ಮದುವೆಯಾಗಲಿಚ್ಛಿಸುವವರಿಗೆ ಸಿಹಿ ಸುದ್ದಿ

ಬೆಂಗಳೂರು, ಡಿ. 18:  ಇನ್ನು ಮುಂದೆ ಪ್ರತೀ ತಿಂಗಳು ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಚಿಂತನೆ ಮಾಡಲಾಗಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಸಪ್ತಪದಿ ಯೋಜನೆ ಅನೇಕರಿಗೆ ಅನುಕೂಲ ಆಗುತ್ತಿದೆ. ಈ ಯೋಜನೆಯನ್ನು ಬಡವರಿಗೆ ಸಹಾಯವಾಗಲೆಂದು ಜಾರಿಗೆ ತರಲಾಗಿದೆ. ಇತ್ತೀಚೆಗೆ  23 ಜೋಡಿಗಳು ಈ ಯೋಜನೆಯಡಿ ಮದುವೆಯಾಗಿದ್ದಾರೆ.

ಇದೀಗ ಮತ್ತೊಂದು ಖುಷಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ ರಾಜ್ಯ ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ. ಮಾರ್ಚ್ ನಿಂದ ಪ್ರತಿ ತಿಂಗಳು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.ಎಂದು ಹೇಳಿದ್ದಾರೆ.

ಮುಂದಿನ ವರ್ಷ ಅಂದರೆ ಜನವರಿ 20 ಹಾಗೂ 23 ರಂದು ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. ಇನ್ನು ಫೆಬ್ರವರಿಯಲ್ಲೂ 2 ದಿನ ಸಪ್ತಪದಿ ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Exit mobile version