ಮಹಾರಾಷ್ಟ್ರ: 21 ಜನರಲ್ಲಿ ಡೆಲ್ಟಾ ಪ್ಲಸ್ ಪತ್ತೆ

ಮುಂಬೈ,ಜೂ.22: ಕೊರೊನಾ ವೈರಸ್ ನ ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ಪ್ರಬೇಧ ಮಹಾರಾಷ್ಟ್ರದಲ್ಲಿ 21 ಜನರಲ್ಲಿ ಪತ್ತೆಯಾಗಿದ್ದು, ರತ್ನಗಿರಿ ಜಿಲ್ಲೆ 9, ಜಲಗಾಂವ್ ಜಿಲ್ಲೆ 7, ಮುಂಬೈ 2 ಕೇಸ್, ಪಾಲ್ಘರ್, ಸಿಂಧುದುರ್ಗ, ಥಾಣೆಯಲ್ಲಿ ತಲಾ 1 ಕೇಸ್ ದಾಖಲಾಗಿದೆ.

ಮೇ 15ರಿಂದ ಮಹಾರಾಷ್ಟ್ರದಲ್ಲಿ 7,500ಕ್ಕೂ ಹೆಚ್ಚು ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದ್ದು ಪ್ರತಿ ಜಿಲ್ಲೆಯಲ್ಲಿ ತಲಾ 100 ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಡೆಲ್ಟಾ ಪ್ರಬೇಧದ ವೈರಸ್ ಈಗಾಗಲೇ ರೂಪಾಂತರಗೊಂಡು ಡೆಲ್ಟಾ ಪ್ರಬೇಧ ಡೆಲ್ಟಾ ಪ್ಲಸ್ ಪ್ರಬೇಧವಾಗಿ ಹರಡುತ್ತಿದೆ. ಭಾರತದಲ್ಲಿ ಕೊರೊನಾ 3ನೇ ಅಲೆಗೆ ಡೆಲ್ಟಾ ಪ್ರಬೇಧ ಕಾರಣವಾಗಬಹುದು. ಆದರೆ ರೂಪಾಂತರವು ಪ್ರಬಲವಾಗಿದೆಯೇ ಅಥವಾ ಚದುರಿಹೋಗಿದೆಯೆ ಎಂದು ಅರ್ಥಮಾಡಿಕೊಳ್ಳಲು ಹೆಚ್ಚಿನ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

Exit mobile version