Visit Channel

ಶಾಸಕ ಸತೀಶ್ ರೆಡ್ಡಿ ಐಷಾರಾಮಿ ಕಾರುಗಳಿಗೆ ಬೆಂಕಿ: ದುಷ್ಕರ್ಮಿಗಳು ಪರಾರಿ

MLA-SATHISH-REDDY-CAR-FIRE

ಬೆಂಗಳೂರು, ಆ. 12: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ 2 ಕಾರುಗಳಿಗೆ ದುಷ್ಕರ್ಮಿಗಳು ನಿನ್ನೆ ತಡ ರಾತ್ರಿ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ನಿನ್ನೆ ತಡರಾತ್ರಿ ಸುಮಾರು 1.30 ರ ಹೊತ್ತಿಗೆ ಸತೀಶ್ ರೆಡ್ಡಿಯವರ ಮನೆಯ ಹಿಂಬದಿಯ ಗೇಟ್ ನಿಂದ ಬಂದ 4 ಜನ ದುಷ್ಕರ್ಮಿಗಳು  ಫಾರ್ಚೂನರ್ ಸೇರಿದಂತೆ ಒಟ್ಟು 2 ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ತಿಳಿದು ಬಂದಿದೆ.

ಇ ಬ್ಗಗ್ಗೆ ಪ್ರತಿಕ್ರಿಯಿಸಿದ ಸತೀಶ್ ರೆಡ್ಡಿ ಯಾರೊ ದುರಾಲೋಚನೆಯಿಂದ ಈ ರೀತಿ ಮಾಡಿದ್ದಾರೆ ಯಾರು ಎನೂ ಬೇಕಾದರೂ ಮಾಡಬಹುದು ಎಂದು ತೋರಿಸಲು ಇ ರೀತಿ ಮಾಡಿದ್ದಾರೆ. ರಾತ್ರಿ 1.23ರ ಸುಮಾರಿಗೆ ಹಿಂಬದಿಯ ಗೇಟ್ ನಿಂದ ಬಂದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹಿಂಬದಿ ಗೇಟ್ ನಿಂದ ಪರಾರಿಯಾಗಿದ್ದಾರೆ. ಪೊಲೀಸ್ ಮತ್ತು ವಾಚ್ಮನ್ ಮುಂದಿನ ಗೇಟ್ ನಲ್ಲಿದ್ದರು, ಇದು ರಾಜಕೀಯ ಹಿನ್ನಲೆಯಲ್ಲಿ ನಡೆದಿದೆ ಎಂದು ನನಗನ್ನಿಸುತ್ತಿಲ್ಲ  ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೇಟಿ ನೀಡಿದ ಡಿಸಿಪಿ ಶ್ರೀನಾಥ್ ಹಾಗೂ ಪೊಲೀಸ್ ಜಂಟಿ ಆಯುಕ್ತ ಮುರುಗನ್ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.