ಟೀ ಮಾರಿ ಬಡವರ ಹೊಟ್ಟೆ ತುಂಬಿಸುವ ತಮಿಳರಸನ್‌!

ಕೊರೋನಾ ವೈರಸ್‌ನಿಂದಾಗಿ ಜನರು ಆರ್ಥಿವಾಗಿ ಕಂಗೆಡುತ್ತಿದ್ದರೆ, ಮಧುರೈನ ಚಹಾ ಮಾರಟಗಾರನೊಬ್ಬ ಚಹಾ ಮಾರಾಟ ಮಾಡಿ ಬರುವ ಹಣದಲ್ಲಿ ಅರ್ಧದಷ್ಟು ಹಣವನ್ನು ಬಡವರ ಹೊಟ್ಟೆ ತುಂಬಿಸುವುದಕ್ಕೆ ಬಳಸುತ್ತಿದ್ದಾರೆ.

ಹೌದು! ಮದುರೈ ಮೂಲದ ತಮಿಳರಸನ್ ಎಂಬ ವ್ಯಕ್ತಿ ಪ್ರತಿ ಮುಂಜಾನೆ ಹಾಗು ಸಂಜೆ ತಮ್ಮ ಸೈಕಲ್‌ನಲ್ಲೇ ಮಧುರೈ ನ ಸುತ್ತ ಮುತ್ತ ಹಳ್ಳಿಗಳಲ್ಲಿ ಟೀ ಮಾರಿ ಅದರಲ್ಲಿ ದೊರೆತ ಹಣದಿಂದ ಕೊರೊನಾದಿಂದ ಸಂಕಷ್ಟಕ್ಕೊಳಗಾದ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

ತಮ್ಮದೇ ಆದ ಸ್ವಂತ ಟೀ ಅಂಗಡಿಯನ್ನು ತೆರೆದು ಅದರಲ್ಲಿ ಬರುವ ಆದಯದಿಂದ ಬಡವರಿಗೆ ಸಹಾಯ ಮಾಡಬೇಕೆಂದು ತಮಿಳರಸನ್‌ರವರ ಆಸೆಯಾಗಿತ್ತು. ವಿಪರ್ಯಾಸ ಎಂದರೆ ಟೀ ಅಂಗಡಿ ಕನಸಿಗೆ ಬ್ಯಾಂಕ್‌ ನವರು ಮಾತ್ರಾ ಖ್ಯಾರೆ ಎಂದಿಲ್ಲ. ಹೀಗಾಗಿ ಸಾಲಕ್ಕಾಗಿ ಇವರು ಸಲ್ಲಿಸಿದ್ದ ಲೋನ್‌ಗಾಗಿ ಅರ್ಜಿಯನ್ನು ಬ್ಯಾಂಕ್ ತಿರಸ್ಕರಿಸಿದೆ. ಆದರೂ ದೃತಿಗೆಡದ ತಮಿಳರಸನ್‌ ಸೈಕಲ್ ನಲ್ಲೇ ಟೀ ವ್ಯಾಪರ ನಡೆಸಿ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಟೀ ಮಾರುವಾಗ ರಸ್ತೆ ಹಾಗು ದೇವಸ್ಥಾನದ ಬಳಿ ಇರುವ ಬಡವರಿಗೆ ಟೀ ಅನ್ನು ಉಚಿತವಾಗಿ ನೀಡುತ್ತೇನೆ ಇದರ ಜೊತೆಗೆ ನನಗೆ ಬರುವ ಆದಾಯದಲ್ಲಿ ಅವರ ಮೂರು ಹೊತ್ತು ಊಟಕ್ಕಾಗಿ ಬೇಕಾದಷ್ಟು ಹಣವನ್ನು ಅವರಿಗಂತಲೇ ಮೀಸಲಾಗಿ ಇಡುತ್ತೇನೆ ಎಂದು ತಮಿಳರಸನ್ ಹೇಳಿಕೊಂಡಿದ್ದಾರೆ. ಇವರ ಈ ಸಮಾಜ ಸೇವೆಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Exit mobile version