Karnataka: ಮೈಸೂರಿನಲ್ಲಿರುವ ಕರ್ನಾಟಕ (KSOU Exam Scam) ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಲಂಚಾವತಾರ ಬಯಲಿಗೆ ಬಂದಿದ್ದು, ಹಣ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು
ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ಪ್ರಾಧ್ಯಾಪಕರ ಜೊತೆ ಮಾತನಾಡಿರುವ ಆಡಿಯೋ (KSOU Exam Scam) ವೈರಲ್ ಆಗುತ್ತಿದೆ.

ಹಣ ಕೊಡದ ವಿದ್ಯಾರ್ಥಿಗಳನ್ನು ಬೇರೆ ಪರೀಕ್ಷಾ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸುತ್ತಿದ್ದಾರೆ. ಅಲ್ಲದೆ ಎಂಎಸ್ಸಿ (MSC) ಪ್ರಶ್ನೆ ಪತ್ರಿಕೆಗೆ 1500 ರೂ., ಎಂ.ಎ ಮತ್ತು ಎಂ.ಕಾಮ್ ಪ್ರಶ್ನೆ ಪತ್ರಿಕೆಗೆ
1 ಸಾವಿರ ರೂಪಾಯಿ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಸಂಬಂಧ ವಿವಿ ಪ್ರಾಧ್ಯಾಪಕರ ಜೊತೆ ವಿದ್ಯಾರ್ಥಿಯೊಬ್ಬ ಮಾತನಾಡಿರುವ ಆಡಿಯೋ
ವೈರಲ್ (Viral) ಆಗುವ ಮೂಲಕ ವಿವಿಯ ಲಂಚಾವತಾರ ಬಯಲಿಗೆ ಬಂದಿದೆ.
ಇನ್ನು ಚಿತ್ರದುರ್ಗ ಪರೀಕ್ಷಾ ಕೇಂದ್ರದಲ್ಲಿ ಒಂದು ಸೆಮಿಸ್ಟರ್ಗೆ (Semester) 3000 ರೂಪಾಯಿ ಲಂಚ ಪಡೆದು ಕಾಪಿ ಹೊಡೆಯಲು ಅವಕಾಶ ಮಾಡಿಕೊಡಲಾಗುತ್ತಿದ್ದು, ಹಣ ಕೊಡದ ವಿದ್ಯಾರ್ಥಿಗಳನ್ನು
ಪ್ರತ್ಯೇಕ ರೂಮ್ನಲ್ಲಿ ಕೂರಿಸಿ ಪರೀಕ್ಷೆ ಬರೆಸುವ ಮೂಲಕ ಟಾರ್ಗೆಟ್ ಮಾಡಲಾಗುತ್ತದೆ ಎಂದು ಆಡಿಯೋದಲ್ಲಿ ಇರುವಂತೆ ಬೆಂಗಳೂರಿನ ಯುವತಿಯೊಬ್ಬೊಳು ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದಳು.
ಚಿತ್ರದುರ್ಗ ಕೇಂದ್ರ ಬೇಡ ಎಂದು ದಾವಣಗೆರೆ ಪರೀಕ್ಷಾ ಕೇಂದ್ರ ತೆಗೆದುಕೊಂಡರೆ ಇಲ್ಲಿ ಚಿತ್ರದುರ್ಗಕ್ಕಿಂತ ಹೆಚ್ಚು ಲಂಚಾವತಾರ ಕಂಡು ಬರುತ್ತಿದೆ ಮತ್ತು ಚಿತ್ರದುರ್ಗದಲ್ಲಿ (Chitradurga) ಒಂದು
ಸೆಮೆಸ್ಟರ್ಗೆ 1 ಸಾವಿರ ಕೇಳಿದರೆ, ದಾವಣಗೆರೆಯಲ್ಲಿ ಒಂದು ವಿಷಯಕ್ಕೆ 1 ಸಾವಿರ ಕೇಳುತ್ತಾರೆ.
ಇನ್ನು ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಾಗಿದ್ದು, ದಾವಣಗೆರೆ ರೀಜನಲ್ ಸೆಂಟರ್ನ (Regional Center) ಕೊಠಡಿಯೊಂದರಲ್ಲಿ 36 ಮಂದಿ ಇದ್ದರು. ಯಾವುದೇ ನೋಂದಣಿ ಸಂಖ್ಯೆ ಏನೂ ಇಲ್ಲ
ಹಾಗಾಗಿ ಇದನ್ನು ಪರೀಕ್ಷಾ ಸಂಯೋಜಕರಲ್ಲಿ ಪ್ರಶ್ನಿಸಿದಾಗ ಬೆಳಗ್ಗೆಯಿಂದ ನಾನು ತಿಂಡಿ ತಿಂದಿಲ್ಲ, ಅದನ್ನು ವಿಚಾರ ಮಾಡುತ್ತಿದ್ದೇನೆ ಎಂದು ಹೇಳಿದ್ದಾಗಿ ವಿದ್ಯಾರ್ಥಿ ಹೇಳುವುದನ್ನು ಆಡಿಯೋದಲ್ಲಿ ಕೇಳಬಹುದಾಗಿದೆ.

ಅಲ್ಲದೆ ಉಪಕುಲಾಪತಿಗೆ ಈ ಲಂಚಾವತಾರದ ಬಗ್ಗೆ ತಿಳಿಸಲೆಂದು ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಮತ್ತು ಮುಂದಿನ ಪರೀಕ್ಷೆಯ ವೇಳೆ ನಾನು ಕುಳಿತಿದ್ದ ರೂಮ್ನಲ್ಲಿ 36 ವಿದ್ಯಾರ್ಥಿಗಳಲ್ಲಿ
12 ಮಂದಿ ಮಾತ್ರ ಇದ್ದು, ಉಳಿದವರು ಎಲ್ಲಿ ಎಂದು ಸಿಬ್ಬಂದಿಯನ್ನು ಕೇಳಿದರೆ ಅವರೆಲ್ಲ ಕಾಪಿ ಮಾಡುವವರು ಬಂದಿಲ್ಲ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಪ್ರಶ್ನೆ ಪತ್ರಿಕೆ ಬಂದ ನಂತರ ಉಳಿದವರನ್ನು ಬೇರೆ ರೂಮ್ನಲ್ಲಿ ಕೂರಿಸಿ ಅವರಿಂದ ತಲಾ ಸಾವಿರ ರೂ. ಪಡೆದು ಪರೀಕ್ಷೆ ಬರೆಸಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದು, ಈ ಘಟನೆ ಸಂಬಂಧ
ದಾವಣಗೆರೆ ಎಸ್ಪಿಗೆ ತಿಳಿಸಿದಾಗ ಅವರು ಒಂದು ವ್ಯಾನ್ನಲ್ಲಿ ಕಳುಹಿಸಿಕೊಟ್ಟರು.
ಮತ್ತು ಇದು ಐದನೇ ವಿಷಯದ ಪರೀಕ್ಷೆಯಾಗಿದ್ದು, ಅಂದು ಎಲ್ಲವೂ ಸರಿಯಾಗಿಯೇ ನಡೆದಿತ್ತು. ಆದರೆ ಪರೀಕ್ಷಾ ಸಂಯೋಜಕರು ನನ್ನನ್ನು ಟಾರ್ಗೆಟ್ ಮಾಡಿದ್ದು, ನೀನು ವಿಸಿಗೆ ಹೋಗಿ ಹೇಳಿ ಏನ್
ಮಾಡ್ತಿಯೋ ಮಾಡು ಅಂತ ಅವರು ಹೇಳಿರುವುದಾಗಿ ವಿದ್ಯಾರ್ಥಿ ಹೇಳುವುದನ್ನು ಆಡಿಯೋದಲ್ಲಿ ಕೇಳಿಸಬಹುದು.
ಇದನ್ನು ಓದಿ: ಬೆಂಗಳೂರು ಬಂದ್: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಹೆಚ್ಚುವರಿ ಬಿಎಂಟಿಸಿ ಕಾರ್ಯಾಚರಣೆ
- ಭವ್ಯಶ್ರೀ ಆರ್.ಜೆ