Politics : ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ : ಕಾಂಗ್ರೆಸ್

Politics

Karnataka : 420ಗಳಿಗೆ ಅಧಿಕಾರ, 40% ಸರ್ಕಾರ ಬಿಜೆಪಿ(BJP) ಅಂದ್ರೆ ಭ್ರಷ್ಟಾಚಾರ(Corruption), ಅಚ್ಚೇದಿನಗಳ ಸಾಕಾರ, ಎಲ್ಲೆಲ್ಲೂ ಲಂಚವತಾರ ಸರ್ಕಾರಿ ಹುದ್ದೆಗಳ ವ್ಯಾಪಾರ ವಿಧಾನಸೌಧದಲ್ಲಿ(Vidhansoudha) ಅನಾಚಾರ, ಕಾಮಗಾರಿಗಳಲ್ಲಿ ಕಾಟಾಚಾರ,

ಕೋಮುವಾದದ ವಾಮಾಚಾರ, ಸಿಡಿಯಲ್ಲಿ ಬಂತು ಅತ್ಯಾಚಾರ, ರಾಜ್ಯದ ನೆಮ್ಮದಿಗೆ ಸಂಚಕಾರ, ಜನರ ಬದುಕು ತತ್ವಾರ ಎಂದು ರಾಜ್ಯ ಕಾಂಗ್ರೆಸ್(State Congress) ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ. ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಕಾಂಗ್ರೆಸ್, ಭ್ರಷ್ಟಾಚಾರ ಹಾಗೂ ಬಿಜೆಪಿ ಒಂದೇ ನಾಣ್ಯದಲ್ಲಿರುವ ಎರಡು ಮುಖಗಳು.

ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ, ನಡೆದಾಡಲೂ ಲಂಚ ಕೊಡಬೇಕಾಗಿರುವ ಸ್ಥಿತಿ ಇದೆ. ವಿಧಾನಸೌಧದಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ಲಂಚವೇ ಸರ್ವಸ್ವವಾಗಿದೆ. ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ. ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ.

ಇದನ್ನೂ ಓದಿ : https://vijayatimes.com/17-years-for-nenapirali/

ಯಾವುದೇ ಕಾಮಗಾರಿ ಆದರೂ ನೀಡಬೇಕು 40% ಕಮಿಷನ್ ಯಾವುದೇ ಹುದ್ಧೆಗಾದರೂ ನೀಡಬೇಕು ಲಕ್ಷ-ಲಕ್ಷ ಲಂಚ ಬಿಜೆಪಿ ಸರ್ಕಾರ ಎಂದರೆ 40% ಸರ್ಕಾರ ಎಂದು ಟೀಕಿಸಿದೆ. 40% ಸರ್ಕಾರದಿಂದ ಜನತೆಗೆ ನಿರಂತರ ಸಂಕಷ್ಟ. PSI ನೇಮಕಾತಿ ಹಗರಣ ನಡೆದಿದ್ದು ಸರ್ಕಾರ ಲೋಪದಿಂದ, ಆದರೆ ಶಿಕ್ಷೆ ಮಾತ್ರ ಸಾವಿರಾರು ಬಡ ಅಭ್ಯರ್ಥಿಗಳಿಗೆ.

ಅರಗ ಜ್ಞಾನೇಂದ್ರ(Araga Jnanedra) ಅವರೇ, PSI ಪರೀಕ್ಷೆ ಬರೆದವರು ಈಗ ಏನು ಮಾಡಬೇಕು? ಅವರ ವಯಸ್ಸು ಮೀರುತ್ತಿದೆ, ನಿಮ್ಮ ಪರಿಹಾರವೇನು? ಅವರ ಭವಿಷ್ಯದ ಪ್ರಶ್ನೆಗಳಿಗೆ ನಿಮ್ಮ ಉತ್ತರವೇನು? 2.4 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ, ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ, ಆಡಳಿತ ಯಂತ್ರಕ್ಕೂ ತೊಡಕಾಗುತ್ತಿದೆ.

ಹೀಗಿದ್ದೂ ಅಭ್ಯರ್ಥಿಗಳ ನೇಮಕಕ್ಕೆ ಹಿಂದೇಟು ಹಾಕ್ತಿರೋದೇಕೆ? ಲಂಚದ ಆಸೆಗಾಗಿಯೇ? ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸದೆ “ಎಜುಕೇಟೆಡ್ ಜಾಬ್ಲೆಸ್”ಗಳನ್ನು ಸೃಷ್ಟಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದೆ. ನಾವು ಹಿಂದೂ ಪರ ಎಂದುಕೊಳ್ಳುವ ಬಿಜೆಪಿ ಸರ್ಕಾರ ಹಿಂದುಗಳೂ ಸೇರಿದಂತೆ ಎಲ್ಲಾ ಜಾತಿ ಧರ್ಮದವರಿಗೂ ಅನ್ಯಾಯ ಮಾಡ್ತಿರೋದೇಕೆ?

ಹಿಂದುಗಳೂ ಬಿಜೆಪಿಯ ಭ್ರಷ್ಟಾಚಾರದ ಸಂತ್ರಸ್ತರಾಗಿದ್ದಾರೆ, ಅಲ್ಲವೇ ಬೊಮ್ಮಾಯಿ ಅವರೇ? KPSC ಸೇರಿದಂತೆ ಎಲ್ಲಾ ಬಗೆಯ ಅಭ್ಯರ್ಥಿಗಳಿಗೆ ಸರ್ಕಾರ ದ್ರೋಹ ಮಾಡ್ತಿರೋದೇಕೆ? ಬೊಮ್ಮಾಯಿ ಅವರೇ, ಈ ಯುವಕರು ನಿಮ್ಮ ಖಜಾನೆ ಕೇಳ್ತಿಲ್ಲ, ನಿಮ್ಮ ಅಧಿಕಾರ ಕೇಳ್ತಿಲ್ಲ, ನಿಮ್ಮ ಪಕ್ಷದ ಟಿಕೆಟ್ ಕೇಳ್ತಿಲ್ಲ, 40% ಕಮಿಷನ್ ಕೇಳ್ತಿಲ್ಲ, ನ್ಯಾಯಯುತವಾದ ಉದ್ಯೋಗವನ್ನಷ್ಟೇ ಕೇಳ್ತಿದಾರೆ.

https://youtu.be/9zVpg0tSw4w ಕರ್ತವ್ಯ ನಿರ್ವಹಿಸಲು ಸರ್ಕಾರ ಕೊಟ್ಟ ವಾಹನ ದುರ್ಬಳಕೆ!

ವಿವಿಧ ಸರ್ಕಾರಿ ಹುದ್ದೆಗಳನ್ನು ಪ್ರಾಮಾಣಿಕವಾಗಿ ಭರ್ತಿ ಮಾಡುವ ಇರಾದೆ ಏಕಿಲ್ಲ 40% ಸರ್ಕಾರಕ್ಕೆ? ಹುದ್ದೆ ಮಾರಾಟದ ಹುನ್ನಾರವೇ? ಉದ್ಯೋಗದ ಆಸೆಯಲ್ಲಿ ಓದುತ್ತಲೇ ಅರ್ಧ ಜೀವನ ಕಳೆದಿದ್ದಾರೆ ಅಭ್ಯರ್ಥಿಗಳು.

ಕಳೆದ 3 ವರ್ಷದ ಬಿಜೆಪಿ ಆಡಳಿತದಲ್ಲಿ ಒಂದೂ ನೋಟಿಫಿಕೇಶನ್ ಆಗದಿರುವುದು ಈ ಸರ್ಕಾರದ ಅಸಾಮರ್ಥ್ಯವನ್ನು ತೋರಿಸುತ್ತದೆ. ನೇಮಕಾತಿ ಅಕ್ರಮಗಳು 40% ಸರ್ಕಾರದ ಭ್ರಷ್ಟತನಕ್ಕೆ ಸಾಕ್ಷಿಯಾಗುತ್ತವೆ ಎಂದು ವಾಗ್ದಾಳಿ ನಡೆಸಿದೆ.

Exit mobile version