ಲೋಕಸಮರ 2024: 2019 ರಲ್ಲಿ ಮೈಸೂರು ಕ್ಷೇತ್ರದಲ್ಲಿ ವಿಧಾನಸಭಾವಾರು ಬಂದ ಮತ ಎಷ್ಟು?

Mysore: ಈ ಬಾರಿಯ ಲೋಕಸಭಾ ಚುನಾವಣೆಯ (Loksabha Election) ಅಖಾಡದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹಾಗೂ ಆಡಳಿತರೂಢ ಕಾಂಗ್ರೆಸ್ ಪಕ್ಷದ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಎತಡು ಪಕ್ಷಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ನಿಂದ ಎಂ.ಲಕ್ಷ್ಮಣ ಕಣದಲ್ಲಿದ್ದರೆ, ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿಕೂಟದ ಅಭ್ಯರ್ಥಿಯಾಗಿ ಮಹಾರಾಜ ಯದುವೀರ್ ಒಡೆಯರ್ ಅವರು ಕಣದಲ್ಲಿದ್ದಾರೆ.

ಇನ್ನು 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಮೈತ್ರಿ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ (C.H Vijayashankar) ಕಣಕ್ಕೆ ಇಳಿದಿದ್ದರು. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ (Pratap Simha) ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವಾರು ಸಿಕ್ಕ ಮತಗಳ ವಿವರ ಇಲ್ಲಿದೆ.

ಪಿರಿಯಾಪಟ್ಟಣ- ಕೆ. ಮಹದೇವ್ (ಜೆಡಿಎಸ್)
ಬಿಜೆಪಿ – 77,242
ಕಾಂಗ್ರೆಸ್ – 53,465

ಹುಣಸೂರು- ಎಚ್. ವಿಶ್ವನಾಥ್ (ಜೆಡಿಎಸ್)
ಕಾಂಗ್ರೆಸ್ – 82,784
ಬಿಜೆಪಿ – 78,986

ಚಾಮರಾಜ- ಎಲ್. ನಾಗೇಂದ್ರ (ಬಿಜೆಪಿ)
ಬಿಜೆಪಿ – 90,531
ಕಾಂಗ್ರೆಸ್ – 44,480

ನರಸಿಂಹರಾಜ- ತನ್ನೀರ್ ಸೇತ್ (ಕಾಂಗ್ರೆಸ್)
ಕಾಂಗ್ರೆಸ್ – 98,24 1
ಬಿಜೆಪಿ – 56,262

ಮಡಿಕೇರಿ- ಕೆ.ಜಿ. ಬೋಪಯ್ಯ (ಬಿಜೆಪಿ)
ಬಿಜೆಪಿ – 1,02,161
ಕಾಂಗ್ರೆಸ್ – 58,185

ವೀರಾಜಪೇಟೆ- ಎಂ.ಪಿ. ಅಪ್ಪಚ್ಚು ರಂಜನ್ (ಬಿಜೆಪಿ)
ಬಿಜೆಪಿ – 96,235
ಕಾಂಗ್ರೆಸ್- 54,738

ಚಾಮುಂಡೇಶ್ವರಿ- ಜಿ.ಟಿ. ದೇವೇಗೌಡ (ಜೆಡಿಎಸ್)
ಕಾಂಗ್ರೆಸ್- 89,215
ಬಿಜೆಪಿ – 1,11,365

ಕೃಷ್ಣರಾಜ-ಎಸ್.ಎ. ರಾಮದಾಸ್ (ಬಿಜೆಪಿ)
ಬಿಜೆಪಿ – 96,100
ಕಾಂಗ್ರೆಸ್ – 44,026

ಹಾಲಿ ಶಾಸಕರ ವಿವರ:
ಪಿರಿಯಾಪಟ್ಟಣ- ಕೆ. ವೆಂಕಟೇಶ್ (ಕಾಂಗ್ರೆಸ್)
ಹುಣಸೂರು- ಹರೀಶ್ಗೌಡ್ (ಜೆಡಿಎಸ್)
ಚಾಮರಾಜ (Chamaraja Nagar) – ಕೆ. ಹರೀಶ್ಗೌಡ್ (ಕಾಂಗ್ರೆಸ್)
ನರಸಿಂಹರಾಜ- ತನ್ನೀರ್ ಸೇತ್ (ಕಾಂಗ್ರೆಸ್)

ಮಡಿಕೇರಿ- ಮಂತರ್ಗೌಡ್ (ಕಾಂಗ್ರೆಸ್)
ವೀರಾಜಪೇಟೆ (Veerajpete)– ಸಿ.ಎನ್.ಪೊನ್ನಚ್ಚ (ಕಾಂಗ್ರೆಸ್)
ಚಾಮುಂಡೇಶ್ವರಿ- ಜಿ.ಟಿ. ದೇವೇಗೌಡ (ಜೆಡಿಎಸ್)
ಕೃಷ್ಣರಾಜ- ಟಿಎಸ್ ಶ್ರೀವತ್ಸ (ಬಿಜೆಪಿ)

Exit mobile version