Bengaluru: ಕರ್ನಾಟಕ (Karnataka) ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (ಕೆ-ಸೆಟ್) ಪರೀಕ್ಷೆಯನ್ನು ಮೈಸೂರು (KSET 2023 notification released) ವಿಶ್ವವಿದ್ಯಾಲಯದ
ಬದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲು, ರಾಜ್ಯ ಸರ್ಕಾರದ ನಿರ್ದೇಶನದಂತೆ ನೋಟಿಫಿಕೇಶನ್ (Notification) ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಕೆ, ಪರೀಕ್ಷಾ
ದಿನಾಂಕ ಸೇರಿದಂತೆ ಅನೇಕ ಪ್ರಮುಖ ಮಾಹಿತಿಯನ್ನು ನೋಟಿಫಿಕೇಶನ್ನಲ್ಲಿ (KSET 2023 notification released) ನೀಡಲಾಗಿದ್ದು, ಅದರ ಮಾಹಿತಿ ಇಲ್ಲಿದೆ.

ಕೆ-ಸೆಟ್ 2023 ತಾತ್ಕಾಲಿಕ ವೇಳಾಪಟ್ಟಿ :
• ಅರ್ಜಿ ಸಲ್ಲಿಕೆ ದಿನಾಂಕ : 10-09-2023 ರಿಂದ 30-09-2023
• ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ :03-10-2023
• ಪರೀಕ್ಷೆ ದಿನಾಂಕ : 05-11-2023
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (ಕೆ-ಸೆಟ್) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :
• ಸ್ನಾತಕೋತ್ತರ ಪದವಿಯಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
• ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ಪಾಸ್ ಆಗಿರಬೇಕು.
• OBC, EWS, ಎಸ್ಸಿ(SC)/ಎಸ್ಟಿ (ST), ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡಾ 50 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ರಾಷ್ಟ್ರೀಯ ಮಹಿಳಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ ಅರ್ಹತೆ ಎಷ್ಟು?
ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.

KSET ಪರೀಕ್ಷೆ ಮಾದರಿ
• ಒಟ್ಟು 300 ಅಂಕಗಳು
• ಪತ್ರಿಕೆ-1 (ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಪತ್ರಿಕೆ): 100 ಅಂಕಗಳಿಗೆ .
• ಪತ್ರಿಕೆ-2 (ವಿಷಯ ಪತ್ರಿಕೆ) : 200 ಅಂಕಗಳಿಗೆ
ಪರೀಕ್ಷಾ ಶುಲ್ಕ :
• ಸಾಮಾನ್ಯ ಅರ್ಹತಾ ಅಭ್ಯರ್ಥಿಗಳು : ರೂಪಾಯಿ. 1150.
• ಪ್ರವರ್ಗ – IIA, IIB, IIIA, IIIB ಅಭ್ಯರ್ಥಿಗಳು : ರೂಪಾಯಿ 950.
• ಪ್ರವರ್ಗ I, SC, ST, PWD ಅಭ್ಯರ್ಥಿಗಳು : ರೂಪಾಯಿ 650.
ಪರೀಕ್ಷಾ ಕೇಂದ್ರಗಳು :
• ಬೆಂಗಳೂರು
• ಬೆಳಗಾವಿ
• ಬಳ್ಳಾರಿ
• ವಿಜಯಪುರ
• ದಾವಣಗೆರೆ
• ಧಾರವಾಡ
• ಕಲ್ಬುರ್ಗಿ
• ಮಂಗಳೂರು
• ಮೈಸೂರು
• ಶಿವಮೊಗ್ಗ
• ತುಮಕೂರು
ಮಹೇಶ್