ಕೆ.ಎಸ್.ಆರ್.ಟಿ.ಸಿ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ ; ಯಾವ ಜಿಲ್ಲೆಗಳ ನಡುವೆ ಗೊತ್ತಾ?

Bengaluru : ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್ (ksrtc electric bus start) ಸೇವೆ ಸೋಮವಾರದಿಂದ ಪ್ರಾರಂಭಗೊಂಡಿದ್ದು, ಇದು ರಾಜ್ಯದ ಮೊದಲ ಅಂತರ ರಾಜ್ಯ ಎಲೆಕ್ಟ್ರಿಕ್ ಬಸ್ ಸೇವೆಯಾಗಿದೆ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರು-ಮೈಸೂರು ನಡುವೆ ಪಯಣ ಬೆಳಸಿದ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಫ್ಲ್ಯಾಗ್ ಹಾರಿಸುವ ಮುಖೇನ ಚಾಲನೆ ನೀಡಿತು.

ಈ ಬಸ್ ಭಾಗಶಃ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೂಲಕವೇ ಹಾದು (ksrtc electric bus start) ಹೋಗಿದೆ.

ಕೆ.ಎಸ್.ಆರ್.ಟಿ.ಸಿ ಸಂಸ್ಥೆ ನೀಡಿರುವ ಮಾಹಿತಿ ಅನುಸಾರ, ಸೋಮವಾರ ಒಟ್ಟು 35 ಪ್ರಯಾಣಿಕರು ಮೊದಲ ಅಂತರರಾಜ್ಯ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಪಡೆದುಕೊಂಡಿದ್ದಾರೆ.

ಎಸಿ ಬಸ್(AC bus) ಸೇವೆ ದರವನ್ನು 330 ರೂ. ಮತ್ತು ಎಸಿ ರಹಿತ ಬಸ್ ಸೇವಾ ದರವನ್ನು 240. ರೂ.ಗೆ ನಿಗದಿಪಡಿಸಲಾಗಿದೆ.

ಮೈಸೂರು ಮತ್ತು ಬೆಂಗಳೂರು ನಗರಗಳ ನಡುವೆ 12 ಬಸ್‌ಗಳು ಸದ್ಯ ಕಾರ್ಯನಿರ್ವಹಿಸಲಿದೆ. ಬಸ್‌ಗಳ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.

ಕೆ.ಎಸ್‌.ಆರ್‌.ಟಿ.ಸಿ ಸಂಸ್ಥೆ ರಾಜಧಾನಿ ಬೆಂಗಳೂರನ್ನು ರಾಜ್ಯದ ಸಣ್ಣ ನಗರಗಳಾದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಗೆ ಸಂಪರ್ಕಿಸಲು ಇ-ಬಸ್‌ಗಳನ್ನು(E-BUS) ಬಳಸಲು ಯೋಜಿಸುತ್ತಿದೆ

ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ರಾಜಧಾನಿ ಮತ್ತು ಸಣ್ಣ ನಗರಗಳ ನಡುವೆ ಹೆಚ್ಚಿನ ಎಲೆಕ್ಟ್ರಿಕ್ ಬಸ್ ಸೇವೆಗಳನ್ನು ಘೋಷಿಸಲಾಗುವುದು ಎಂದು ಕೆ.ಎಸ್‌.ಆರ್‌.ಟಿ.ಸಿ

ಈ ಹಿಂದೆಯು ತಿಳಿಸಿತ್ತು. ಬೆಂಗಳೂರು ಮತ್ತು ಮೈಸೂರು ನಡುವಿನ ಎಕ್ಸ್‌ಪ್ರೆಸ್‌ವೇ(Express way) ಇದೇ ವರ್ಷದ ಫೆಬ್ರವರಿ ತಿಂಗಳ ವೇಳೆಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿರುವುದರಿಂದ,

ಇದನ್ನೂ ಓದಿ: https://vijayatimes.com/nalinkumar-mocked-siddaramaiah/

ಎಲೆಕ್ಟ್ರಿಕ್ ಬಸ್ ಸೇವೆಗಳು ಬೆಂಗಳೂರು ಮತ್ತು ಮೈಸೂರು ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ನಿಗದಿಪಡಿಸಿದೆ. ಅಂದರೇ ಒಂದು ಗಂಟೆ ೩೦ ನಿಮಿಷಗಳ ಸಮಯವನ್ನು ಪ್ರಯಾಣದ ಅವಧಿಯಾಗಿ ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ವೈ-ಫೈ (WI FI) ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು (CCTV) ಮುಂಜಾಗ್ರತಾ ಕ್ರಮವಾಗಿ ಅಳವಡಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ,

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸಲು ಬೆಂಗಳೂರು ನಗರ ಸಾರಿಗೆ ಸಂಸ್ಥೆ (bmtc) ಬೆಂಗಳೂರು ರಸ್ತೆಗಳಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಿತು.
Exit mobile version