ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನಕ್ಕೆ ಟ್ಟಿಟ್‌ ಮುಖೇನ ಶುಭ ಕೋರಿದ ಪ್ರಧಾನಿ

ನವದೆಹಲಿ: ಭಾರತದ ವೀರ ವನಿತೆ, ಬ್ರಿಟಿಷರ ವಿರುದ್ಧ ದಿಟ್ಟವಾಗಿ ಹೋರಾಡಿದ ಸಿಂಹಿಣಿ ಝಾನ್ಸಿಯ  ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, “ಭಾರತದ ಇತಿಹಾಸದಲ್ಲಿ ರಾಣಿ ಲಕ್ಷ್ಮೀಬಾಯಿ ಅವರಿಗೆ ವಿಶೇಷ ಸ್ಥಾನವಿದೆ. ಆಕೆಯ ಶೌರ್ಯವನ್ನು ಮುಂದಿನ ತಲೆಮಾರುಗಳು ಎಂದಿಗೂ ಮರೆಯುವುದಿಲ್ಲ” ಎಂದು ಪ್ರಧಾನಿ ಹೇಳಿದ್ದಾರೆ.

ಭಾರತದ ರಕ್ಷಣಾ ವಲಯಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು  ಝಾನ್ಸಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ರಾಣಿ ಲಕ್ಷ್ಮೀಬಾಯಿಯವರು 19 ನವೆಂಬರ್1829ರಲ್ಲಿ ಕಾಶಿ ವಾರಣಾಸಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಅವರ ನಿಜವಾದ ಹೆಸರಾಗಿದೆ.

Exit mobile version