ಬ್ಲಾಕ್‌ಮೇಲ್‌ ಆರೋಪದಡಿ ಲೀನಾ ಪೌಲ್‌ ಬಂಧನ

ದೆಹಲಿ ಸೆ 6 : 200 ಕೋಟಿ ರೂ ಬ್ಲಾಕ್‌ಮೇಲ್ ಆರೋಪದಡಿ ದೆಹಲಿ ಪೊಲೀಸರು ಲೀನಾ ಮರಿಯಾ ಪೌಲ್ ಅವರನ್ನು ಬಂಧಿಸಿದ್ದಾರೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್​​ ಚಂದ್ರಶೇಖರ್ ​ ಅವರ ಪತ್ನಿ ಲೀನಾ ಮರಿಯಾ ಪೌಲ್​ ಅವರನ್ನು ಸುಲಿಗೆ ಪ್ರಕರಣದಲ್ಲಿ ಸಹಾಯ ಮಾಡಿದ ಆರೋಪದಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. 21 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಕೇಶ್​ಗೆ 200 ಕೋಟಿ ರೂ ಸುಲಿಗೆ ಮಾಡಲು ಸಹಾಯ ಮಾಡಿದಕ್ಕಾಗಿ ದೆಹಲಿಯ ಆರ್ಥಿಕ ವಿಭಾಗದ ಭಾನುವಾರದಂದು ಲೀನಾ ಅವರನ್ನು ಬಂಧಿಸಿದ್ದಾರೆ.

2019ರಲ್ಲಿ ರೆಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್ (ಆರ್‌ಎಫ್‌ಎಲ್) ನಲ್ಲಿ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಿಂದರ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಚುನಾವಣಾ ಆಯೋಗದ ಲಂಚ ಪ್ರಕರಣ ಸೇರಿದಂತೆ 21 ಪ್ರಕರಣಗಳಲ್ಲಿ ಆರೋಪಿಯಾಗಿರುವ ಚಂದ್ರಶೇಖರ್ ಅವರನ್ನು ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀನಾ ಮರಿಯಾ ಪೌಲ್ ಅವರನ್ನು ಬಂಧಿಸಲಾಗಿದೆ.

Exit mobile version