ಭದ್ರತಾ ವೈಫಲ್ಯಕ್ಕೆ ಮೋದಿಯೇ ಕಾರಣ – ಮಲ್ಲಿಕಾರ್ಜುನ ಖರ್ಗೆ

ಭದ್ರತಾ ಲೋಪದ ಬಗ್ಗೆಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಘಟನೆಯ ಬಗ್ಗೆ ವಿರೋಧ ಪಕ್ಷದ ನಾಯಕ ಮೋದಿ ಅವರ ಮೇಲೆ ಆರೋಪ ಮಾಡಿದ್ದಾರೆ. ಭದ್ರತಾ ಲೋಪ ಕೇಂದ್ರ ಸರ್ಕಾರದಿಂದಲೇ ಆಗಿದೆ, ಪ್ರಧಾನಿ ನರೇಂದ್ರ ಮೋದಿಯೇ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಪಂಜಾಬ್ ನಲ್ಲಿ ನಡೆಯಬೇಕಿದ್ದ ರ್ಯಾಲಿಯನ್ನು ರದ್ದೂಗೊಳಿಸಿ ಮೋದಿ ಹಿಂತಿರುಗಲು ಅಲ್ಲಿಯ ಭದ್ರತಾ ಲೋಪವೇ ಕಾರಣ ಎಂದು ಕೇಂದ್ರ ಸರ್ಕಾರ ದಾರಿ ತಪ್ಪಿಸುವ ಹೇಳಿಕೆಯನ್ನು ನೀಡುವ ಕೆಲಸವನ್ನು ಮಾಡುತ್ತಿದೆ ಆದರೆ ನಿಜವಾಗಿಯೂ ಭದ್ರತಾ ಲೋಪವಾಗಿರುವುದು ಕೇಂದ್ರದಿಂದಲೇ ಪ್ರಧಾನಿಯವರೇ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಫಿರೋಜ್ ಪುರಕ್ಕೆ ತೆರಳಿದ್ದ ವೇಳೆ ಅಲ್ಲಿ ಕೆಲವು ಪ್ರತಿಭಟನಾಕಾರರು ಅವರನ್ನು ತಡೆದರು ಆದ್ದರಿಂದ ಅವರು ಫ್ಲೈ ಓವರ್ ಮೇಲೆ 20 ನಿಮಿಷಗಳ ಕಾಲ ನಿಲ್ಲಬೇಕಾಯಿತು ಅಲ್ಲದೇ ಅಲ್ಲಿ ಯಾವುದೇ ರೀತಿಯ ಭದ್ರತಾ ವ್ಯವಸ್ತೆಯನ್ನು ಅಲ್ಲಿಯ ಮುಖ್ಯಮಂತ್ರಿ ಯೋಜಿಸದೇ ನಿರ್ಲಕ್ಷ ತೋರಿಸಿದ್ದರು ಆದ್ದರಿಂದ ಮೋದಿ ರ್ಯಾಲಿಯಲ್ಲಿ ರದ್ದುಗೊಳಿಸಿ ಹಿಂತಿರುಗಿದ್ದರು ಎಂದು ಬಿಜೆಪಿ ಆರೋಪವನ್ನು ಮಾಡಿತ್ತು.

ಪಂಜಾಬ್ ಘಟನೆಯ ವಿಚಾರವಾಗಿ ಕೇಂದ್ರ ಸರ್ಕಾರ ಕೇಂದ್ರ ಸಚಿವರು ದಲಿತ ನಾಯಕ ನೇತೃತ್ವದ ಪಂಜಾಬ್ ಸರ್ಕಾರದ ಹೆಸರನ್ನು ಕೆಡಿಸಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಬಿಜೆಪಿ ಈ ಕೆಲಸವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Exit mobile version