Udupi: ಉಡುಪಿ (Udupi) ಜಿಲ್ಲೆಯ ಜೀವನಾಡಿಯಾದ ಮೀನು ಮತ್ತು ಗೋಡಂಬಿ ರಫ್ತುವಿನ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾದ (increase export fish cashew) ಪ್ರಮಾಣ ಮಟ್ಟ ಹಾಗೂ
ಮೌಲ್ಯವು 2022-23ನೇ ಸಾಲಿನಲ್ಲಿ ಶೇಕಡಾ 80ರಷ್ಟು ಹೆಚ್ಚಳವಾಗಿದೆ. ಮೀನು, ಗೋಡಂಬಿ ಹಾಗೂ ಸೇಫ್ಟಿವಾಲ್ (Safetyval), ಫಿಶ್‌ನೆಟ್ ಸಹಿತ ಅನ್ಯ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ 22
ರಫ್ತುದಾರರು ಉಡುಪಿ ಜಿಲ್ಲೆಯಲ್ಲಿದ್ದು, 2022-23ನೇ ಸಾಲಿನಲ್ಲಿ 2,900 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವಿದೇಶಕ್ಕೆ ಮೀನು ಶೇ. 70ರಷ್ಟು ಗೋಡಂಬಿ ಶೇ. 25ರಷ್ಟು ಹಾಗೂ ಸೇಫ್ಟಿವಾಲ್, ಫಿಶ್‌ನೆಟ್ (Fishnet) ಸಹಿತ ಅನ್ಯ ಉತ್ಪನ್ನಗಳನ್ನು ಶೇ .5ರಷ್ಟು ರಫ್ತು ಮಾಡುವ 22 ರಫ್ತುದಾರರು ಇದ್ದಾರೆ.
2021-22ನೇ ಸಾಲಿನಲ್ಲಿ ಒಟ್ಟು 1,600 ಕೋಟಿ ರೂ. ಮೌಲ್ಯದ ಉತ್ಪನ್ನ ರಫ್ತಾಗಿದ್ದರೆ, 2022-23ನೇ ಸಾಲಿನಲ್ಲಿ ಇದು 2,900 ಕೋಟಿ ರೂ.ಗೆ ಜಾಸ್ತಿಯಾಗಿದೆ.
40 ಕೈಗಾರಿಕಾ ಘಟಕಗಳು ಮೀನುಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿದ್ದರೆ ಕೇವಲ 5 ಘಟಕಗಳಷ್ಟೇ ಮೀನಿನ ರಫ್ತು ವ್ಯವಹಾರದಲ್ಲಿ ತೊಡಗಿವೆ. 2021-22ರಲ್ಲಿ 50,000 ಮೆಟ್ರಿಕ್ ಟನ್ (Metric Ton)
ಮೀನು ರಫ್ತಾಗಿದ್ದರೆ ಇನ್ನು 2022-23ನೇ ಸಾಲಿನಲ್ಲಿ ಇದು 1,50,000 ಮೆಟ್ರಿಕ್ ಟನ್‌ಗಳಿಗೆ ಏರಿಕೆ ಕಂಡಿದೆ. 2022-23ನೇ ಸಾಲಿನಲ್ಲಿ ಮೀನಿನ ರಫ್ತು ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದರೆ ದರವೂ ಡಬ್ಬಲಾಗಿದ್ದು,
ಬೂತಾಯಿ, ಬಂಗುಡೆ, ಸಿಗಡಿ ಸಹಿತ ಅನ್ಯ ಮೀನುಗಳ ಫಿಶ್ ಮೀಲ್ (Fish Meal), ಪೇಸ್ಟ್ (Paste), ಆಯಿಲ್, ಫ್ರೋಜನ್ ಫಿಶ್ (Frozen Fish) ರಫ್ತು ಮಾಡಲಾಗುತ್ತಿದೆ.
ಇನ್ನು 175 ಕೈಗಾರಿಕೆಗಳು ಗೋಡಂಬಿ ವ್ಯವಹಾರದಲ್ಲಿ ತೊಡಗಿದ್ದು, ಕೇವಲ 9 ಕೈಗಾರಿಕೆಗಳಷ್ಟೇ ರಫ್ತಿನಲ್ಲಿ ನಿರತವಾಗಿವೆ. 2021-22ರಲ್ಲಿ 7,000 ಮೆಟ್ರಿಕ್ ಟನ್ ಗೋಡಂಬಿ ರಫ್ತಾಗಿದ್ದರೆ, 2022-23ರಲ್ಲಿ 8,000
ಮೆಟ್ರಿಕ್ ಟನ್‌ಗಳಿಗೆ ಏರಿಕೆ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ 16,916 ಹೆಕ್ಟೇರ್‌ನಲ್ಲಿ (Hectar) 28,588 ಮೆಟ್ರಿಕ್ ಟನ್ ಕಚ್ಚಾ ಗೋಡಂಬಿ ಉತ್ಪಾದನೆಯಾಗುತ್ತಿದ್ದು, ಆದರೆ ಸ್ಥಳೀಯ ಕೈಗಾರಿಕೆಗಳನ್ನು ವರ್ಷಪೂರ್ತಿ
ಮುನ್ನಡೆಸಲು ಬೇಕಾದ ಕಚ್ಚಾ (increase export fish cashew) ಮಾಲು ಕೊರತೆ ಶೇ. 75ರಷ್ಟಿದೆ.

ಯುರೋಪ್ (Europe), ಅಮೆರಿಕ ರಾಷ್ಟ್ರಗಳಿಗೆ ಆಫ್ರಿಕಾ (Africa) ರಾಷ್ಟ್ರಗಳಿಂದ ಕಚ್ಚಾ ಗೋಡಂಬಿ ಆಮದು ಮಾಡಿ ಸಂಸ್ಕರಿಸಿದ, ಮೌಲ್ಯವರ್ಧಿತ ಗೋಡಂಬಿಯನ್ನು ರಫ್ತು ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರವು ರಫ್ತುಉತ್ಪನ್ನ, ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ಉಡುಪಿಯ ಮೀನು ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತು ಮಂಗಳೂರು (Mangalore) ಮತ್ತು ಕೇರಳದ
(Kerala) ಬದಲು ಉಡುಪಿಯಿಂದಾದರೆ ಜಿಲ್ಲೆಯ ಆರ್ಥಿಕತೆ ಮತ್ತಷ್ಟು ಹೆಚ್ಚಲಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ, ಉಡುಪಿ ಚಿಕ್ಕಮಗಳೂರು (Chikkamagaluru) ಸಂಸದೆಯೂ
ಆಗಿರುವ ಶೋಭಾ ಕರಂದ್ಲಾಜೆ (Shobha Karandlaje) ಅವರು ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮೀನಿನ ವ್ಯವಹಾರಗಳು
೧. ಮೀನು ಉದ್ಯಮಗಳು: 40
೨. ಮತ್ಸ್ಯ ಉತ್ಪಾದನೆ: 2,71,790 ಮೆಟ್ರಿಕ್ ಟನ್
೩. ರಫ್ತು ಘಟಕ: 5
೪. ರಫ್ತು: 1,50,000 ಮೆಟ್ರಿಕ್ ಟನ್
ಗೋಡಂಬಿ ವ್ಯವಹಾರಗಳು
೧. ಆಂತರಿಕ ಉತ್ಪಾದನೆ: 16,916 ಹೆಕ್ಟೇರ್
೨. ಆಮದು: 35,000 ಮೆಟ್ರಿಕ್ ಟನ್
೩. ರಫ್ತು: 8,000 ಮೆಟ್ರಿಕ್ ಟನ್
೪. ಗೇರು ಉದ್ಯಮದಲ್ಲಿರುವ ಕಾರ್ಖಾನೆಗಳು: 175
೫. ರಫ್ತು ಘಟಕ: 9
ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ಜಿ. ನಾಯಕ್ (Nagaraja G Nayak) ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರವು ರಫ್ತು ಆಧರಿತ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಮತ್ತು
ಪ್ರೋತ್ಸಾಹ ನೀಡುತ್ತಿದ್ದು, ಕೈಗಾರಿಕೆಗಳು ಉತ್ಪನ್ನಗಳಲ್ಲಿ ಕಲಬೆರಕೆಗೆ ಅವಕಾಶವಿಲ್ಲದಂತೆ ಅಂತಾರಾಷ್ಟ್ರೀಯ ಗುಣಮಟ್ಟ, ಆರೋಗ್ಯ ಹಾಗೂ ಸ್ವಚ್ಛತೆ ಕಾಪಾಡುವುದು ಅತಿ ಮುಖ್ಯ ಎಂದು ತಿಳಿಸಿದ್ದಾರೆ.
ಭವ್ಯಶ್ರೀ ಆರ್.ಜೆ