India: ಖಲಿಸ್ತಾನಿ (Khalistan) ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ನಾವು (let Canada Evidence to India) ಯಾವುದೇ ತನಿಖೆಯನ್ನು ನಿರಕಾರಿಸುವುದಿಲ್ಲ. ಆದರೆ ಭಾರತ ಸರ್ಕಾರದ
ಏಜೆಂಟ್ಗಳು ಹರ್ದೀಪ್ ಸಿಂಗ್ ನಿಜ್ಜರ್ನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯನ್ನು ನೀಡಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಹೇಳಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದು, ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಭಾರತದ ಮೇಲೆ
ಆರೋಪವನ್ನು ಮಾಡಿತ್ತು. ಈ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತವೇ ಈ ಕೆಲಸವನ್ನು ಮಾಡಿದ್ದು, ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಭಾರತವು ಕೂಡ
ನಾವು ಎಲ್ಲದಕ್ಕೂ ಸಿದ್ಧ (let Canada Evidence to India) ಎಂದು ತಿಳಿಸಿತ್ತು.
ಇದೀಗ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ನಾವು ಯಾವುದೇ ತನಿಖೆಯನ್ನು ನಿರಕಾರಿಸುವುದಿಲ್ಲ. ಆದರೆ ಭಾರತ
ಸರ್ಕಾರದ ಏಜೆಂಟ್ಗಳು ಹರ್ದೀಪ್ ಸಿಂಗ್ ನಿಜ್ಜರ್ನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯನ್ನು ನೀಡಬೇಕು ಎಂದು ಹೇಳಿದ್ದಾರೆ.
ಎಸ್ ಜೈಶಂಕರ್ ಅವರು ಬ್ರಿಟನ್ (Britain) ಪ್ರವಾಸದಲ್ಲಿರುವ ಬ್ರಿಟನ್ನಲ್ಲಿ ನಡೆದ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಲಿಯೋನೆಲ್ ಬಾರ್ಬರ್ (Leonel Barber) ಅವರೊಂದಿಗೆ ಮಾತನಾಡಿದ
ಸಂದರ್ಭದಲ್ಲಿ ಭಾರತದ ಮೇಲೆ ಇಂತಹ ಆರೋಪ ಮಾಡುವ ಮುನ್ನ ಸಾಕ್ಷ್ಯಗಳನ್ನು ನೀಡಿ. ನಾವು ಯಾವುದೇ ತನಿಖೆ ನಿರಾಕರಿಸುವುದಿಲ್ಲ. ಇದುವರೆಗೂ ಕೆನಡಾ ಭಾರತಕ್ಕೆ ಈ ಬಗ್ಗೆ ಯಾವುದೇ
ಪುರಾವೆಯನ್ನು ನೀಡಿಲ್ಲ ಎಂದು ಹೇಳಿದರು.
ಖಲಿಸ್ತಾನದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ
ಜೂನ್ (June) 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಮಾಡಲಾಗಿದ್ದು, ನಂತರ ಈ ಹತ್ಯೆಯನ್ನು ಭಾರತದ ಏಜೆಂಟ್ಗಳು
ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಸೆಪ್ಟೆಂಬರ್ನಲ್ಲಿ ಆರೋಪಿಸಿದರು. ಅಲ್ಲಿಂದ ಭಾರತ ಮತ್ತು ಕೆನಡಾ ಸಂಬಂಧ ಉತ್ತಮವಾಗಿಲ್. ಆದರೆ ಈ ಹಿಂದೆಯೇ
ಭಾರತ ಆತನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿತ್ತು.
ಪ್ರಧಾನಿ ಟ್ರುಡೊ ಅವರ ಆರೋಪಗಳು ದಾಖಲೆರಹಿತ: ಭಾರತ
ಭಾರತವು ಪ್ರಧಾನಿ ಟ್ರುಡೊ ಅವರ ಆರೋಪಗಳನ್ನುನಿರಾಧಾರ ಎಂದು ತಳ್ಳಿಹಾಕಿದ್ದು, ಕೆನಡಾದಲ್ಲಿ (Canada) ಖಲಿಸ್ತಾನ್ ಪರ ಚಳುವಳಿಗಳನ್ನು ಉಲ್ಲೇಖಿಸಿದ ಜೈಶಂಕರ್ ವಾಕ್ ಮತ್ತು ಅಭಿವ್ಯಕ್ತಿ
ಸ್ವಾತಂತ್ರ್ಯವು ಕೆಲವು ಜವಾಬ್ದಾರಿಗಳೊಂದಿಗೆ ಬರುತ್ತದೆ. ಹಾಗೂ ಆ ಸ್ವಾತಂತ್ರ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು ತಪ್ಪು ಎಂದು ಹೇಳಿದ್ದಾರೆ.
ಇದನ್ನು ಓದಿ: ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಮೂರು ಕಾಸಿಗೆ ಹರಾಜಾಗಿದೆ : ಕುಮಾರಸ್ವಾಮಿ ವಾಗ್ದಾಳಿ
- ಭವ್ಯಶ್ರೀ ಆರ್ ಜೆ