ಮಧುಮೇಹ ನಿಯಂತ್ರಿಸಲು ಗೆಣಸು ಸಿದ್ಧೌಷಧ

ಸಿಹಿಗೆಣಸು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಆದರೆ ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ  ಹೇಳುವುದಾದರೆ ಇದು ಎಲ್ಲಾ ಕಾಲಕ್ಕೂ ಪುಷ್ಟಿದಾಯಕ ಆಹಾರವಾಗಿದೆ. ಯಥೇಷ್ಟವಾದ ಪೋಷಕಾಂಶಗಳನ್ನು ಹೊಂದಿದ ಸಿಹಿಗೆಣಸು, ದೇಹಕ್ಕೆ ಬೇಕಾಗುವ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಝಿಂಕ್, ಸೋಡಿಯಂ, ಪೊಲಿಕ್ ಆಸಿಡ್ ಮುಂತಾದ ಅಂಶಗಳು ಇರುವುದರಿಂದ ದೇಹದ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಸಿಹಿಗೆಣಸನ್ನು ಪ್ರತಿನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ.

ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುವುದಲ್ಲದೆ, ದೇಹದಲ್ಲಿ ಸೋಡಿಯಂ ಕೊರತೆ ಇದ್ದರೆ ಅದನ್ನು ನಿವಾರಿಸುತ್ತದೆ. ಹ್ರದಯದ ಕಾಯಿಲೆಯನ್ನು ನಿಯಂತ್ರಿಸುತ್ತದೆ ಹ್ರದಯದ ಕಾರ್ಯವನ್ನು ಸುಗಮಗೊಳಿಸಲು ಸಹಾಯಕವಾಗಿದೆ.

ಪೊಲಿಕ್ ಆಸಿಡ್ ಅಧಿಕವಾಗಿರುವುದರಿಂದ ಗರ್ಭಾಶಯದಲ್ಲಿ ಭ್ರೂಣದ ಬೆಳವಣಿಗೆಗೆ ಅತ್ಯುತ್ತಮವಾಗಿದೆ. ಇದರಲ್ಲಿರುವ ವಿಟಮಿನ್‌-ಸಿಯಿಂದ ಮೂಳೆ ಹಾಗೂ ನರಗಳ ಆರೋಗ್ಯಕ್ಕೆ ಇದು ಉತ್ತಮವಾಗಿದೆ. ಮೂಳೆಗಳನ್ನು ಇದು ಸದೃಡಗೊಳಿಸಿ, ದೇಹವನ್ನು ಆರೋಗ್ಯವಾಗಿಡುತ್ತದೆ. ಇನ್ನು ಇದು ಹಲ್ಲುಗಳನ್ನು ಸಹಿತ ಗಟ್ಟಿಗೊಳಿಸುತ್ತದೆ.

ತರಕಾರಿ ಜಾತಿಗೆ ಸೇರುವ ಸಿಹಿ ಗೆಣಸು, ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೇ,  ಮಲಬದ್ದತೆಯನ್ನು ಕೂಡಾ ನಿವಾರಣೆ ಮಾಡುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಯಾರು ಬೇಕಾದರೂ ಇದನ್ನು ತಿನ್ನಬಹುದು. ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು, ಹಾಲಿನ ಜೊತೆ ತಿನ್ನಬಹುದು. ಹಾಗೂ ಇದನ್ನು ಬೇಯಿಸಿ ಹಾಲು ಸೇರಿಸಿ ಜ್ಯೂಸ್ ಮಾಡಿ ಕುಡಿಯಬಹುದ,. ಬೇಯಿಸಿ ಸಣ್ಣ ಸಣ್ಣದಾಗಿ ಕಟ್ ಮಾಡಿ ತೆಂಗಿನ ಹಾಲು ಸೇರಿಸಿ ಮಿಕ್ಸ್ ಮಾಡಿ ತಿನ್ನಬಹುದು. ರುಚಿಕರವಾದ ಸಿಹಿಗೆಣಸನ್ನು ತಿನ್ನಿ ಆರೋಗ್ಯವಂತರಾಗಿರಿ.

Exit mobile version