ಹಾಸನದ ಲಕ್ಷ್ಮೀ ವರದರಾಜನನ್ನು ಕೇಳುವವರೇ ಇಲ್ಲ

ಸಿಟಿಜನ್‌ ಜರ್ನಲಿಸ್ಟ್‌ನಲ್ಲಿ ದೇವರ ನೋವನ್ನ ಆಲಿಸೋಣ. ಹಾಸನದ ಕೊಂಡಜ್ಜಿ ಗ್ರಾಮದ ಇತಿಹಾಸ ಪ್ರಸಿದ್ಧ ಲಕ್ಷ್ಮೀ ವರದರಾಜ ದೇವಾಲಯ ದುರಸ್ಥಿತಿಗಾಗಿ ಕೆಡವಿ15 ವರ್ಷಗಳೇ ಕಳೆದಿವೆ. ಆದ್ರೆ ಇದನ್ನ ಸರಿಪಡಿಸುವ ಗೋಚಿಗೆ ಯಾರೂ ಹೋಗದೆ ಹೇಗೆ ಪಾಳು ಬಿದ್ದಿದೆ ಅನ್ನೋದನ್ನ ನೋಡೋಣ ಬನ್ನಿ. ಇದು ಹಾಸನ ಜಿಲ್ಲೆಯ ಹಾಸನ ತಾಲೂಕಿನ ಕೊಂಡಜ್ಜಿ ಗ್ರಾಮದ ಜನರ ನೋವು. ಇಲ್ಲಿ ಹೊಯ್ಸಳ ಕಾಲದ  ಅಪರೂಪದ  ಪುರಾತನ ದೇವಾಲಯವಿದೆ. ನವೀಕರಣ ಮಾಡುವ ಹೆಸರಿನಲ್ಲಿ ಇದನ್ನು ೧೫ ವರ್ಷಗಳ ಹಿಂದೆ ಕೆಡವಿದ್ದಾರೆ.

ದೇವಾಲಯ ನವೀಕರಣ ಕೆಲಸ ಸ್ವಲ್ಪವೇ  ಆಗಿದ್ದು ಇನ್ನುಳಿದ ಕೆಲಸ ಹಾಗೇ ಬಾಕಿಯಾಗಿದೆ . ಪ್ರವಾಸೋದ್ಯಮ ಇಲಾಖೆ ಹಾಗೂ ಮಜರಾಯಿ ಇಲಾಖೆಯ ನಿರ್ಲಕ್ಷಕ್ಕೆ ಒಳಗಾದ ಈ ದೇವಾಲಯ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಎನ್ನುವುದು ಜನರ ನೋವು. ಈ ದೇವಾಲಯದ  ಗೋಡೆ, ನೆಲ, ಎಲ್ಲಾ ಕಿತ್ತು ಹೋಗಿದೆ. ದೂಳು ತುಂಬಿದೆ ಈ ದೇವಸ್ಥಾನವನ್ನು ಇಂತಹ ಸ್ಥಿತಿಯಲ್ಲಿಟ್ಟಿರುವುದು ನಿಜಕ್ಕೂ  ದುರಂತವೇ ಸರಿ.

ದೇವಾಲಯದಲ್ಲಿ ಸುಮಾರು 15 ಅಡಿ ಎತ್ತರದ ಲಕ್ಷ್ಮೀವರದರಾಜ ಸ್ವಾಮಿಯ ಮೂರ್ತಿ ಇದೆ. ಈ ದೇವಸ್ಥಾನಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದೆ. ಈ ಬೃಹದಾಕಾರದ ಮೂರ್ತಿ  ಹೊಯ್ಸಳರ ವಾಸ್ತು ಶಿಲ್ಪವನ್ನು ಪ್ರತಿಬಿಂಬಿಸುತ್ತಿದೆ. ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದ ಜೀರ್ಣೋದ್ಧಾರಕ್ಕಾಗಿ ೨೫ ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಹಣದಲ್ಲಿ ಬರೀ ಕಾಲು ಭಾಗದಷ್ಟು ಮಾತ್ರ ಕೆಲಸ ನಡೆದಿದೆ. ಕಾಮಗಾರಿ ಮುಂದುವರಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ಇದು ಪಾಳು ಬಿದ್ದಿದೆ.   

ಮೊದಲು  ಈ ದೇವಸ್ಥಾನಕ್ಕೆ ಹಲವಾರು ಭಕ್ತರು ಬರುತ್ತಿದ್ದರು ಆದರೆ ಈಗ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕಾರಣ ಇಲ್ಲಿನ ದುರಸ್ಥಿ ಕೆಲಸ ಬಾಕಿ ಇದ್ದು ನೆಲವನ್ನೆಲ್ಲಾ ಅಗೆದು ಹಾಕಿ ಭಕ್ತರು ಬರೋಕೆ ಕಷ್ಟವಾಗಿದೆ ಎನ್ನುವುದು ಊರಿನ ಜನರ ನೋವು. ಹಾಸನ ಜಿಲ್ಲೆ ವಾಸ್ತು ಶಿಲ್ಪಕ್ಕೆ ಪ್ರಪಂಚದಾದ್ಯಂತ ಗುರುತಿಸಿಕೊಂಡಂತಹ ಪ್ರಖ್ಯಾತ  ಜಿಲ್ಲೆಯಾಗಿದೆ. ಇದು ಶಿಲ್ಪ ಕಲೆಗಳ ಆಗರವೂ ಹೌದು.  ಬೇಲೂರು ಹಳೆಬೀಡಿನಂತೆ ಇಲ್ಲಿಗೂ ಜನ ಬರಬೇಕು ಹಾಗೆ ಇದರ ಅಭಿವೃದ್ದಿ ಕೆಲಸಗಳು  ಆಗಬೇಕು ಅನ್ನೋದು ಜನರ ಆಶಯ. ಪ್ರಾಚೀನ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನಕ್ಕೆ ಮೂಲ ಸೌಕರ್ಯಗಳು ಬೇಕು. ಇದರ ಜೀರ್ಣೋದ್ಧಾರ ಶೀಘ್ರವಾಗಿ ನಡೆಯಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಮಹದಾಸೆಯಾಗಿದೆ. ವಿಷುವಲ್ಸ್:

ಈಗಾಗಲೇ ಗ್ರಾಮಸ್ಥರು ಅಲ್ಲಿನ ಶಾಸಕರಾದ ಪ್ರೀತಮ್ ಗೌಡರಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಿ ಇದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಲಕ್ಷ್ಮೀ ವರದರಾಜ ದೇವಸ್ಥಾನದ ಅಭಿವೃದ್ಧಿಗೆ ರಾಜಕೀಯ ಮುಖಂಡರು, ಅಲ್ಲಿನ ಜನಪ್ರತಿನಿಧಿಗಳೂ  ಗಮನ ಹರಿಸಿ ಅನುದಾನ ನೀಡಬೇಕು. ಈ ದೇವಾಲಯವನ್ನು ಒಂದು ಒಳ್ಳೆಯ ಪ್ರವಾಸಿ ತಾಣವಾಗಿಸಬೇಕೆಂಬುದು ಜನರ ಬೇಡಿಕೆಯಾಗಿದೆ. ಆದಷ್ಟು ಬೇಗ ರಾಜಕಾರಣಿ ಮುಖಂಡರು, ಅಲ್ಲಿನ ಜನಪ್ರತಿನಿಧಿಗಳು, ಪ್ರವಾಸೋದ್ಯಮ ಇಲಾಖೆ, ಹಾಗೂ ಮಜರಾಯಿ ಇಲಾಖೆ ಇದರತ್ತ ಗಮನ ಹರಿಸಿ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿ ಮುಂದಿನ ಪೀಳಿಗೆಗೆ ಇತಿಹಾಸದ ದರ್ಶನವನ್ನು ನೀಡಲು ಅನುಕೂಲ ಮಾಡಿಕೊಡಬೇಕೆಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version