Viral : ಒಬ್ಬ ತಾಯಿ ಒಂದು ಮಗುವನ್ನು ಗರ್ಭದಲ್ಲಿ ಹೊತ್ತ ಕ್ಷಣದಿಂದ, ಜೀವನಪೂರ್ತಿ ಮಗುವಿಗಾಗಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಳ್ಳುತ್ತಾಳೆ. ಮಕ್ಕಳ ಖುಷಿಯಲ್ಲೇ ತನ್ನ ಖುಷಿಯನ್ನು ಕಂಡುಕೊಳ್ಳುತ್ತಾಳೆ. ತನ್ನ ಕರುಳಕುಡಿಗಾಗಿ ಜೀವನದಲ್ಲಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧವಾಗುತ್ತಾಳೆ.

ಇಂಥಾ ತಾಯಿಗಾಗಿ ಒಂದು ದಿನವಲ್ಲ, ವರ್ಷ ಪೂರ್ತಿ ಮೀಸಲಿಟ್ಟರೂ ಕಡಿಮೆಯೇ. ಆದರೆ, ಇಲ್ಲೊಬ್ಬ ತಾಯಿಯ ಬಗ್ಗೆ ಕೇಳಿದರೆ ನೀವು ಖಂಡಿತ ಅಚ್ಚರಿಗೊಳಗಾಗುತ್ತೀರಿ.
ಹೌದು, ಈಕೆ ಇಡೀ ಜಗತ್ತನ್ನೇ ಅಚ್ಚರಿಗೊಳಪಡಿಸಿದ ತಾಯಿ. ಕೇವಲ 5 ವರ್ಷ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದಾಕೆ. ಇಂದಿಗೂ ಜಗತ್ತಿನಾದ್ಯಂತ ವೈದ್ಯರಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.
ಇದನ್ನೂ ಓದಿ : https://vijayatimes.com/bengaluru-it-bt-companies-struggles-due-to-rain/
ಕೇವಲ 5 ವರ್ಷ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂದು ಸ್ವತಃ ವೈದ್ಯರು ಅಚ್ಚರಿಗೊಂಡಿದ್ದಾರೆ.
ಹೌದು, ಕೇವಲ 5 ವರ್ಷ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಈಕೆಯನ್ನು ವಿಶ್ವದ ಅತ್ಯಂತ ಕಿರಿಯ ತಾಯಿ ಎಂದು ಕರೆಯಲಾಗುತ್ತದೆ.

ಈ ತಾಯಿಯ ಹೆಸರು ಲೀನಾ ಮೆಡಿನಾ(Lina Medina). ಲೀನಾ ಮೆಡಿನಾ 27 ಸೆಪ್ಟೆಂಬರ್ 1933ರಂದು ಪೆರುವಿನ ಟಿಕ್ರಾಪೋದಲ್ಲಿ ಜನಿಸಿದರು. ಲೀನಾ ಕೇವಲ 5 ವರ್ಷದವಳಿದ್ದಾಗ, ಇದ್ದಕ್ಕಿದ್ದಂತೆ ಅವಳ ಹೊಟ್ಟೆಯ ಗಾತ್ರವು ಹೆಚ್ಚಾಗತೊಡಗಿತು.
ಮೊದಮೊದಲು ಲೀನಾ ಅವರ ಪೋಷಕರು ಗೆಡ್ಡೆಯ ಕಾರಣದಿಂದ ಹೊಟ್ಟೆ ಬೆಳೆಯುತ್ತಿದೆ ಎಂದು ಭಾವಿಸಿದ್ದರು. ಆದರೆ ಅದರ ಅಸಲಿಯತ್ತೇ ಬೇರೆಯಾಗಿತ್ತು.
ಹೌದು, ವೈದ್ಯರು ಲೀನಾಳನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದು ಕಂಡುಬಂದಿತ್ತು. .
ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬುದು ವೈದ್ಯರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅಷ್ಟು ಸಣ್ಣ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದು, ಲೀನಾಳ ಜೀವಕ್ಕೆ ಅಪಾಯಕಾರಿಯಾಗಿತ್ತು.

ಹೆರಿಗೆ ಮಾಡಿಸುವುದು ಕೂಡ ವೈದ್ಯರ ಪಾಲಿಗೂ ಸವಾಲಾಗಿತ್ತು. ಏಕೆಂದರೆ, ಇದು ಲೀನಾಳ ಜೀವಕ್ಕೆ ಅಪಾಯಕಾರಿಯಾಗಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ಅಂತಿಮವಾಗಿ ಮೇ 14, 1939ರಂದು ಲೀನಾ ಕೇವಲ 5 ವರ್ಷ ವಯಸ್ಸಿನಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದರು.
ಈ ಸುದ್ದಿ ಆ ಸಮಯದಲ್ಲಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಲೀನಾಗೆ ಹೆರಿಗೆಯಾದಾಗ ಆಕೆಯ ಮಗುವಿನ ತೂಕ 2.7 ಕೆಜಿ ಇತ್ತು. ಲೀನಾಗೆ ಪ್ರಿಕೋಸಿಯಸ್ ಪ್ಯೂಬರ್ಟಿ ಎಂಬ ಸಮಸ್ಯೆ ಇತ್ತು ಎಂಬ ಸತ್ಯ ಬಳಿಕ ಬಹಿರಂಗವಾಯ್ತು. ಈ ಸಮಸ್ಯೆ ಎದುರಿಸುವವರಿಗೆ ಲೈಂಗಿಕ ಅಂಗಗಳು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಯುತ್ತವೆ.
ಇದನ್ನೂ ಓದಿ : https://vijayatimes.com/easy-tips-to-get-a-good-sleep/
ವರದಿಯ ಪ್ರಕಾರ ಲೀನಾಗೆ 3 ವರ್ಷ ವಯಸ್ಸಿನಲ್ಲೇ ಮುಟ್ಟು ಆರಂಭವಾಗಿತ್ತು ಎಂದು ತಿಳಿದುಬಂದಿದೆ. ಇನ್ನು, ಲೀನಾಳ ಮಗ ಗೆರಾರ್ಡೊಗೆ ಹತ್ತು ವರ್ಷವಾಗುವವರೆಗೂ ಆತ ಲೀನಾಳನ್ನು ತನ್ನ ಒಡಹುಟ್ಟಿದ ಸಹೋದರೀ ಎಂದೇ ನಂಬಿದ್ದ. ನಂತರ ಆಕೆ ತನ್ನ ಸಹೋದರಿಯಲ್ಲ, ಜನ್ಮ ನೀಡಿದ ತಾಯಿ ಎಂಬ ವಿಷಯ ಆತನಿಗೆ ಅರಿವಾಗಿತ್ತು.
ಲೀನಾ ಮೆಡೀನಾ ಎಂದಿಗೂ ತನ್ನ ಮಗುವಿನ ನಿಜವಾದ ತಂದೆ ಯಾರು ಎಂದು ಬಹಿರಂಗ ಪಡಿಸಲೇ ಇಲ್ಲ. ಏಕೆಂದರೆ ಅಕೆಗೆ ನಿಜವಾಗಿಯೂ ಏನಾಯಿತು ಮತ್ತು ಹೇಗಾಯಿತು ಎಂಬ ತಿಳಿವಳಿಕೆ ಇಲ್ಲದ ವಯಸ್ಸಿನಲ್ಲಿ ತಾಯಿಯಾಗಿದ್ದಳು.
ಹೀಗೆ ತಾಯಿ ಮತ್ತು ಮಗ ಒಟ್ಟೊಟ್ಟಿಗೇ ಬೆಳೆದು ಕಡೆಗೆ 1979 ರಲ್ಲಿ ತಮ್ಮ 40ನೇ ವಯಸ್ಸಿನಲ್ಲಿ ಮಗ ಗೆರಾರ್ಡೊ ಮೂಳೆ ಸಂಬಂಧಿತ ಕಾಯಿಲೆಯಿಂದ ನಿಧನ ಹೊಂದಿದ.

ಮೆಡೀನಾ ಕೂಡಾ ಬೆಳೆದು ದೊಡ್ಡವಳಾದ ಮೇಲೆ ಲೀನಾ ಚಿಕಿತ್ಸಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗಲೇ, ಶಾಸ್ತ್ರೋಕ್ತವಾಗಿ ರೌಲ್ ಎಂಬುವರನ್ನು ವಿವಾಹವಾಗಿ, 1972 ರಲ್ಲಿ ತನ್ನ 39ನೇ ವಯಸ್ಸಿನಲ್ಲಿ ಎರಡನೇ ಮಗನಿಗೆ ಜನ್ಮ ನೀಡಿದರು. 85 ವರ್ಷದ ಲೀನಾ ಇಂದಿಗೂ ಆರೋಗ್ಯಕರವಾಗಿ ಪೆರುವಿನಲ್ಲಿ ವಾಸಿಸುತ್ತಿದ್ದಾರೆ.
- ಪವಿತ್ರ