ಬ್ರಿಟಿಷರಂತೆ ಭಾರತವನ್ನು ಪ್ರಧಾನಿ ಮೋದಿ ಲೂಟಿ ಮಾಡುತ್ತಿದ್ದಾರೆ ಎಂದ ಮಲ್ಲಿಕಾರ್ಜುನ ಖರ್ಗೆ

Jharkhand: ಭಾರತೀಯರು ಪ್ರಧಾನಿಯನ್ನು ರಾಜನಂತೆ ನೋಡುತ್ತಾರೆ. ಅದರಿಸುತ್ತಾರೆ. ಗೌರವಿಸುತ್ತಾರೆ. ಆದರೆ ಪ್ರಧಾನಿ ಮೋದಿ ಅವರ ನಂಬಿಕೆಗಳನ್ನು ಸುಳ್ಳು ಮಾಡಿ ಬ್ರಿಟಿಷರಂತೆ ಆಳ್ವಿಕೆ ನಡೆಸುತ್ತಿದ್ದಾರೆ.ಕಳೆದ 10 ವರ್ಷಗಳಲ್ಲಿ ಪ್ರಧಾನಿ ದೇಶದ ನೀರು, ಅರಣ್ಯ, ಭೂಮಿಯನ್ನು ಲೂಟಿ ಮಾಡಿದ್ದಾರೆ. ದೇಶವನ್ನು ಲೂಟಿ ಮಾಡುತ್ತಿದ್ದು, ದೇಶದ ಆಸ್ತಿಯನ್ನು ತಮ್ಮ ಶ್ರೀಮಂತ ಸ್ನೇಹಿತರಿಗೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಶುಕ್ರವಾರ ಆರೋಪಿಸಿದ್ದಾರೆ.

Congress

ಇಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರಂತೆ ಪ್ರಧಾನಿ ಮೋದಿ (Modi) ಭಾರತೀಯರ ಒಳ್ಳೆಯತನ ಬಳಸಿಕೊಂಡು ತನ್ನ ಪಕ್ಷವನ್ನು ಸಧೃಡಗೊಳಿಸಿ ಕೊಳ್ಳುತ್ತಿದ್ದಾರೆ.ಬಿಜೆಪಿಯು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದಂತೆ ಮುಸ್ಲಿಂ ಹಾಗೂ ಹಿಂದೂಗಳನ್ನು ವಿಭಜಿಸುತ್ತಿದ್ದಾರೆ.

ಆದರೆ ಕಾಂಗ್ರೆಸ್ ಹಿಂದೂ ಮತ್ತು ಮುಸ್ಲಿಮರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿತ್ತಿದೆ ಎಂದು ಹೇಳಿದ್ದಾರೆ.ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP)ಯನ್ನು ಸೋಲಿಸುವ ಮೂಲಕ ಸಂವಿಧಾನವನ್ನು ರಕ್ಷಿಸಬೇಕು ಎಂದು ಖರ್ಗೆ ಮತದಾರರಿಗೆ ಕರೆ ನೀಡಿದ್ದಾರೆ.

ನಮ್ಮ ದೇಶದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಗೌರವ ಇದೆ. ಎಲ್ಲರೂ ಅವರವರ ನಂಬಿಕೆಯಂತೆ ಅವರ ದೇವರ ಆರಾಧನೆ ಮಾಡ್ತಾರೆ. ರಾಮ ರಾಮ ಎಂದರೆ ಕಾಂಗ್ರೆಸ್ ಸರ್ಕಾರ ಜೈಲಿಗೆ ಹಾಕ್ತಾರೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಮ ಮಂದಿರ (Rama Mandir) ಕ್ಕೆ ಬುಲ್ಡೋಜರ್ ನುಗ್ಗಿಸುತ್ತಾರೆ,

ರಾಮ ರಾಮ ಅಂದವರನ್ನ ಜೈಲಿಗೆ ಹಾಕ್ತಾರೆ ಎಂದು ಆರೋಪಿಸಿದ್ದ ಪ್ರಧಾನಿಯವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ದೇಶದ ಪ್ರಧಾನಿಯಾಗಿ ಈ ರಿತಿ ಮಾತನಾಡುವುದು ಸರಿಯಲ್ಲ. ಇಂತಹ ಚಿಲ್ಲರೆ ಮಾತಾಡುವುದರಿಂದ ಅವರಿಗೂ ಗೌರವ ಸಿಗೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version