CSK ಬೃಹತ್ ಮೊತ್ತವನ್ನು ಬಗ್ಗು ಬಡಿದ ಲಕ್ನೋ ಸೂಪರ್ ಜೈಂಟ್ಸ್!

ipl

ಮುಂಬೈನ(Mumbai) ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ(Thursday) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(IPL) ಲಕ್ನೋ ಸೂಪರ್ ಜೈಂಟ್ಸ್(Lucknow Supergiants) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ(Chennai Super Kings) ತಂಡವನ್ನು ಮಣಿಸುವ ಮೂಲಕ ಗೆದ್ದು ಬೀಗಿದೆ. ಹೌದು, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಜೈಂಟ್ಸ್, ಎವಿನ್ ಲೆವಿಸ್ ತಂಡದ ಗೆಲುವನ್ನು 23 ಎಸೆತದಲ್ಲಿ ಅರ್ಧಶತಕದೊಂದಿಗೆ ಹೈಲೈಟ್ ಮಾಡಿದರು. ಇದು ಟಾಟಾ IPL(Tata IPL) 2022ರ ಮೊದಲ ವೇಗದ ಶತಕವಾಗಿದೆ.

ಕ್ವಿಂಟನ್ ಡಿ ಕಾಕ್(Quinton D-cock) 61 ರನ್ ಗಳಿಸಿದರೆ, ನಾಯಕ ಕೆ.ಎಲ್ ರಾಹುಲ್(KL Rahul) 40 ರನ್ ಗಳಿಸಿದರು ಮತ್ತು ಆಯುಷ್ ಬಡೋನಿ ತಮ್ಮ ಅರ್ಧಶತಕವನ್ನು ಅಮೋಘ ಪ್ರದರ್ಶನ ನೀಡುವ ಮೂಲಕ ಎಲ್‌ಎಸ್‌ಜಿ 211 ರನ್ ಗಳನ್ನು ಚೇಸ್ ಮಾಡುವ ಮೂಲಕ ಭರ್ಜರಿ ಗೆಲುವು ಸಾದಿಸಿದ್ದಾರೆ. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸತತ ಎರಡನೇ ಸೋಲಿಗೆ ಸಿಎಸ್‌ಕೆ ಶರಣಾಗಿದೆ. ಭಯಾನಕ ಬ್ಯಾಟಿಂಗ್ ಪ್ರದರ್ಶನದ ನಂತರ CSK ಈ ಸೀಸನ್ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲನ್ನು ಕಂಡಿತು.

ಸಿಎಸ್ಕೆ ಪರ ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿ ಅವರು ಉತ್ತಮ ರನ್ ಕಲೆಹಾಕಿದರು. ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾದರು. ಶಿವಂ ದುಬೆ ಮತ್ತು ಅಂಬಟಿ ರಾಯುಡು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿ ಪೆವಿಲಿಯನ್ ನತ್ತ ಓಡಿದರು. ಎಂ.ಎಸ್ ಧೋನಿ 6 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಬೃಹತ್ ರನ್ ಚೇಸ್ ಅನ್ನು ಗುರಿಯಾಗಿ ಕೊಟ್ಟರು. ಈ ರನ್ ಚೇಸ್ ಮಾಡಿದ ಕೆ.ಎಲ್ ರಾಹುಲ್ ತಂಡ ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದರು ಕೂಡ ಅಂತಿಮ ಹಂತದಲ್ಲಿ ೫ ವಿಕೆಟ್ ಕಳೆದುಕೊಂಡರು ಪೈಪೋಟಿ ನೀಡುವುದರಲ್ಲಿ ಹಿಂದೆ ಸರಿಯಲಿಲ್ಲ!

ಗುರಿಯನ್ನು ತಲುಪಲೇಬೇಕು ಎಂಬ ಉತ್ಸಾಹದಿಂದ ಸೆಣಸಾಡಿ ತಂಡಕ್ಕೆ ವಿಜಯವನ್ನು ತಂದುಕೊಡುವಲ್ಲಿ ಯಶಸ್ವಿಯಾಯಿತು. ಒಟ್ಟಾರೆ ಗೆದ್ದರು, ಸೋತರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಂಡ ಉತ್ಸಾಹವನ್ನು ಕಳೆದುಕೊಳ್ಳದೆ, ಮುಂದಿನ ಆಟದತ್ತ ಚಿಂತಿಸುತ್ತಿದೆ ಎಂಬುದು ಗಮನಾರ್ಹ!

Exit mobile version