ನೆಚ್ಚಿನ ಸ್ಪಿನ್ ಮಾಂತ್ರಿಕನಿಗೆ ಅಂತಿಮ ವಿದಾಯ ಹೇಳಿದ ಅಭಿಮಾನಿಗಳು!

spinner

ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಬೌಲರ್ ಶೇನ್ ವಾರ್ನ್ ಅವರು ಶುಕ್ರವಾರ ಹೃದಯಘಾತದಿಂದ ಥೈಲ್ಯಾಂಡ್ ನಲ್ಲಿ ಮೃತಪಟ್ಟಿದ್ದಾರೆ. ಶೇನ್ ವಾರ್ನ್ ಅವರ ಸಾವಿನ ಸುದ್ದಿ ಕೇಳಿದ ಕ್ರಿಕೆಟ್ ತಂಡವು ತೀವ್ರ ಅಘಾತಕ್ಕೆ ಒಳಗಾಗಿದೆ. ಶೇನ್ ವಾರ್ನ್ ಅವರ ಸಾವಿಗೆ ಇಡೀ ಜಗತ್ತು ಕಂಬನಿ ಮಿಡಿದಿದೆ. ಶೇನ್ ವಾರ್ನ್ ಅವರಿಗೆ 52 ವರ್ಷವಾಗಿತ್ತು. ಇವರ ಸಾವು ಇಡಿ ಕ್ರಿಕೆಟ್ ತಂಡದವರಿಗೂ ಮತ್ತು ಇವರ ಅಭಿಮಾನಿಗಳಿಗೂ ಅಪಾರ ನೋವನ್ನು ತಂದೊಡ್ಡಿದೆ.

ಇನ್ನು ಇವರ ಬಗ್ಗೆ ತಿಳಿಯುವುದಾದರೆ, ಶೇನ್ ವಾರ್ನ್ ಅವರು ಒಬ್ಬ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಇವರು ಪ್ರಥಮ ಭಾರಿಗೆ,1992ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ, 1999 ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಪಡೆದು ವಿಜಯವನ್ನು ಸಾಧಿಸಿದ್ದರು. ಆಸ್ಟ್ರೇಲಿಯಾ ಮೂರೂ ಬಾರಿಗೆ ವಿಶ್ವಕಪ್ ಗೆಲ್ಲುವಲ್ಲಿ ಇವರ ಪತ್ರ ಅಪಾರವಾದದ್ದು, ಇವರು ಆಸ್ಟ್ರೇಲಿಯ ಪರ 145 ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಇವರು ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಹೌದು. ಇವರನ್ನು ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಎಂದು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.


16 ವರ್ಷಗಳ ಕಾಲ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಶೇನ್ ವಾರ್ನ್ ಅವರು ಅತೀ ಹೆಚ್ಚು ವಿಕೆಟ್ ಪಡೆಯುವರಲ್ಲಿ ಒಬ್ಬರಾಗಿದ್ದರು.
194 ಏಕದಿನ ಪಂದ್ಯದಲ್ಲಿ 299 ವಿಕೆಟ್ ಪಡೆದಿದ್ದಾರೆ. ಶೇನ್ ವಾರ್ನ್ ಅವರು 1992ರಿಂದ 2007 ರವರೆಗೂ ಸಕ್ರಿಯವಾಗಿ ಕ್ರಿಕೆಟ್ನಲ್ಲಿದ್ದರು. ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಇವರು ಕೋಚಿಂಗ್ ಹುದ್ದೆಗೆ ಸೇರಿ, ಹೊಸ ತಂಡಗಳಿಗೆ ಕೋಚಿಂಗ್ ನೀಡುವ ಮೂಲಕ ತಮ್ಮ ಜೀವನ ಕಳೆದರು. ಹೀಗೆ ಕ್ರಿಕೆಟ್ ನಲ್ಲಿ ನಾನಾ ಸಾಧನೆ ಮಾಡಿದ ದಿಗ್ಗಜ ಇಂದು ಇಹಲೋಕ ತ್ಯಜಿಸಿದ್ದು ಎಲ್ಲರಿಗೂ ಅಪಾರ ನೋವು ತಂದ ಸಂಗತಿಯಾಗಿದೆ.

Exit mobile version