ಮಹಾರಾಷ್ಟ್ರದಲ್ಲಿ ಸ್ಪೋಟಗೊಂಡ ಒಮಿಕ್ರಾನ್‌, 653 ಮಂದಿಗೆ ಸೋಂಕು ದೃಢ

ಮುಂಬೈ ಜ 5 : ದೇಶಾದ್ಯಂತ ಒಮಿಕ್ರಾನ್‌ ಸೋಂಕು ಹೆಚ್ಚುತ್ತಿರವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಒಮಿಕ್ರಾನ್‌ ಸ್ಪೋಟಗೊಂಡಿದ್ದು 653 ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶಾದ್ಯಂತ ಇರುವ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 2,135ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ.

ಈ ಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 653 ಮಂದಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 259 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿರುವ ಇತರ ರಾಜ್ಯಗಳೆಂದರೆ ದೆಹಲಿ 464, ಕೇರಳ 185, ರಾಜಸ್ಥಾನ 174, ಗುಜರಾತ್ 154, ತಮಿಳುನಾಡು 121, ತೆಲಂಗಾಣ 84. ಕರ್ನಾಟಕ 77, ಹರಿಯಾಣ 71, ಒಡಿಶಾ 37, ಉತ್ತರಪ್ರದೇಶ 31, ಆಂಧ್ರಪ್ರದೇಶ 24, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 9, ಉತ್ತರಾಖಂಡ 8, ಗೋವಾ 5. ಮೇಘಾಲಯ 5 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

Exit mobile version