ಬದಾಯೂಂ, ಜ. 09: ಉತ್ತರ ಪ್ರದೇಶದ ಬದಾಯೂಂನ ೫೦ ವರ್ಷದ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಕ್ತಿ ದೇವಿ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸಂತ್ರಸ್ತೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ದೇವಿ, ಸಂತ್ರಸ್ತ ಮಹಿಳೆ ಸಂಜೆ ಹೊತ್ತಲ್ಲಿ ಒಬ್ಬಂಟಿಯಾಗಿ ಮನೆಯಿಂದ ಹೊರಹೋಗದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ. ಈ ಕೃತ್ಯ ಮಾನವ ಕುಲಕ್ಕೆ ಕಳಂಕ. ಆದರೆ ಮಹಿಳೆಯರು ಸಂಜೆ ವೇಳೆ ಒಬ್ಬಂಟಿಯಾಗಿ ಮನೆಯಿಂದ ಆಚೆ ಹೋಗದಂತೆ ನಾನು ಯಾವಾಗಲೂ ಹೇಳುತ್ತಿರುತ್ತೇನೆ ಎಂದು ಹೇಳಿದ್ದಾರೆ. ಸೇವಿ ಅವರ ಈ ಬೇಜವಬ್ದಾರಿಯುತ ಹೇಳಿಕೆಗೆ ಭಾರೀ ಖಂಡನೆಗೆ ವ್ಯಕ್ತವಾಗಿದೆ.