ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟ!

university

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯ 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಿದೆ. ತನ್ನ ವ್ಯಾಪ್ತಿಯ ಆಯ್ದ ಅಧ್ಯಯನ ಕೇಂದ್ರಗಳಿಗಷ್ಟೇ ಫಲಿತಾಂಶದ ಪಟ್ಟಿ ರವಾನಿಸಿರುವುದು ಹಣಕಾಸಿನ ಅವ್ಯವಹಾರ ಶಂಕೆಗೆ ಕಾರಣವಾಗಿದೆ.
ಹಣ ಸಂದಾಯ ಮಾಡಿರುವ ಕೇಂದ್ರಗಳ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಉಳಿದ ಕೇಂದ್ರಗಳ ಫಲಿತಾಂಶ ತಡೆಹಿಡಿಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೋವಿಡ್ ಬಳಿಕ ಪರೀಕ್ಷೆ ನಡೆಸದೇ ಎಲ್ಲ ವಿದ್ಯಾರ್ಥಿಗಳನ್ನೂ ತೇರ್ಗಡೆಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ವಿಶ್ವವಿದ್ಯಾಲಯದ ಈ ನಿರ್ಧಾರಕ್ಕೆ ವಿದ್ಯಾವಿಷಯಕ ಪರಿಷತ್ ಸಿಂಡಿಕೇಟ್, ಅಧ್ಯಾಪಕರ ಒಕ್ಕೂಟಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತಿಂಗಳ ಹಿಂದೆಯಷ್ಟೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಪರೀಕ್ಷಾ ಸಿದ್ಧತೆಗೆ ಸಮಯ ಕಡಿಮೆ ಇದೆ ಎಂಬ ಕೆಲವರ ಆಕ್ಷೇಪವನ್ನು ನೆಪವಾಗಿಟ್ಟುಕೊಂಡು ಪರೀಕ್ಷೆ ಮುಂದೂಡಲಾಗಿತ್ತು.
ಕೆಲವರ ಆಕ್ಷೇಪವನ್ನು ನೆಪವಾಗಿಟ್ಟುಕೊಂಡು ಪರೀಕ್ಷೆ ಮುಂದೂಡಲಾಗಿತ್ತು. ಇದೀಗ ಕೇವಲ 15 ಅಂಕಗಳ ಹೋಂ ಅಸೈನ್ಮೆಂಟ್, ಸಂಪರ್ಕ ತರಗತಿಯ 5 ಅಂಕಗಳ ಆಧಾರದ ಮೇಲೆ ಇಡೀ ಪರೀಕ್ಷೆಯ ಫಲಿತಾಂಶವನ್ನೇ ಪ್ರಕಟಿಸಲಾಗಿದೆ. ಪ್ರಸ್ತುತ ಪದವಿ ತರಗತಿಗಳ ಫಲಿತಾಂಶ ಪ್ರಕಟಿಸಿದ್ದರೂ, ಎಲ್ಲ ಕೇಂದ್ರಗಳ ಫಲಿತಾಂಶ ನೀಡಿಲ್ಲ.


ತುರ್ತು ಫಲಿತಾಂಶ ಪ್ರಕಟಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಅಧ್ಯಯನ ಕೇಂದ್ರಗಳ ನಡುವಿನ ಹಣಕಾಸಿನ ಅವ್ಯವಹಾರ ಬೆಳಕಿಗೆ ಬಂದಿದೆ. ಪ್ರತಿ ವಿದ್ಯಾರ್ಥಿಯಿಂದ 2 ರಿಂದ3 ಸಾವಿರದವರೆಗೆ ವಸೂಲಿ ಮಾಡಲಾಗಿದೆ. 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 74 ಕೋಟಿಗೂ ಅಧಿಕ ಹಣ ಸಂಗ್ರಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸಿಂಡಿಕೇಟ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಿಸಿದರೆ ವಿಶ್ವವಿದ್ಯಾಲಯದ 1.75 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಕಳವಳ ವ್ಯಕ್ತಪಡಿಸಿರುತ್ತಾರೆ.

ಸಂಪರ್ಕ ತರಗತಿ ನಡೆಸದಿದ್ದರೂ ಎಲ್ಲ ವಿದ್ಯಾರ್ಥಿಗಳಿಗೂ ಗರಿಷ್ಠ 5 ಅಂಕ ನೀಡುವಂತೆ ಪರೀಕ್ಷಾಂಗ ಕುಲಸಚಿವ ತ್ಯಾಗರಾಜ್ ಅವರು ಫೆ.7 ರಂದು ಸುತೋಲೆ ಹೊರಡಿಸಿದ್ದು, ಆದೇಶದ ಪ್ರತಿ ತಲುಪುವ ಮೊದಲೇ ಫೆ.9 ರಂದು ಫಲಿತಾಂಶ ಹೊರಡಿಸಲಾಗಿದೆ.

Exit mobile version