು ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ನಡೆಯಲಿರುವ ರೈತ ಪ್ರತಿನಿಧಿಗಳು ಐದನೇ ಸುತ್ತಿನ ಮಾತುಕತೆಯಲ್ಲಿ ರೈತರ ಬೇಡಿಕೆಯಂತೆ ಕೃಷಿ ಕಾನೂನುಗಳ ಬಗ್ಗೆ ಕೊನೆಯ ಮಾತುಕತೆಯಲ್ಲಿ ಲಿಖಿತ ಉತ್ತರ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

Exit mobile version