500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಗುವಾಹಟಿ : ಅಸ್ಸಾಂನಲ್ಲಿ(Assam) ಸೋಮವಾರ(Monday) ಆಗಸ್ಟ್ 15 ರಂದು ಫುಟ್‌ಬಾಲ್ ಪಂದ್ಯವೊಂದರಲ್ಲಿ 500 ರೂಪಾಯಿಗಳ ಬೆಟ್ಟಿಂಗ್(Betting) ಸೋತ ನಂತರ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಶಿರಚ್ಛೇದ ಮಾಡಿರುವ ಘಟನೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸಂಭವಿಸಿದೆ.

ಆಟದ ಮೇಲೆ ಬೆಟ್ಟಿಂಗ್ ಕಟ್ಟಿದ ಸ್ನೇಹಿತ, ಸೋತ ಬಳಿಕ ಹಣ ಕೊಡುವ ವಿಚಾರವಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಜಗಳ ತಾರಕಕ್ಕೆ ಏರಿದ ಬೆನ್ನಲ್ಲೇ ಸ್ನೇಹಿತನ ಶಿರಚ್ಛೇದ ಮಾಡಿ, ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಫುಟ್‌ಬಾಲ್ ಪಂದ್ಯ ಮುಗಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆಪಾದಿತ ಕೊಲೆಗಾರ ತುನಿರಾಮ್ ಮಾದ್ರಿ, ಆತನ ಸ್ನೇಹಿತ ಬೋಯಿಲಾ ಹೆಮ್ರಾಮ್ ಎಂಬಾತನೊಂದಿಗೆ ಬೆಟ್ಟಿಂಗ್ ಸೋತಿದ್ದ, 500 ರೂ. ಬೆಟ್ಟಿಂಗ್ ಹಣ ಪಾವತಿಸಲು ನಿರಾಕರಿಸಿದ್ದಕ್ಕೆ ಜಗಳವಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು?

ಘಟನೆ ವಿವರ : ಪಂದ್ಯದ ನಂತರ ತುನಿರಾಮ್ ಮಾದ್ರಿ ಮತ್ತು ಬೋಯಿಲಾ ಹೆಮ್ರಾಮ್ ಜಗಳವಾಡಿಕೊಂಡಿದ್ದಾರೆ. ಕೋಪದ ಭರದಲ್ಲಿ ಮಾದ್ರಿ, ಸ್ನೇಹಿತ ಹೇಮ್ರಾಮ್‌ನನ್ನು ಮಚ್ಚಿನಿಂದ ಹತ್ಯೆಗೈದಿದ್ದಾರೆ. ತಲೆಯೊಂದಿಗೆ ಮಾದ್ರಿ ಮನೆಗೆ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಹಿರಿಯ ಸಹೋದರ ಆತನನ್ನು ಹಿಡಿಯಲು ಯತ್ನಿಸಿದನಾದರೂ, ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.

ಬಳಿಕ ತುನಿರಾಮ್ ಮದ್ರಿ 25 ಕಿ.ಮೀ ದೂರ ನಡೆದುಕೊಂಡು ಠಾಣೆಗೆ ಹೋಗಿ ಸ್ನೇಹಿತನ ತಲೆಯೊಂದಿಗೆ ಶರಣಾಗಿದ್ದಾನೆ.
ಬಳಿಕ ಮಚ್ಚನ್ನೂ ಹಸ್ತಾಂತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು “ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಪ್ರಕರಣದ ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version