ಕುಮಾರ್ ಬಂಗಾರಪ್ಪ 40% ಕಮಿಷನ್ ಪಡೆಯುತ್ತಿದ್ದಾರೆ : ಮಧು ಬಂಗಾರಪ್ಪ!

Kumar bangarappa

ಸೊರಬ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಶಾಸಕ(MLA) ಕುಮಾರ್ ಬಂಗಾರಪ್ಪ(Kumar Bangarappa) 40% ಕಮಿಷನ್(Commission) ಪಡೆಯುತ್ತಿದ್ದಾರೆ.

ತಮ್ಮ ಆಪ್ತ ಸಹಾಯಕನ ಮೂಲಕ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್(State Congress) ಉಪಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಸೊರಬದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರ ಆಪ್ತ ಸಹಾಯಕ ಹಣಕ್ಕಾಗಿ ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ. ವಾಟ್ಸ್‍ ಅಪ್ ಗ್ರೂಪ್ ಮೂಲಕ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಜನಪ್ರತಿನಿಧಿಯಂತೆ ವರ್ತಿಸುತ್ತಾ ತೊಂದರೆ ನೀಡುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಮತದಾರರಿಗಿಂತ ಯಾರೂ ದೊಡ್ಡವರಲ್ಲ.

ಹೀಗಾಗಿ ಶಾಸಕರು ತಮ್ಮ ದರ್ಪಕ್ಕೆ ಕಡಿವಾಣ ಹಾಕಬೇಕು. ಕೇವಲ ಹಣದಿಂದಲೇ ಮುಂಬರುವ ಚುನಾವಣೆಯಲ್ಲಿ ಗೆಲ್ಲುವೆ ಎನ್ನುವ ಅಹಂ ಹೊಂದಿರುವ ಶಾಸಕರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು. ಇನ್ನು ಇದೆ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಲಿಂಗಪ್ಪಗೌಡ, ಸೇತುವೆ, ನೀರಾವರಿ, ಸಾರ್ವಜನಿಕ ಕಟ್ಟಡಗಳಿಗೆ ಅನುದಾನ ತರಲಾಗದ ಶಾಸಕರು ಬೇರೆಯವರು ತಂದಿರುವ ಅನುದಾನಕ್ಕೆ ಕೈ ಹಾಕಿ ಕಮಿಷನ್ ಪಡೆಯುತ್ತಿದ್ದಾರೆ. ಮೂಡಿ ಮತ್ತು ಜಡೆ ರಸ್ತೆ ಕಾಮಗಾರಿಗಾಗಿ ಮಂಜೂರು ಮಾಡಲಾಗಿದ್ದ ಹಣವನ್ನು,

40% ಕಮಿಷನ್ ಆಸೆಗಾಗಿ ಶಿರಾಳ, ಕೊಪ್ಪ ಮತ್ತು ಕುಮಟ ರಸ್ತೆಗೆ ವರ್ಗಾಯಿಸಿಕೊಂಡಿದ್ದಾರೆ. ಹೀಗೆ ಶಾಸಕರು ಕ್ಷೇತ್ರದ ಎಲ್ಲ ಕಾಮಗಾರಿಗಳಿಂದ 40% ಕಮಿಷನ್ ಪಡೆಯುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.

Exit mobile version