Bengaluru: ಉದ್ಯಮಿ ಆನಂದ್ ಮಹೀಂದ್ರಾ (mahindra company gifted to Pragnananda) ಅವರು ಅಂತರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್ ಪ್ರಗ್ನಾನಂದ ಅವರ ಪೋಷಕರಿಗೆ
ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಅವರ ಈ ಟ್ವೀಟ್ ಇದೀಗ ಅನೇಕ ಜನರ ಗಮನ ಸೆಳೆದಿದೆ.

ಟ್ವೀಟರ್‌ನಲ್ಲಿ (Twitter) ಹಲವಾರು ಜನರು ಆನಂದ್ ಮಹೀಂದ್ರಾ ಅವರರಿಗೆ, ಪ್ರಗ್ನಾನಂದ (Praggnanandha) ಅವರಿಗೆ ಥಾರ್ (Thar) ಕಾರನ್ನು ಉಡುಗೊರೆಯಾಗಿ ನೀಡುವಂತೆ ಒತ್ತಾಯಿಸಿದರು.
ಇದೇ ವೇಳೆ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ ಅವರು ” ನಿಮ್ಮಂತಹ ಅನೇಕರು @rpragchess ಗೆ ಥಾರ್ ಅನ್ನು ಉಡುಗೊರೆಯಾಗಿ ನೀಡುವಂತೆ ನನ್ನನ್ನು ಒತ್ತಾಯಿಸುತ್ತಿದ್ದಾರೆ.
ಆದರೆ ನನಗೆ ಇನ್ನೊಂದು ಆಲೋಚನೆ ಇದೆ. ನಾನು ಪೋಷಕರನ್ನು(mahindra company gifted to Pragnananda) ಪ್ರೋತ್ಸಾಹಿಸಲು ಬಯಸುತ್ತೇನೆ.
ಅವರ ಮಕ್ಕಳನ್ನು ಚೆಸ್ಗೆ (Chess) ಪರಿಚಯಿಸಿ ಮತ್ತು ಅವರು ಈ ಸೆರೆಬ್ರಲ್ (Cerebral) ಆಟವನ್ನು ಅನುಸರಿಸುವಾಗ ಅವರನ್ನು ಬೆಂಬಲಿಸಿ (ವೀಡಿಯೊ ಗೇಮ್ಗಳ ಜನಪ್ರಿಯತೆಯ ಉಲ್ಬಣದ
ಹೊರತಾಗಿಯೂ!)ಇದು EVಗಳಂತೆಯೇ ನಮ್ಮ ಗ್ರಹಕ್ಕೆ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆಯಾಗಿದೆ. ಹಾಗಾಗಿ, ನಾನು ಪ್ರಗ್ನಾನಂದ ಅವರ ಪೋಷಕರಿಘೆ XUV4OO ಎಲೆಕ್ಟ್ರಿಕ್ ಕಾರನ್ನು
(Electric Car) ಅನ್ನು ಉಡುಗೊರೆಯಾಗಿ ನೀಡಬೇಕು ಎಂದು ನಾನು ಭಾವಿಸುತ್ತೇನೆ @rpragchess,

ಶ್ರೀಮತಿ ನಾಗಲಕ್ಷ್ಮಿ (Nagalakshmi) ಮತ್ತು ಶ್ರೀ ರಮೇಶಬಾಬು (Rameshbabu) ಅವರ ಪೋಷಕರಿಗೆ ತಮ್ಮ ಮಗನ ಉತ್ಸಾಹವನ್ನು ಪೋಷಿಸಿದ್ದಕ್ಕಾಗಿ ಮತ್ತು ಅವರಿಗೆ ತಮ್ಮ
ಅವಿರತ ಬೆಂಬಲವನ್ನು ನೀಡಿದ್ದಕ್ಕಾಗಿ ನಮ್ಮ ಕೃತಜ್ಞತೆಗೆ ಅರ್ಹರಾಗಿದ್ದಾರೆ.” ಎಂದು ಹೇಳಿದ್ದಾರೆ. ಇನ್ನು ಟ್ವೀಟ್ನ ಕೊನೆಯಲ್ಲಿ, ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಮತ್ತು ಮಹೀಂದ್ರಾದಲ್ಲಿ
ಮೊಬೈಲ್ ಬ್ಯಾನ್ : UNESCO ಸಲಹೆಯಂತೆ ಆಂಧ್ರಪ್ರದೇಶದ ಎಲ್ಲಾ ಶಾಲೆಗಳಲ್ಲಿ ಮೊಬೈಲ್ ಬ್ಯಾನ್
ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ (CEO) ರಾಜೇಶ್ ಜೆಜುರಿಕರ್ (Rajesh Jejurikar) ಅವರನ್ನು ಟ್ಯಾಗ್ ಮಾಡಿ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಕೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಜುರಿಕರ್ ಅವರು, “ನಿಮ್ಮ ಅದ್ಭುತ ಸಾಧನೆಗಾಗಿ @rpragchess ಅಭಿನಂದನೆಗಳು. @anandmahindra, @rpragchess ಶ್ರೀಮತಿ ನಾಗಲಕ್ಷ್ಮಿ ಮತ್ತು ಶ್ರೀ ರಮೇಶ್ಬಾಬು
ಅವರ ಪೋಷಕರನ್ನು ಗುರುತಿಸುವ ಕಲ್ಪನೆಗೆ ಧನ್ಯವಾದಗಳು. ಆಲ್-ಎಲೆಕ್ಟ್ರಿಕ್ (All-Electric) SUV XUV400 ಪರಿಪೂರ್ಣವಾಗಿರುತ್ತದೆ ಎಂದು ಟ್ವೀಟ್ ಮಾಡಿದ್ಧಾರೆ. ಇನ್ನು ಆನಂದ್ ಮಹೀಂದ್ರಾ
ಅವರ ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆನಂದ್ ಮಹೀಂದ್ರಾ ಅವರ ಪ್ರೋತ್ಸಾಹಕ್ಕೆ ಅನೇಕರು ಅವರನ್ನು ಅಭಿನಂದಿಸಿದ್ಧಾರೆ.
ಮಹೇಶ್