ಕಳೆದ 24ಗಂಟೆಯಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಕೊರೊನಾ ದಾಖಲು

ನವದೆಹಲಿ, ಜೂ. 08: ದೇಶದಲ್ಲಿ 63 ದಿನಗಳ ಬಳಿಕ ಮೊದಲ ಬಾರಿ ಕಳೆದ ೨೪ ಗಂಟೆಯಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೈನಂದಿನ ಸೋಂಕು ದೃಢ ಪ್ರಮಾಣವು ಶೇಕಡ 4.62ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ಭಾರತದಲ್ಲಿ ಒಂದೇ ದಿನ 86,498 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು 66 ದಿನಗಳಲ್ಲಿ ವರದಿಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2,89,96,473ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ 2,123 ಮಂದಿ ಮೃತಪಟ್ಟಿದ್ದು, ಇದು 47 ದಿನಗಳಲ್ಲಿ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ಮೃತರ ಸಂಖ್ಯೆಯು 3,51,309ಕ್ಕೆ ಹೆಚ್ಚಿದೆ.

ಸೋಮವಾರ 18,73,485 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೆ ದೇಶದಲ್ಲಿ 36,82,07,596 ಪರೀಕ್ಷೆಗಳನ್ನು ನಡೆಸಲಾಗಿವೆ. ದೇಶದಲ್ಲಿ ಸತತ 15 ದಿನಗಳಿಂದ ದೈನಂದಿನ ಸೋಂಕು ದೃಢ ಪ್ರಮಾಣವು ಶೇಕಡ 10ಕ್ಕಿಂತ ಕಡಿಮೆಯಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 13,03,702ಕ್ಕೆ ಇಳಿಕೆಯಾಗಿವೆ.

Exit mobile version