ನಕಲಿ ಡಾಕ್ಟರೇಟ್ ಅಥವಾ ಅನಧಿಕೃತ ಪದವಿ ನೀಡಿದರೆ ಕಠಿಣ ಶಿಕ್ಷೆ – ಡಾ. ಅಶ್ವತ್ಥ್ ನಾರಾಯಣ್

 ಬೆಂಗಳೂರು ಸೆ 24 : ರಾಜ್ಯದಲ್ಲಿ ಯಾವುದೇ ಸಂಸ್ಥೆ‌ಗಳು ನಕಲಿ ಡಾಕ್ಟರೇಟ್ ಅಥವಾ ಅನಧಿಕೃತ ಪದವಿ, ನೀಡುವುದು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸುವಂತೆ 2021 ರ ಫೆಬ್ರವರಿ 26 ರಂದು ಆದೇಶ ಹೊರಡಿಸಲಾಗಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ 23 ಸರ್ಕಾರಿ ವಿವಿ‌ಗಳಿವೆ. ಅವುಗಳು ಈ ವರೆಗೆ 1856 ಜನರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಾಗೆಯೇ 21 ಖಾಸಗಿ ವಿವಿ‌ಗಳಿದ್ದು, ಅವುಗಳಲ್ಲಿ ಐದು ವಿವಿ‌ಗಳು 23 ಮಂದಿಗೆ ಗೌರವ ಡಾಕ್ಟರೇಟ್ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಗೌರವ ಡಾಕ್ಟರೇಟ್‌ ಅನ್ನು ನೀಡುವುದಕ್ಕೂ ವಿವಿ‌ಗಳು ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಪ್ರಕ್ರಿಯೆ ನಡೆಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುತ್ತದೆ. ವಿವಿ‌ಗಳು ಶಿಫಾರಸ್ಸು ಮಾಡಿದ ಹೆಸರುಗಳನ್ನು ರಾಜ್ಯಪಾಲರು ನೇಮಕ ಮಾಡುವ ತಜ್ಞರ ಸಮಿತಿ ಪರಿಶೀಲನೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

Exit mobile version