ಕೃಷಿ ಕಾಯ್ದೆಗೂ, ಬೆಂಬಲ ಬೆಲೆಗೂ ಸಂಬಂಧವಿಲ್ಲ; ನಿರ್ಮಲಾ ಸಿತಾರಾಮನ್

The Minister of State for Commerce & Industry (Independent Charge), Smt. Nirmala Sitharaman addressing a press conference, in New Delhi on October 14, 2016.

ನವದೆಹಲಿ, ಡಿ. 12: ಇತ್ತೀಚಿನ ಸರ್ಕಾರದ ಕಾಯ್ದೆ ತಿದ್ದುಪಡಿಗಳು ಬಹಳ ವಿರೋಧವನ್ನು ಎದುರಿಸುತ್ತಿವೆ. ಆದರೂ ಕೇಂದ್ರ ಸರ್ಕಾರ ತನ್ನ ಕಾಯ್ದೆಗಳನ್ನು ಅಂಗೀಕಾರ ಮಾಡಿಸುವಲ್ಲಿ ಯಶಸ್ವಿಯಾಗುತ್ತಿದೆ. ಹೀಗೆ ಕೇಂದ್ರ ಸರ್ಕಾ‍ರ ಇತ್ತೀಚೆಗೆ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳಿಗೂ ಕನಿಷ್ಠ ಬೆಂಬಲ ಬೆಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಲ್ಲದೇ ಇದಕ್ಕೆ ಸಂಬಂಧಪಟ್ಟಂತೆ ಅನೇಕ ನಿಯಮಗಳು ಅನ್ವಯಗಾಗಲಿದೆ. ಕೃಷಿಕಾಯ್ದೆ ತಿದ್ದುಪಡಿಯಿಂದಾಗಿ ಅನೇಕ ಪ್ರತಿಭಟನೆಗಳು ದೇಶಾದ್ಯಂತ ನಡೆಯುತ್ತಿವೆ. ಆದರೂ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಸಚಿವೆ ನಿರ್ಮಲಾ ಸೀತಾರಾಮನ್, ಎಂಎಸ್‌ಪಿ ಬಗ್ಗೆ ಉದ್ಭವಿಸುವ ಅನುಮಾನಗಳಿಗೆ ಸೂಕ್ತ ಆಧಾರಗಳು ಇಲ್ಲವೆಂದು ತಿಳಿಸಿದ್ದಾರೆ.

ಆದ ಕಾರಣ ರೈತರನ್ನು ಯಾವುದೇ ರೀತಿಯ ಗೊಂದಲಕ್ಕೆ ದಾರಿ ಮಾಡಿಕೊಡಬಾರದೆಂದು ಸೂಚಿಸಿದ್ದಾರೆ.

Exit mobile version