ಹಿಮಾಚಲ ಪ್ರದೇಶ, ಆ. 12: ರಾಜ್ಯದ ಕಿನ್ನೌರ್ ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿತಿದ್ದು ಈ ಪರಿಣಾಮ ಈಗಾಗಲೇ 13 ಮಂದಿ ಮೃತಪಟ್ಟಿದ್ದಾರೆ.
ಚಲಿಸುತ್ತಿದ್ದ ಬಸ್ ಒಂದರ ಮೇಲೆ ಭೂ ಕುಸಿತ ಸಂಭವಿಸಿದ್ದು, ಭಾರತ – ಟಿಬೇಟ್ ಗಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಇದುವರೆಗೂ ಅವಶೇಷದಡಿ ಸಿಲುಕಿರುವ 13 ಮಂದಿಯ ಶವವನ್ನು ಹೊರತೆಗೆಯಲಾಗಿದೆ. ಇನ್ನೂ ಹಲವು ಮಂದಿ ಭೂ ಕುಸಿತವಾಗಿರುವ ಸ್ಥಳದಡಿ ಸಿಲುಕಿರುವ ಸಾಧ್ಯತೆ ಕೂಡ ಇದೆ ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ ಬಸ್ ಸುಮಾರು 500 ಮೀಟರ್ ತಳಕ್ಕೆ ಹೋಗಿರಬಹುದು ಎಂದು ಮೂಲಗಳು ತಿಳಿಸಿವೆ. ಈ ಅವಶೇಷದಡಿ ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆಯಿದ್ದು ಇಗಾಗಲೇ 13 ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ ಮತ್ತು 13 ಜನರ ರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ