ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ತಯಾರಿಕೆಗೆ ಅನುಮತಿ

ಲಕ್ನೋ ಸೆ 01 : ಮುಂದಿನ ತಲೆಮಾರಿನ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳು ಲಕ್ನೋದಲ್ಲಿ ತಯಾರಾಗಲಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದು ಉತ್ತರಪ್ರದೇಶದ ಆರ್ಥಿಕತೆ ಮತ್ತು ಉದ್ಯೋಗಕ್ಕೆ ಗಮನಾರ್ಹ ಉತ್ತೇಜನ ನೀಡುವ ಮಹತ್ವದ ಘೋಷಣೆ ಕೂಡ ಆಗಿದೆ ಎಂದು  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕ್ಷಿಪಣಿಗಳನ್ನು ತಯಾರಿಸಲಾಗುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಲಕ್ನೋ ಬಳಿ ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸಲಾಗುತ್ತದೆ. ಅಂದಾಜು 5,000 ಕ್ಕೂ ಹೆಚ್ಚು ಜನರು ಉದ್ಯೋಗವನ್ನು ಪಡೆಯುತ್ತಾರೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

ಬ್ರಹ್ಮೋಸ್ ಏರೋಸ್ಪೇಸ್‌ನ ಮಹಾನಿರ್ದೇಶಕ ಸುಧೀರ್ ಕುಮಾರ್ ಮಿಶ್ರಾ ಕಳೆದ ವಾರ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿಯವರು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ 200 ಎಕರೆ ಭೂಮಿಯನ್ನು ನೀಡುವಂತೆ ಲಿಖಿತವಾಗಿ ಕೋರಿದ್ದಾರೆ. ಈ ಯೋಜನೆಗೆ ಸಿಎಂ ಅನುಮೋದನೆ ನೀಡಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಕೂಡ ದೊರೆಯಲಿದೆ.

Exit mobile version