50% ಮತಗಳಿಕೆಗೆ, ದುರ್ಬಲ ಕ್ಷೇತ್ರಗಳೇ ಟಾರ್ಗೆಟ್: ಲೋಕಸಮರ ತಂತ್ರದತ್ತ ಅಮಿತ್ ಶಾ ಚಿತ್ತ

New Delhi: 2024ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 3ನೇ ಅವಧಿಗೆ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ (BJP) ಸಿದ್ದತೆ ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್, ಲೋಕಸಭಾ ಚುನಾವಣೆಗೆ ತಂತ್ರಗಾರಿಕೆ ಹೆಣೆಯುವ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ, ಈಗಿನಿಂದಲೇ ಸಿದ್ದತೆ ಆರಂಭಿಸುವಂತೆ ರಾಜ್ಯ ಘಟಕಗಳಿಗೆ ಸೂಚನೆ ನೀಡಲಾಗಿದೆ.

ಮೂಲಗಳ ಪ್ರಕಾರ, 2024ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 50ರಷ್ಟು ಮತಗಳಿಕೆ ಮತ್ತು ಕಳೆದ ಬಾರಿ ಸೋಲುಂಡಿರುವ ದುರ್ಬಲ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಅಮಿತ್ ಶಾ @AmitShah ಮುಂದಾಗಿದ್ದಾರೆ ಎನ್ನಲಾಗಿದೆ. ಶೇಕಡಾ 50ರಷ್ಟು ಮತಗಳಿಕೆ ಮಾಡಲು ವಿಶೇಷ ಕಾರ್ಯತಂತ್ರಗಳನ್ನು ರೂಪಿಸುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಲಾಗಿದೆ. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ 543 ಕ್ಷೇತ್ರಗಳ ಪೈಕಿ 436ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ 303 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಪ್ರಚಂಡ ವಿಜಯ ಸಾಧಿಸಿತ್ತು. ಕೇವಲ 133 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಪರಾಭವಗೊಂಡಿತ್ತು.

ಇನ್ನು ಬಿಜೆಪಿ ದುರ್ಬಲವಾಗಿರುವ 164 ಕ್ಷೇತ್ರಗಳತ್ತ ಬಿಜೆಪಿ ನಾಯಕರು ಈ ಬಾರಿ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಈ ಸ್ಥಾನಗಳಲ್ಲಿ ಮತಗಳಿಕೆ ಮತ್ತು ಗೆಲುವಿನ ಸಾಧ್ಯತೆ ಹೆಚ್ಚಿಸಲು ಕೇಂದ್ರ ಸಚಿವರು, ಪಕ್ಷದ ಹಿರಿಯ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ. ಅದೇ ರೀತಿ ಕಳೆದ ಬಾರಿ ಪ್ರಾಯಾಸದ ಗೆಲುವು ಕಂಡಿದ್ದ 164 ಕ್ಷೇತ್ರಗಳಿಂದ ಹೆಚ್ಚಿನ ಮತಗಳಿಕೆಗೆ ಬಿಜೆಪಿ ಗುರಿಯಿಟ್ಟಿದೆ.

ಬಿಜೆಪಿ ತಾನು ದುರ್ಬಲವಾಗಿರುವ ಕ್ಷೇತ್ರಗಳನ್ನು ‘ಸಿ’ ಮತ್ತು ‘ಡಿ’ ಗುಂಪುಗಳಾಗಿ ವಿಭಾಗಿಸಿದೆ. ಬಿಹಾರ, ಮಹಾರಾಷ್ಟ್ರ, ಕೇರಳ, ತಮಿಳುನಾಡು, (Bihar, Maharashtra, Kerala, Tamilnadu) ಛತ್ತೀಸ್ಘಡ್ ಮತ್ತು ರಾಜಸ್ಥಾನದಂತಹ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಮಹಾರಾಷ್ಟ್ರದ ಬಾರಾಮತಿ, ಬುಲ್ದಾನಾ, ಔರಂಗಾಬಾದ್, ಪಂಜಾಬ್ನ (Buldana, Aurangabad, Punjab) ಅಮೃತಸರ, ಆನಂದಪುರ ಸಾಹಿಬ್, ಭಟಿಂಡಾ ಮತ್ತು ಗುರುದಾಸ್ಪುರ ಉತ್ತರಪ್ರದೇಶದ, ರಾಯ್ ಬರೇಲಿ, ಬಿಹಾರದ ನಾವಡ, ಸುಪೌಲ್, ಕಿಶನ್ಗಂಜ್, ಕಾತಿಹಾರ್, ಮುಂಗೆರ್, ಗಯಾ, ಕೇರಳದ ತ್ರಿಶೂರ್, ತಿರುವನಂತಪುರಂ ಮತ್ತು ಪಟ್ಟಣಂತಿಟ್ಟ ಕ್ಷೇತ್ರಗಳ ಮೇಲೆ ಬಿಜೆಪಿ ಹೆಚ್ಚು ಗಮನ ಕೇಂದ್ರೀಕರಿಸಿದೆ.

Exit mobile version