ಹೊಸದಿಲ್ಲಿ: ಕೋವಿಡ್ ಸಂಕಷ್ಟದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಸಾಲ ಮರುಪಾವತಿ ವಿನಾಯ್ತಿ (ಮೊರಟೊರಿಯಂ ಅವಧಿ) ಅವಧಿಯನ್ನು ಸುಪ್ರೀಂ ಕೋರ್ಟ್ ಸೆ.28ರವರೆಗೆ ವಿಸ್ತರಿಸಿದೆ. ಅಲ್ಲಿಯವರೆಗೂ ಬ್ಯಾಂಕ್‌ಗಳು ಎನ್‌ಪಿಎ (ಮರುಪಾವತಿಯಾಗದ ಸಾಲ) ಘೋಷಿಸದಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ಸಾಲ ಮರುಪಾವತಿ ಅವಧಿಯನ್ನು ಆಗಸ್ಟ್ 31ಕ್ಕೆ ಅಂತಿಮಗೊಳಿಸಲಾಗಿತ್ತು. ಜನರು ಇನ್ನೂ ಕೋವಿಡ್ ಸಂಕಷ್ಟಗಳಲ್ಲಿ ಇರುವುದರಿಂದ ಮಾರಟೊರಿಯಂ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.
ಸುಪ್ರೀಂ ಕೋರ್ಟ್ಗೆ ಈ ಸಂಬಂಧ ಸಲ್ಲಿಕೆಯಾಗುತ್ತಿರುವ ಪಿಐಎಲ್ ಗಳನ್ನು ಒಟ್ಟಾರೆಯಾಗಿ ಮನಗಂಡಿರುವ ಸುಪ್ರೀಂ ಕೋರ್ಟ್, ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಲೇಬೇಕು. ಈ ಅವಧಿಯಲ್ಲಿ ಸಾಲಗಾರರ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡಬಾರದು ಎಂದು ತಿಳಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರವ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.