ಫ್ರೀ ಬಸ್ ಟಿಕೆಟ್ ಎಫೆಕ್ಟ್ : KSRTC ವೆಬ್‌ಸೈಟ್ ಸರ್ವರ್ ಡೌನ್, ಟಿಕೆಟ್ ಬುಕ್ ಆಗದಿದ್ರೂ ಹಣ ಕಟ್!

ಬೆಂಗಳೂರು: ಕಾಂಗ್ರೆಸ್ ಸರ್ಕಾರದ (KSRTC website server down) ಐದು ಭರವಸೆಗಳ ಪೈಕಿ ಒಂದಾಗಿರುವ ಶಕ್ತಿ ಯೋಜನೆ ಕಾರ್ಯಕ್ರಮ ಆರಂಭವಾಗಿ ಆರು ದಿನಗಳು ಕಳೆದಿವೆ.

ಈ ಯೋಜನೆಗೆ ಮಹಿಳೆಯರಿಂದ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಚಿತ ಬಸ್ ಪ್ರಯಾಣದ ಅವಕಾಶವು ಪವಿತ್ರ ಸ್ಥಳಗಳು ಮತ್ತು ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಹೆಚ್ಚಳಕ್ಕೆ ಕಾರಣವಾಗಿದೆ.

ಇದರಿಂದಾಗಿ ಕೆಎಸ್‌ಆರ್‌ಟಿಸಿ(KSRTC) ವೆಬ್‌ಸೈಟ್ ಮತ್ತು ಟಿಕೆಟ್ ಬುಕ್ಕಿಂಗ್ ಆಪ್‌ಗಳು ಸರ್ವರ್ ಡೌನ್ ಆಗಿದೆ. ಈ ವಿಚಾರವಾಗಿ ಪ್ರಯಾಣಿಕರು ಅತೃಪ್ತಿ ವ್ಯಕ್ತಪಡಿಸಿದ್ದು, ತಮ್ಮ ಖಾತೆಯಿಂದ ಹಣ ಜಮೆಯಾಗಿದೆ,

ಆದರೆ ಟಿಕೆಟ್ ನೀಡಿಲ್ಲ ಎಂದು ಉಲ್ಲೇಖಿಸಿದ್ದಾರೆ.ಶಕ್ತಿ ಯೋಜನೆ ಆರಂಭವಾದಾಗಿಂದ ಮಹಿಳೆಯರ ಓಡಾಟ ಹೆಚ್ಚಿದೆ, ಜೊತೆಗೆ ಸರ್ಕಾರಿ ಬಸ್‌ಗಳನ್ನು (Government Bus) ಬಳಸುವ ಜನರ ಸಂಖ್ಯೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ

ಮಹಿಳೆಯರು 20 ರೂಪಾಯಿ ಕಾಯ್ದಿರಿಸುವಿಕೆ ಶುಲ್ಕವನ್ನು ಪಾವತಿಸಿ KSRTC ವೆಬ್‌ಸೈಟ್/ಆ್ಯಪ್‌ನಲ್ಲಿ(Website/App) ಸಾಮಾನ್ಯ ಬಸ್‌ಗಳಿಗೆ ಟಿಕೆಟ್‌ಗಳನ್ನು ಖರೀದಿಸಬಹುದು. ಸದ್ಯ ಮಹಿಳೆಯರು ಉಚಿತ ಬಸ್

ಪ್ರಯಾಣಕ್ಕೆ ಮುಂಗಡ ಟಿಕೆಟ್ ಬುಕ್ ಮಾಡುತ್ತಿದ್ದಾರೆ, ಇದರಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮತ್ತು ಟಿಕೆಟ್ ಬುಕಿಂಗ್ ಆ್ಯಪ್‌ಗಳ ಸರ್ವರ್ ಡೌನ್ ಆಗಿದ್ದು, ಟಿಕೆಟ್ ಬುಕ್ ಆಗದಿದ್ದರೂ ಕೂಡ ಹಣ ಕಟ್ ಆಗುತ್ತಿದೆ.

ಪ್ರಯಾಣಿಕರು ಟ್ವಿಟರ್‌ನಲ್ಲಿ (Twitter) ಕೆಎಸ್‌ಆರ್‌ಟಿಸಿ ಖಾತೆಯನ್ನು ಟ್ಯಾಗ್ ಮಾಡಿ ಈ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು (Screenshot) ಹಂಚಿಕೊಂಡಿದ್ದಾರೆ. ಕಳೆದ 2 ದಿನಗಳಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮತ್ತು

ಮೊಬೈಲ್ ಬುಕಿಂಗ್ ಆ್ಯಪ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡರೂ ಟಿಕೆಟ್ ಮಾತ್ರ ಬುಕ್ ಆಗಿಲ್ಲ ಎಂದು ದೂರಿದರು.

ಇದನ್ನೂ ಓದಿ : 2023 ರ ಏಷ್ಯಾಕಪ್ ಟೂರ್ನಿ ಡೇಟ್ ಫಿಕ್ಸ್ : ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸಲಿದೆಯೇ… ಇಲ್ಲಿದೆ ಮಾಹಿತಿ

ಇನ್ನು ಕೆಲವರು ‘ಟಿಕೆಟ್ ಬುಕ್ ಆಗದಿದ್ದರೂ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ಬುಕ್ಕಿಂಗ್‌ನ ರೆಫರೆನ್ಸ್ ಸಂಖ್ಯೆಯನ್ನು (Booking Refference Number) ಹಾಕಿ ರೀಫಂಡ್ ಮಾಡಿ’ ಎಂದು ಒತ್ತಾಯಿಸಿದ್ದಾರೆ.

ಮತ್ತೊಬ್ಬ ಪ್ರಯಾಣಿಕರು ಒಟ್ಟು 4 ಟಿಕೆಟ್‌ಗಳನ್ನು ಬುಕ್ ಮಾಡಿದ್ದು, ಅವರ ಬ್ಯಾಂಕ್ ಖಾತೆಯಿಂದ ದರವನ್ನು ಡೆಬಿಟ್(Debit) ಮಾಡಲಾಗಿದೆ. ಆದರೆ, ಬುಕಿಂಗ್ ವಿಫಲವಾಗಿದೆ

ಈ ಬಗ್ಗೆ ಕೆಎಸ್‌ಆರ್‌ಟಿಸಿ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಸಮಸ್ಯೆ (KSRTC website server down) ಹಂಚಿಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರಯಾಣಿಕರ ದೂರಿನ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದಾರೆ.ನಿಮ್ಮ ಹಣವನ್ನು ಡೆಬಿಟ್ ಮಾಡಿದ್ದರೆ, 5-7 ಬ್ಯಾಂಕಿಂಗ್ ದಿನಗಳಲ್ಲಿ ಹಣವನ್ನು ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ.

ತಾಂತ್ರಿಕ ಕಾರಣಗಳಿಂದ ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿಮಗೆ ತೊಂದರೆ ಕೊಡುತ್ತಿರುವುದಕ್ಕಾಗಿ ಕ್ಷಮಿಸಿ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ’ಎಂದಿದ್ದಾರೆ.

ಇದನ್ನೂ ಓದಿ : ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ : ನೋಂದಣಿ ಪ್ರಕ್ರಿಯೆ ಯಾವಾಗದಿಂದ ಪ್ರಾರಂಭ?

ಈ ಬಗ್ಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಟಿಕೆಟ್ ಬುಕ್ಕಿಂಗ್ ಆ್ಯಪ್ ಕೆಲಸ ಮಾಡದಿರುವುದಕ್ಕೂ ಶಕ್ತಿ ಯೋಜನೆಗೂ ಯಾವುದೇ ಸಂಬಂಧವಿಲ್ಲ.ತಾಂತ್ರಿಕ ದೋಷದಿಂದ

ಮೊಬೈಲ್ ಆ್ಯಪ್‌ನಲ್ಲಿ ಬುಕಿಂಗ್ ಮಾಡಲು ಸಮಸ್ಯೆಯುಂಟಾಗಿತ್ತು ಪ್ರಸ್ತುತ ಸಮಸ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದ್ದಾರೆ.

ರಶ್ಮಿತಾ ಅನೀಶ್

Exit mobile version