ಕರ್ನಾಟಕ ವಿವಿ : 2023ರ ಪ್ರವಾಸೋದ್ಯಮ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

Dharwad: ರಾಜ್ಯದ ಪ್ರತಿಷ್ಠಿತ ಕರ್ನಾಟಕ (Karnataka) ವಿಶ್ವವಿದ್ಯಾಲಯದಿಂದ ಮಾನ್ಯತೆ ಹೊಂದಿರುವ ಧಾರವಾಡದ (Dharwad) ಕರ್ನಾಟಕ ಕಲಾ ಕಾಲೇಜಿನಲ್ಲಿರುವ ಪ್ರವಾಸೋದ್ಯಮ ವಿಭಾಗವು ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ (Course) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಪ್ರವಾಸೋದ್ಯಮ ಕೋರ್ಸ್ಗಳಲ್ಲಿ ಆಸಕ್ತಿ ಇರುವವರು, ಈ ಕೋರ್ಸಗಳಿಗೆ ಅರ್ಜಿ ಸಲ್ಲಿಸಬಹುದು. ಅದರ ಸಂಪೂರ್ಣ ವಿವರ ಇಲ್ಲಿದೆ.

ಕೋರ್ಸ್ಗಳ ಹೆಸರು : MTTM – ಮಾಸ್ಟರ್ ಆಫ್ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್
ಅವಧಿ : 2 ವರ್ಷ
ಅರ್ಹತೆ : ಯಾವುದೇ ಪದವಿ

ಕೋರ್ಸ್ ಹೆಸರು : ಡಿಪ್ಲೊಮ ಇನ್ ಹೋಟೆಲ್ (Diploma In Hotel) / ಹಾಸ್ಪಿಟಾಲಿಟಿ ಸರ್ವೀಸ್
ಕೋರ್ಸ್ ಅವಧಿ : 1 ವರ್ಷ.
ಅರ್ಹತೆ : ದ್ವಿತೀಯ ಪಿಯುಸಿ (PUC)

ಶುಲ್ಕ ವಿವರ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18,000 ರೂ.ಗಳು
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 17,163 ರೂ.ಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 13,480 ರೂ.ಗಳು

ಆಯ್ಕೆ ವಿಧಾನ : ಈ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಜಿ ಹಾಕಿದವರು ಕರ್ನಾಟಕ ವಿಶ್ವವಿದ್ಯಾಲಯ ನಡೆಸುವ ಪ್ರವೇಶಾತಿ ಪರೀಕ್ಷೆಯನ್ನು ಬರೆದು ನಂತರ ಅಂಕಗಳ ಆಧಾರದಲ್ಲಿ ಸೀಟು ಹಂಚಿಕೆಯನ್ನು ನೀಡಲಾಗುತ್ತದೆ.

ಸೌಲಭ್ಯಗಳು :
ವಸತಿ ಸೌಲಭ್ಯ
ಕನಿಷ್ಠ ಶುಲ್ಕ ಸ್ವೀಕೃತಿ.
ಶೇಕಡ 100 ರಷ್ಟು ಪ್ಲೇಸ್ಮೆಂಟ್

ಕರ್ನಾಟಕ ಆರ್ಟ್ಸ್ ಕಾಲೇಜು (Karnataka arts College), ಧಾರವಾಡ ಟೂರಿಸಂ ಸ್ಟಡಿಯಲ್ಲಿ ವಿವಿಧ ಕೋರ್ಸ್ಗಳ ಬೋಧನೆಯಲ್ಲಿ 17 ವರ್ಷಗಳ ಅನುಭವ ಹೊಂದಿದ್ದು, ಕ್ಯಾಂಪಸ್ಗಳ ಮೂಲಕವೇ ವಿದ್ಯಾರ್ಥಿಗಳು ಸೂಕ್ತ ಉದ್ಯೋಗವನ್ನು ಪಡೆದುಕೊಳ್ಳಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29-09-2023
ಪ್ರವೇಶ ಪರೀಕ್ಷೆ ದಿನಾಂಕ : 17-10-2023
ಕರ್ನಾಟಕ ಆರ್ಟ್ಸ್ ಕಾಲೇಜು, ಧಾರವಾಡ ಇವರ ಅಧಿಕೃತ ವೆಬ್ಸೈಟ್ ವಿಳಾಸ : www.kcdtourism.ac.in

Exit mobile version